ಮುಂದಗೋಡ

ಸ್ವಯಂ ಪ್ರೇರಣೆಯಿಂದ ಎಲ್ಲರೂ ರಕ್ತದಾನಕ್ಕೆ ಮುಂದಾಗಬೇಕು: ನ್ಯಾಯಾಧೀಶೆ ಧನವತಿ

ಸ್ವಯಂ ಪ್ರೇರಣೆಯಿಂದ ಎಲ್ಲರೂ ರಕ್ತದಾನಕ್ಕೆ ಮುಂದಾಗಬೇಕು: ನ್ಯಾಯಾಧೀಶೆ ಧನವತಿ

ಮುಂಡಗೋಡ 23: ರಕ್ತದಾನಕ್ಕೆ ಜಾತಿ, ಧರ್ಮದ ಭೇದವಿರುವುದಿಲ್ಲ ರಕ್ತದಾನ ಶಿಬಿರಗಳಿಂದ ರಕ್ತದ ಕೊರತೆ ನೀಗಿಸಬಹುದು ರಕ್ತದಾನದಿಂದ ಒಂದು ಕುಟುಂಬ ಉಳಿಸಿದಂತೆ ಎಂದು ಇಲ್ಲಿನ ಜೆಎಮ್‌ಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಧನವತಿ ಹೇಳಿದರು.  

ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ಆಸ್ಪತ್ರೆ, ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಮೊಹ್ಸಿನ್ ಎ ಆಜಮ್ ಮಿಷನ್ ವತಿಯಿಂದ ಅಸ್ಕರಿ ವೈದ್ಯಕೀಯ ಸೇವೆಯ ಅಡಿಯಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಪಟ್ಟಣದ ತಾಲೂಕು ಆಸ್ಪತ್ರೆಯ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ರಕ್ತದಾನ ಶಿಬಿರದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಕ್ತದಾನ ಮಾಡಿದ ಮೇಲೆ ಅದು ಯಾವ ಧರ್ಮದ್ದು ಅಂತ ಇರುವುದಿಲ್ಲ. ಎಲ್ಲರ ರಕ್ತದ ಬಣ್ಣ ಕೆಂಪೇ ಆಗಿರುತ್ತದೆ. ವೈದ್ಯರು ದೇವರಿದ್ದಂತೆ ಅವರು ನಮ್ಮ ಜೀವ ಉಳಿಸುತ್ತಾರೆ. ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಸ್ವಯಂ ಪ್ರೇರಣೆಯಿಂದ ಎಲ್ಲರೂ ರಕ್ತದಾನಕ್ಕೆ ಮುಂದಾಗಬೇಕು ಎಂದರು.  

ತಾಲೂಕು ಆರೋಗ್ಯ ಅಧಿಕಾರಿ ನರೇಂದ್ರ ಪವಾರ ಮಾತನಾಡಿ ಹೆಚ್ಚಾಗಿ ಹೆರಿಗೆ ಸಮಯದಲ್ಲಿ ತುರ್ತಾಗಿ ರಕ್ತದ ಅವಶ್ಯಕತೆ ತುಂಬಾ ಇರುತ್ತದೆ. ರಕ್ತದ ಕೊರತೆಯಿಂದ ಎಷ್ಟೋ ಬಾರಿ ತಾಯಂದಿರನ್ನು ಕಳೆದುಕೊಂಡಿರುವ ಘಟನೆಗಳು ನಡೆದಿವೆ. ರಕ್ತದಾನ ಮಾಡಿ ಜೀವ ಉಳಿಸಿ ಎಂದರು. ಜಗದೀಶ ಕಾನಡೆ ಉಪನ್ಯಾಸ ನೀಡಿದರು. ತಾಲೂಕು ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಮಹಮ್ಮದ್‌ಸಲೀಮ್ ನಂದಿಕಟ್ಟಿ, ಕಾರ್ಯದರ್ಶಿ ರಾಜಶೇಖರ ಹುಬ್ಬಳ್ಳಿ ಮಾತನಾಡಿದರು.    

