‘ಪ್ರತಿಯೊಬ್ಬರೂ ಸರ್ಕಾರದ ನಿಯಮಗಳನ್ನು ಪಾಲಿಸಿ’
ಬೈಲಹೊಂಗಲ 14: ಪ್ರತಿಯೊಬ್ಬರೂ ಸರ್ಕಾರದ ನಿಯಮಗಳನ್ನು ಪಾಲಿಸಿ ಆರೋಗ್ಯವಂತರಾಗಿ ಉತ್ತಮ ಜೀವನ ನಡೆಸಬೇಕು ಎಂದು ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಹೇಳಿದರು. ಅವರು ಪಟ್ಟಣದ ಶ್ರೀಮಾತಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ತಾಲೂಕಿನ ಅರ್ಚಕರಿಗೆ ಆಹಾರದ ದಿನಸಿ ಕೀಟಗಳನ್ನು ವಿತರಿಸಿ ಮಾತನಾಡಿ, ಮಹಾಮಾರಿ ರೋಗ ಹರಡಿರುವ ಸಂದರ್ಭದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ತಾಲೂಕಿನ ಅರ್ಚಕರಿಗೆ ದೇವಸ್ಥಾನದ ಆರಾಧಕ ಡಾಮಹಾಂತೇಶ ಶಾಸ್ತ್ರಿಗಳು ಆಹಾರದ ಕಿಟ್ ಗಳನ್ನು ವಿತರಿಸುವ ಕಾರ್ಯ ಶ್ಲಾಘನೀಯಾವಾಗಿದೆ ಎಂದರು.
ದೇವಸ್ಥಾನದ ಧರ್ಮದರ್ಶಿ ಡಾ.ಮಹಾಂತಯ್ಯ ಶಾಸ್ರ್ತಿ ಆರಾದ್ರಿಮಠ, ಸಿಪಿಐ ಉಳವಪ್ಪ ಸಾತೇನಹಳ್ಳಿ, ಸೋಮನಾಥ ಸೊಪ್ಪಿಮಠ ಸೇರಿದಂತೆ ತಾಲೂಕಿನ ಅರ್ಚಕರು ಇದ್ದರು.