ಪ್ರತಿಯೊಬ್ಬರು ಮಧುಮೇಹ ರೋಗದ ಬಗ್ಗೆ ತಿಳಿಯುವುದು ಅಗತ್ಯ
ಇಂಡಿ 14: ಮಧುಮೇಹ ರೋಗದ ಬಗ್ಗೆ ಪ್ರತಿಯೊಬ್ಬರು ತಿಳಿಯಬೇಕಾದ ಅಗತ್ಯವಿದೆ. ಅದರ ಬಗ್ಗೆ ತಿಳಿದುಕೊಂಡು ಮಧುಮೇಹ ಮುಕ್ತ ಸಮಾಜ ನಿರ್ಮಾಣವಾಗಬೇಕಿದೆ ಎಂದು ಬಿಎಲ್ಡಿಇ ವೈದ್ಯಕೀಯ ಮಹಾವಿದ್ಯಾಲಯದ ಡಾ. ಮಂಜುನಾಥ ಕೊಟೆಣ್ಣನವರ ಹೇಳಿದರು.
ಭಾನುವಾರ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ಹಾಗು ಸರಕಾರಿ ಆಸ್ಪತ್ರೆ ಇಂಡಿ, 1989 ರಲ್ಲಿ ಇಂಡಿಯ ಶಾಂತೇಶ್ವರ ಶಾಲೆಯಲ್ಲಿ ಎಸ್ಎಸ್ಎಲ್ಸಿ ಓದಿದ ಗೆಳೆಯರ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ಮಧುಮೇಹ ದಿನಾಚರಣೆ ನಿಮಿತ್ಯ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಿಪಿಟಿ ಮೂಲಕ ರೋಗಿಗಳಿಗೆ ತಿಳಿ ಹೇಳಿದರು.
ಬದಲಾದ ಆಹಾರ ವಿಧಾನ, ದೈಹಿಕ ಚಟುವಟಿಕೆಯಿಂದಾಗಿ ಸಕ್ಕರೆ ಕಾಯಿಲೆ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಅನುವಂಶೀಯವಾಗಿ ಮಕ್ಕಳಲ್ಲಿ, ನಿತ್ಯ ಬದಲಾದ ಸ್ಥಿತಿಯಿಂದಾಗಿ ವಯಸ್ಕರಲ್ಲಿ ಕಾಣಿಸಿಕೊಳ್ಳುವ ರೋಗವಾಗಿದೆ ಎಂದರು.
ಸರಕಾರಿ ಆಸ್ಪತ್ರೆಯ ಚಿಕ್ಕ ಮಕ್ಕಳ ತಜ್ಞ ಡಾ. ವಿಪುಲ್ ಕೋಳೆಕರ ಮಾತನಾಡಿ ಕೊರೊನಾ ಚಿಕಿತ್ಸೆಗೆ ಒಳಗಾದ ಮಧುಮೇಹಿಗಳ ಅಹಾರ ವಿಧಾನ, ಐಶೋಲೇಶನ್ ಅವಧಿಯ ದಿನ ನಿತ್ಯದ ಚಟುವಟಿಕೆಯಿಂದಾಗಿ ದೇಹಧ ಸಮತೋಲನ ಬದಲಾಗಿರುತ್ತದೆ. ಹೀಗಾಗಿ ಮಧುಮೇಹಿಗಳು ಹೆಚ್ಚಿನ ಎಚ್ಚರಿಕೆ ಕ್ರಮಗಳನ್ನು ಕೈಕೊಳ್ಳಬೇಕಾಗುತ್ತದೆ ಎಂದರು.
ಡಾ. ಶ್ರೀಧರ ಪಾಟೀಲ ,ಡಾ.ಸೋಯನ್, ಡಾ. ಜಗದೀಶ ಬಿರಾದಾರ,ಡಾ. ಕಲ್ಲೇಶಿ ಭಜಂತ್ರಿ, ರಮೇಶ ಕುಲಕರ್ಣಿ ಮಾತನಾಡಿದರು.
250 ಜನರಿಗೆ ತಪಾಸಣೆ ನೀಡಿ ಅವರಿಗೆ ಸಲಹೆಗಳನ್ನು ನೀಡಿದರು. ಸುರೇಶ ಅವರಾದಿ, ದಶರಥ ಕೋರಿ, ಬಸವರಾಜ ದೇವರ,ರವಿ ವಂದಾಲ, ಶಿವಾನಂದ ಚಿಕ್ಕಬೇವನೂರ, ಗೀತಾ ಕುಲಕರ್ಣಿ, ರಾಜಕುಮಾರ ನಾಯಕ, ಲಲಿತಾ ಅಂಗಡಿ, ವಿಜಯಲಕ್ಷ್ಮೀ ಬಿರಾದಾರ ಮತ್ತಿತರಿದ್ದರು.