ಎಮ್‌ಎಮ್ ಅಧ್ಯಕ್ಷ ಮುಸ್ತಾಕ್‌ಅಹಮ್ಮದ್ ನೆರ್ತಿ ಅಧ್ಯಕ್ಷತೆ ವಹಿಸಿದ್ದರು. ಡಾ.ಶ್ರಿಷ್ಮಾ, ಡಾ.ರಫೀಕ್ ಹವಾಲ್ದಾರ, ಶಕೀಲ್‌ಅಹಮ್ಮದ್ ಖಾಜಿ, ಮಹಮ್ಮದ್‌ಶರೀಫ್ ಲಡ್ಡುಪೀರ್ ಎಮ್‌.ಎನ್‌.ದುಂಡಶಿ, ನೂರ್‌ಅಹಮ್ಮದ್ ಗಡವಾಲೆ, ಬಶೀರ್ ಶೇಖ್, ದಾದಾಪೀರ್ ಪೋಕಾಕಿ, ಎಮ್‌.ಡಿ.ಅತ್ತಾರ, ಸೈಯದ್‌ಮಕಬೂಲ್ ಮಿರ್ಚೋಣಿ, ಎಸ್‌.ಎಮ್‌.ಮಕಾನದಾರ, ಎಚ್‌.ಎಮ್‌.ಕೊರಿಗೇರಿ, ಇಮ್ತಿಯಾಜ್ ನಾಕೆವಾಲೆ, ಡಿ.ಎಮ್‌.ಗುಡುನವರ, ಎ.ಜಿ.ಮುತ್ತಳ್ಳಿ, ಸೈಯದ್‌ಜಮೀರ್ ಹರಿಹರಕರ್, ಎಸ್‌.ಎ.ಬಳ್ಳಾರಿ, ಎಚ್‌.ಬಿ.ಖಲೀಫಾನವರ, ಎಮ್‌.ಐ.ಮಾಲಿವಾಲೆ, ಆಶ್ಪಾಕ್ ಸೋನಾರ್, ಎಮ್‌.ಎಮ್‌.ಹರ್ಕುಣಿ, ಎಸ್‌.ಎಮ್‌.ಸುಂಕದ, ಎ.ಐ.ಸವಣೂರ, ಎ.ಎಮ್‌.ಶಾಬಳ, ಎಮ್‌.ಎಮ್‌.ಬನ್ನೂರ, ಎಸ್‌.ಎ.ಇನಾಮದಾರ, ದಾವಲಮಲ್ಲಿಕ್ ಹಿರೇಹಳ್ಳಿ, ಎನ್‌.ಎಚ್‌.ಬೆಕ್ಕೋಡ, ಮುಸ್ತಾಕ್‌ಅಹಮ್ಮದ್ ಮುಜಾವರ್, ಎಚ್‌.ಐ.ಮುಲ್ಲಾ, ಎಮ್‌.ಎಮ್‌.ಅತ್ತಾರ, ಎಫ್‌.ಎಮ್‌.ಮಿರ್ಚೊಣಿ ಮುಂತಾದವರು ಉಪಸ್ಥಿತರಿದ್ದರು. ಮೌಲಾನಾ ಮುಸ್ತಾಕ್‌ಅಹಮ್ಮದ್ ಪ್ರಾರ್ಥಿಸಿದರು. ಮಹಮ್ಮದ್ ಸಲೀಮ್ ಶೇಖ್ ಸ್ವಾಗತಿಸಿದರು. ವಕೀಲ ಗುಡುಸಾಬ್ ಬಮ್ಮಿಗಟ್ಟಿ ನಿರೂಪಿಸಿ ವಂದಿಸಿದರು. ಒಟ್ಟು 41 ಮಂದಿ ಶಿಬಿರಾರ್ಥಿಗಳು ರಕ್ತದಾನ ಮಾಡಿದರು. 


ಸುದ್ದಿ ಓದಿ