ಹಂದಿಗುಂದದಲ್ಲಿ ಅ.20ರಂದು ದುರ್ಗಾದೇವಿ ಜಾತ್ರೆ
ಪಾಲಬಾವಿ 15 : ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದ ಆರಾಧ್ಯ ದೇವತೆ ಜಗನ್ಮಾತೆ, ಆದಿಶಕ್ತಿ ದುರ್ಗಾದೇವಿಯ ಜಾತ್ರಾ ಮಹೋತ್ಸವ ಅ.20ರಂದು ಮಂಗಳವಾರ ಸಡಗರ ಸಂಭ್ರಮದಿಂದ ಜರುಗಲಿದೆ.
ಅಂದು ಬೆಳಿಗ್ಗೆ 6 ಗಂಟೆಗೆ ಅರ್ಚಕರಾದ ಸುಭಾಷ ಮೇತ್ರಿ ಹಾಗೂ ಪರಶುರಾಮ ಪೂಜೇರಿ ಅವರಿಂದ ದೇವಿಯ ಕರ್ತೃ ಗದ್ದುಗೆಗೆ ಅಭಿಷೇಕ, ವಿಶೇಷ ಪೂಜೆ, ವಸ್ತ್ರಧಾರಣೆ ಹಾಗೂ ಫಲಪುಷ್ಪ ಮತ್ತು ನೈವೇದ್ಯ ಸಮರೆ್ಣ ನಡೆಯಲಿದೆ.
ಬೆಳಿಗ್ಗೆ 11 ಗಂಟೆಗೆ ಗ್ರಾಮದ ಅಗಸಿಯಿಂದ ಸುಮಂಗಲಿಯರ ಪೂರ್ಣಕುಂಭ, ಆರತಿ ಹಾಗೂ ಡೊಳ್ಳು ಕುಣಿತ, ಹಲಗೆವಾದನ, ಚೌಡಕಿ ಮೇಳ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ದುರ್ಗಾದೇವಿಯ ಪಲ್ಲಕ್ಕಿ ಉತ್ಸವ ವೈಭವದಿಂದ ಜರುಗಲಿದೆ. ಸಂಜೆ 5 ಗಂಟೆಗೆ ದೇವಸ್ಥಾನದ ಪ್ರಭಾಮಂಡಲದ ಮುಂಭಾಗದಲ್ಲಿ ಉರಿಯುವ ಕೆಂಡದ ಮೇಲೆ ನಡೆಯುವ ಕಾರ್ಯಕ್ರಮ ನಡೆಯಲಿದೆ.
ಬಳಿಕ ದಾಸೋಹದ ಮನೆಯಲ್ಲಿ ಅನ್ನಸಂತರೆ್ಣ ಏರಿ್ಡಸಲಾಗಿದೆ ಎಂದು ದುರ್ಗಾದೇವಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಲ್ಲಪ್ಪ ಗಗ್ಗರಿ ಹಾಗೂ ಪ್ರಧಾನ ಕಾರ್ಯದರ್ಶಿ ರಮೇಶ ದೇವರವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.