ಬಳ್ಳಾರಿ

ಪ್ರತಿಯೊಬ್ಬರು ಶಿಕ್ಷಣ ಪಡೆದು ಸಮಾಜದ ಅಭಿವೃದ್ದಿಗೆ, ದೇಶಕ್ಕಾಗಿ ಸೇವೆ ಸಲ್ಲಿಸಬೇಕು: ಅಲ್ ಹಾಜ್ ಹಜರತ್ ಸೈಯದ್ ಶಾ

ಪ್ರತಿಯೊಬ್ಬರು ಶಿಕ್ಷಣ ಪಡೆದು ಸಮಾಜದ ಅಭಿವೃದ್ದಿಗೆ, ದೇಶಕ್ಕಾಗಿ ಸೇವೆ ಸಲ್ಲಿಸಬೇಕು: ಅಲ್ ಹಾಜ್ ಹಜರತ್ ಸೈಯದ್ ಶಾ
ಗೌಸೆ ಆಜಮ್ ಮಹೆಬೂಬ್ ಸುಬಾನಿ ಗ್ಯಾರವಿ ಷರೀಫ್ ಹಾಗೂ ಖ್ವಾಜಾ ನಿಜಾಮುದ್ದೀನ್ ಮೊಹಮ್ಮದ್  ಔಲಿಯ ಮಹೆಬೂಬೆ ಇಲಾಹಿ ಉರುಸ್ ಮುಬಾರಕ್ 
ಸಿರುಗುಪ್ಪ - ಸಮಾಜದ ಪ್ರತಿಯೊಬ್ಬರು ಶಿಕ್ಷಣ ಪಡೆದು ಸಮಾಜದ ಅಭಿವೃದ್ದಿಗೆ  ಮತ್ತು ದೇಶಕ್ಕಾಗಿ ಸೇವೆ ಸಲ್ಲಿಸಬೇಕು ಎಂದು  ತೆಕ್ಕಲಕೋಟೆ ಜಮೀನ್ದಾರ್ ಬಳ್ಳಾರಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಉಪಾಧ್ಯಕ್ಷರು ಅಲ್ ಹಾಜ್ ಹಜರತ್ ಸೈಯದ್ ಶಾ   ಮೊಹಿಯುದ್ದೀನ್ ಖಾದ್ರಿ ಸಾಹೇಬ್ ಅವರು ಹೇಳಿದರು. ಬಳ್ಳಾರಿ ಮಹಾನಗರದ ಮೋಕಾ ರಸ್ತೆ ಮಸ್ಜಿದೆ ಮಹೆಬೂಬಿಯ ಅಶ್ರಫಿ ಮೊಹಲ್ಲಾದ   ಕರ್ನಾಟಕ ವಕ್ಫ್ ಬೋರ್ಡ್ ಜಿಲ್ಲಾ ಮಾಜಿ ಸದಸ್ಯರಾದ ಸಾಮಾಜಿಕ ಕಾರ್ಯಕರ್ತರಾದ ಅಲ್ಹಾಜ್ ಅಬ್ದುಲ್ ನಬಿ ಚಿಸ್ತಿ ನಿಜಾಮಿ ಅವರ  ಪುತ್ರ ಮಹಮ್ಮದ್ ರಫಿ ನಿಜಾಮಿ ಅವರ ನಿವಾಸದಲ್ಲಿ  ಹಜರತ್ ಗೌಸೆ ಆಜಮ್ ಮಹಿಬೂಬ ಸುಬಾನಿ ಗ್ಯಾರವಿ ಷರೀಫ್ ಮತ್ತು ಹಜರತ್ ಖ್ವಾಜಾ ನಿಜಾಮುದ್ದೀನ್ ಮಹಮ್ಮದ್ ಅವುಲಿಯಾ ಮಹೆಬೂಬ್ ಇಲಾಹಿ ಅವರ ಉರೂಸ್ ಮುಬಾರಕ್ ಅಂಗವಾಗಿ ಅವರು ಮಾತನಾಡುತ್ತಾ, ಹಜರತ್ ಖ್ವಾಜಾ ನಿಜಾಮುದ್ದೀನ್ ಅಲ್ಲಾಹ್ ರಸೂಲರ ಬಗ್ಗೆ ಅಪಾರ ಪ್ರೀತಿಯನ್ನು ಭಕ್ತಿಯನ್ನು ಹೊಂದಿದ್ದ ಒಬ್ಬ ಪ್ರಸಿದ್ಧ ಸೂಫಿ ಸಂತ ರಾಗಿದ್ದರೂ ಹದಿಮೂರನೇ ಶತಮಾನದ ಈ ದಿವ್ಯ ಪುರುಷ ಮಾನವೀಯತೆಗೆ ಇನ್ನೊಂದು ಹೆಸರೇ ಎನಿಸಿದ್ದು ದಯೆ ಮತ್ತು ಕರುಣೆಯ ಪ್ರತೀಕರಾಗಿದ್ದರು. ಹಜರತ್ ನಿಜಾಮುದ್ದೀನ್ ಅವರು ಕೊನೆಯವರೆಗೂ ಅವಿ ವಾಹಿತ ರಾಗಿ ಸದಾ ಸಮಾಜದ ಸುಖ ಶಾಂತಿಯನ್ನು ಬಯಸುತ್ತಿದ್ದರು. ಅವರಿಗೆ ಅಪಾರ ಸಂಖ್ಯೆಯ ಶಿಷ್ಯರಿದ್ದಾರೆ ಅವರ ಕಾಲದ ಎಲ್ಲಾ ಸುಲ್ತಾನರು ನಿಜಾಮುದ್ದೀನರ ಬಗ್ಗೆ ಭಕ್ತಿ ಮತ್ತು ಶ್ರದ್ಧೆಯನ್ನಿಟ್ಟು  ಕೊಂಡಿದ್ದರು.  ನಿಜಾಮುದ್ದೀನ್ ಅವರು ಮುಸಲ್ಮಾನರಿಗೆ ಅಷ್ಟೇ ಅಲ್ಲ ಎಲ್ಲಾ ವರ್ಗದವರಿಗೂ ಸರಳತೆಯ ಪ್ರೀತಿ ವಿಶ್ವಾಸದಿಂದ ಪ್ರತಿಯೊಬ್ಬರು ಸನ್ಮಾರ್ಗ ದಲ್ಲಿ ನಡೆಯಬೇಕು ಎಂದು ಹೇಳುತ್ತಿದ್ದರು ಎಂದು ಮೊಹಿಯುದ್ದೀನ್ ಖಾದ್ರಿ ಅವರು ಹೇಳಿದರು.
ಅಲ್ಹಾಜ್ ಮುಹಮ್ಮದ್ ಇಬ್ರಾಹಿಂ ನಿಜಾಮಿ,  ಮೊಹಮ್ಮದ್ ನೌಶಾದ್ ಅಲಿ ನಿಜಾಮಿ, ಬಿ ಮೊಹಮ್ಮದ್ ಗೌಸ್,  ಎ ಮೊಹಮ್ಮದ್ ಹಾಜಿ ,ಬಂಧು ಬಳಗ ಮಿತ್ರರು ಭಾಗವಹಿಸಿದ್ದರು. ಮಸೀದಿಯ ಆಫೀಸ್ ಇಮಾಮರು ಖುರಾನ್ ಫಾತಿಹಾ  ಸಲಾತೊ ಸಲಾಂ ನೊಂದಿಗೆ ದುವಾ ಆಶೀರ್ವಚನ ಮಾಡಿದರು ಸರ್ವರಿಗೂ ಪ್ರಸಾದ ಔತಣ ಕೂಟ ಊಟದ ವ್ಯವಸ್ಥೆ ಮಾಡಲಾಗಿತ್ತು .

ಸುದ್ದಿ ಓದಿ