ಮುಂದಗೋಡ

ಎಲ್ಲರಿಗೂ ಸಮಾನ ಸ್ಥಾನಮಾನ, ಶಿಕ್ಷಣ, ಸಬಲೀಕರಣದ ಅವಕಾಶ ನೀಡಬೇಕು : ದೀಪಾ

ಎಲ್ಲರಿಗೂ ಸಮಾನ ಸ್ಥಾನಮಾನ, ಶಿಕ್ಷಣ, ಸಬಲೀಕರಣದ ಅವಕಾಶ ನೀಡಬೇಕು : ದೀಪಾ

ಮುಂಡಗೋಡ:ಮಕ್ಕಳಲ್ಲಿ ಲಿಂಗ ತಾರತಮ್ಯ ಮಾಡದೇ ಎಲ್ಲರಿಗೂ ಸಮಾನವಾದ ಸ್ಥಾನಮಾನ, ಶಿಕ್ಷಣ, ಸಬಲೀಕರಣದ ಅವಕಾಶ ನೀಡಬೇಕು ಎಂದು ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೀಪಾ ಬಂಗೇರ ಹೇಳಿದರು.  

ತಾಲೂಕಿನ ಮಳಗಿ ಗ್ರಾಮದ ಕೆಪಿಎಸ್ ಪ್ರಥಮ ದರ್ಜೆ ಕಾಲೇಜು, ಕಿಡ್ಸ್‌ ಸಂಸ್ಥೆ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಮಳಗಿ ಕೆಪಿಎಸ್ ಪ್ರಥಮ ದರ್ಜೆ ಕಾಲೇಜು ಸಭಾಭವನದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಎಸ್‌ಐ ಗೀತಾ ಅವರು ವಿದ್ಯಾರ್ಥಿನಿಯರಿಗೆ ಉಚಿತ ಕರೆ ಹಾಗೂ ಕಾನೂನಿನ ಬಗ್ಗೆ ತಿಳಿಸಿದರು. ಕಿಡ್ಸ್‌ ಸಂಸ್ಥೆಯ ನಿರ್ದೇಶಕರಾದ ಅಶೋಕ ಯರಗಟ್ಟಿ ಅವರು ಮಹಿಳೆಯರ ಸಶಕ್ತೀಕರಣ ಹಾಗೂ ಮಕ್ಕಳ ಶಿಕ್ಷಣ ಬಗ್ಗೆ ಒತ್ತು ನೀಡುವ ಬಗ್ಗೆ ತಿಳಿಸಿದರು.  ಕೆಪಿಎಸ್ ಕಾಲೇಜಿನ ಪ್ರಾಂಶುಪಾಲರಾದ ಗಣೇಶ ಅವರು ಗಂಡು-ಹೆಣ್ಣು ಸಮಾನತೆ ಹಾಗೂ ಎಲ್ಲರಿಗೂ ಶಿಕ್ಷಣ ಅವಶ್ಯಕತೆ ಇದೆ ಎಂದು ಹೇಳಿದರು. ಕಾಲೇಜಿನ ವಿದ್ಯಾರ್ಥಿನಿಯರು ಸುಸ್ಥಿರ ನಾಳೆಗಾಗಿ ಲಿಂಗಸಮಾನತೆ ಬಗ್ಗೆ ಮಾತನಾಡಿದರು. ಕಿಡ್ಸ್‌ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಪಂಕಜ ಕಲ್ಮಠ ಅವರು ಪಾಸ್ತಾವಿಕ ನುಡಿಗಳನ್ನು ಆಡಿದರು.  

ಇದೇ ಸಂದರ್ಭದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಏರಿ​‍್ಡಸಲಾಗಿದ್ದ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.  

ಕಾರ್ಯಕ್ರಮದಲ್ಲಿ ಮಳಗಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪ್ರದೀಪ ಕೊಳಗಿ, ಕಿಡ್ಸ್‌ ಸಂಸ್ಥೆಯ ವಿಶಾಲಾಕ್ಷೀ ರಾಣಿಗೇರ, ಕಾಲೇಜಿನ ಪ್ರಾಧ್ಯಾಪಕರು, ಅಂಗನವಾಡಿ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು 150ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಸ್ವಾಗತ, ಕಾರ್ಯಕ್ರಮ ನಿರೂಪಣೆ ಮತ್ತು ವಂದನಾರೆ​‍್ಣ ಮಾಡಿದರು. ಅಂಗನವಾಡಿ ಕಾರ್ಯಕರ್ತೆಯರ ಕಿರುನಾಟಕ ಹಾಗೂ ಜಾಗೃತಿ ಗೀತೆಗಳು ಮನಸೂರೆಗೊಂಡವು. 


ಸುದ್ದಿ ಓದಿ