ಪ್ರತಿಯೊಬ್ಬರಿಗೂ ಓದುವ ಹವ್ಯಾಸವಿರಬೇಕು: ಡಾ. ಸ.ಚಿ. ರಮೇಶ
ಹಂಪಿ 23: ಪುಸ್ತಕಗಳನ್ನು ಪ್ರೀತಿಸುವ ಗುಣವಿರಬೇಕು, ಮೂಲಕ ಹವ್ಯಾಸವನ್ನು ರೂಡಿ ಮಾಡಿಕೊಂಡರೆ ಸಮಾಜದಲ್ಲಿ ಉತ್ತಮ ಪ್ರಜೆ ಆಗುವುದರಲ್ಲಿ ಎರಡು ಮಾತಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೂಡ ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುವ ರೂಢಿಯನ್ನು ಮೈಗೂಡಿಸಿಕೊಂಡಾಗ ಅನೇಕ ಚಿಂತನೆಗಳು ನಮಗೆ ಲಭ್ಯವಾಗುತ್ತದೆ ಎಂದು ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಡಾ. ಸ.ಚಿ.ರಮೇಶ ಅವರು ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಅಕ್ಷರ ಗ್ರಂಥಾಲಯದಲ್ಲಿ ಆಯೋಜಿಸಿದ 25ನೇ ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಾಧನೆಯ ಪ್ರಮುಖ ಸಾಧನ ಓದು. ಅಕ್ಷರ ಇಲ್ಲದವನು ಏನನ್ನೂ ಸಾಧಿಸಲಾರ, ಕಾರಣ ಅಕ್ಷರಜ್ಞಾನ ಇದ್ದವನು ಜಗತ್ತನ್ನು ಗೆಲ್ಲಬಲ್ಲ. ಅವರ ಚಿಂತನೆಗಳು ಆಚಾರ-ವಿಚಾರಗಳು ಹಾಗೂ ಮೌಢ್ಯತೆಗಳನ್ನು ಜ್ಞಾನದಿಂದ ಮಾತ್ರ ಬದಲಾಯಿಸಬಹುದು ಹೊರತು, ಅಜ್ಞಾನದಿಂದಲ್ಲ ಈ ನಿಟ್ಟಿನಲ್ಲಿ ಗ್ರಂಥಪಾಲಕರುಗಳು ವಿದ್ಯಾರ್ಥಿ ಸ್ನೇಹಿಯಾಗಿ ಅವರಿಗೆ ಓದುವ ಅಭಿರುಚಿಯನ್ನು ಹೆಚ್ಚಿಸಬೇಕು ಆದರೆ ಮಾತ್ರ ವಿದ್ಯಾರ್ಥಿಗಳು ಹೆಚ್ಚೆಚ್ಚು ಗ್ರಂಥಾಲಯಗಳಿಗೆ ಭೇಟೀನೀಡಿ ಓದುವ ಅಭಿರುಚಿಯನ್ನು ಮೈಗೂಡಿಸಿಕೊಳ್ಳುತ್ತಾರೆ ಎಂದು ತಿಳಿಸಿದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ಎ. ಸುಬ್ಬಣ್ಣ ರೈ ಅವರು ಮಾತನಾಡಿ ಪುಸ್ತಕಗಳನ್ನು ಸರಿಯಾದ ಕ್ರಮದಲ್ಲಿ ಬಳಸಬೇಕು ಆದಾಗ ಮಾತ್ರ ನಾವು ಓದುವ ರೂಢಿಯನ್ನು ಹೆಚ್ಚು ಮಾಡಿಕೊಳ್ಳಬಹುದು ಈ ನಿಟ್ಟಿನಲ್ಲಿ ಕನ್ನಡ ವಿಶ್ವವಿದ್ಯಾಲಯ ಅಕ್ಷರ ಗ್ರಂಥಾಲಯದ ಮೂಲಕ, ನಾಡಿನ ಜ್ಞಾನವನ್ನು ಪ್ರಪಂಚಕ್ಕೆ ಪರಿಚಯಿಸುವ ಕೆಲಸ ಮಾಡುತ್ತಿದೆ ವಿದ್ಯಾರ್ಥಿಗಳು ಒಂದೇ ಅಲ್ಲ ಜನಸಾಮಾನ್ಯರು ಕೂಡ ಓದುವ ಹವ್ಯಾಸವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಹೆಚ್ಚು ಕ್ರಿಯಾಶೀಲರಾಗಿ ಇರಬಹುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕನ್ನಡ ವಿಶ್ವವಿದ್ಯಾಲಯದ ಅಕ್ಷರ ಗ್ರಂಥಾಲಯದ ಮುಖ್ಯ ಗ್ರಂಥಪಾಲಕ ಡಾ. ಸಿ.ಆರ್ ಗೋವಿಂದರಾಜ್ ಅವರು ಮಾತನಾಡಿ ಯುನೆಸ್ಕೋ 25ನೇ ವಿಶ್ವ ಪುಸ್ತಕ ದಿನಾಚರಣೆಯನ್ನು ಪ್ರಪಂಚದಾದ್ಯಂತ ಆಚರಣೆ ಮಾಡ್ತಾಯಿದೆ, ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಪುಸ್ತಕದ ಪ್ರೇಮಿಯಾಗಬೇಕು ಆಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ವಿದ್ಯಾರ್ಥಿಗಳು ಒಂದೇ ಜ್ಞಾನ ವಲಯದಲ್ಲಿ ನೋಡದೆ ಬಹುಶಿಸ್ತೀಯ ನೆಲೆಯಲ್ಲಿ ಓದುವ ಕೌಶಲ್ಯವನ್ನು ಹೊಂದಿರಬೇಕು. ಆಗ ಉತ್ತಮ ಸಂಪನ್ಮೂಲ ವ್ಯಕ್ತಿಯಾಗಿ ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು
ಸಹಾಯಕ ಗ್ರಂಥಪಾಲಕ ಸುಹಾಸ್ ಎಸ್ ಅವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು ಈ ಕಾರ್ಯಕ್ರಮದಲ್ಲಿ ಸಹಾಯಕ ಗ್ರಂಥಪಾಲಕ ಡಾ.ಯು. ಮಲ್ಲಿಕಾರ್ಜುನ, ಡಾ.ಎಮ್.ಸಿ.ಗುಡಿಮನಿ ಹಾಗೂ ಗ್ರಂಥಾಲಯ ಸಹಾಯಕ ಹರ್ಷ, ಮೇಘನ, ಗ್ರಂಥಾಲಯದ ಸಿಬ್ಬಂದಿಗಳು ಹಾಗೂ ಆಡಳಿತ ಸಿಬ್ಬಂದಿಗಳು ಉಪಸ್ಥಿತಿಯಿದ್ದರು.