ಪ್ರತಿಯೊಬ್ಬರಿಗೂ ಜಿಎಸ್ಟಿಯ ಬಗ್ಗೆ ಮಾಹಿತಿ ಅಗತ್ಯವಿದೆ; ನಾಗಿರೆಡ್ಡಿ
ಬಳ್ಳಾರಿ 05: ಪ್ರತಿ ವ್ಯವಹಾರದಲ್ಲೂ ಜಿಎಸ್ಟಿ ತೆರಿಗೆ ಪಾವತಿಯು ಕಡ್ಡಾಯವಾಗಿದ್ದು ಪ್ರತಿಯೊಬ್ಬರಿಗೂ ಈ ವಿಷಯದ ಮಾಹಿತಿ ಮತ್ತು ಜ್ಞಾನದ ಅಗತ್ಯವಿದೆ ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಅವರು ತಿಳಿಸಿದ್ದಾರೆ. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಹಾಗೂ ಚೇತನ್ ಇನ್ಸಿಟ್ಯೂಟ್ ಆಫ್ ಬ್ಯುಸಿನೆಸ್ ಸೆಢಲ್ಯುಷನ್ಸ್ನ ಜಂಟಿ ಆಶ್ರಯದಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ನಡೆದ ‘ಜಿಎಸ್ಟಿ ಜಾಗೃತಿ’ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ತೆರಿಗೆ ಪಾವತಿ ಮತ್ತು ತೆರಿಗೆ ಸಂಗ್ರಹದಲ್ಲಿ ಜಿಎಸ್ಟಿಯನ್ನು ಜಾರಿ ಮಾಡಿದೆ. ಜಿಎಸ್ಟಿ ತೆರಿಗೆಯು ನಿರಂತರ ಬದಲಾವಣೆ ಆಗುತ್ತಿದ್ದು ಈ ಕುರಿತು ಗ್ರಾಹಕರು ಮತ್ತು ವ್ಯಾಪಾರಿಗಳು - ವಾಣಿಜ್ಯೋದ್ಯಮಿಗಳು ಮಾಹಿತಿಯನ್ನು ನಿರಂತರ ಪಡೆದು, ದೈನಂದಿನ ವ್ಯವಹಾರಗಳಲ್ಲಿ ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ‘ಜಿಎಸ್ಟಿ ಜಾಗೃತಿ’ ಶಿಬಿರ ಸಾಕಷ್ಟು ನೆರವಾಗಲಿದೆ ಎಂದರು. ಸಂಪನ್ಮೂಲ ವ್ಯಕ್ತಿಯಾಗಿರುವ ಗೋಪಾಲಕೃಷ್ಣ ಅವರು, ಜಿಎಸ್ಟಿಯು ತೆರಿಗೆಯ ಪ್ರಮುಖ ಭಾಗವಾಗಿದೆ. ಜಿಎಸ್ಟಿ ಪಾವತಿಯಲ್ಲಿ ಅನೇಕರು ಗೊಂದಲಕ್ಕೀಡಾಗುತ್ತಿದ್ದಾರೆ. ತಾಂತ್ರಿಕವಾಗಿ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.
ಜಿಎಸ್ಟಿ ತೆರಿಗೆಯ ಪ್ರಮಾಣವನ್ನು ನಿಗಧಿ ಮಾಡುವಲ್ಲೂ ಅನೇಕ ರೀತಿಯ ಸಂಶಯಗಳಿಗೆ ಈಡಾಗುತ್ತಿದ್ದಾರೆ. ಇಂಥಹಾ ಸಮಸ್ಯೆಗಳನ್ನು ನಿವಾರಿಸಲಿಕ್ಕಾಗಿ ಈ ಶಿಬಿರವು ಸಾಕಷ್ಟು ನೆರವಾಗಲಿದೆ ಎಂದರು. ಚೇತನ್ ಇನ್ಸಿಟ್ಯೂಟ್ ಆಫ್ ಬ್ಯುಸಿನೆಸ್ ಸೆಢಲ್ಯುಷನ್ಸ್ನ ಮನೋಹರ್ ಚೌವ್ಹಾಣ್ ಅವರು, ಜಿಎಸ್ಟಿ ತೆರಿಗೆಯ ತರಬೇತಿಯಲ್ಲಿ ನಮ್ಮ ಸಂಸ್ಥೆಯು ಸದಾಕಾಲ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೆರವನ್ನು ಪಡೆಯುತ್ತಿದೆ. ಈ ನಿಟ್ಟಿನಲ್ಲಿ ಸಹಕಾರ ನೀಡುತ್ತಿರುವ ಸಂಸ್ಥೆಗೆ ಕೃತಜ್ಞತೆಗಳು ಎಂದರು. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾದ ಅವ್ವಾರು ಮಂಜುನಾಥ್, ನಿಕಟಪೂರ್ವ ಅಧ್ಯಕ್ಷ ಬಿ. ಮಹಾರುದ್ರಗೌಡರು, ಉಪಾಧ್ಯಕ್ಷರಾದ ಎಸ್. ದೊಡ್ಡನಗೌಡ ಮತ್ತು ಸೊಂತ ಗಿರಿಧರ್, ಜಂಟಿ ಕಾರ್ಯದರ್ಶಿಗಳಾದ ವಿ. ರಾಮಚಂದ್ರ, ಟ್ಯಾಲಿ ಪ್ರೈಮ್ ಸಂಸ್ಥೆಯ ರವಿ ಅವರು ವೇದಿಕೆಯಲ್ಲಿದ್ದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶ ಬಾಬು ಅವರು ವಂದನಾರೆ್ಣ ಸಲ್ಲಿಸಿದರು. ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು, ಉದ್ಯಮಿಗಳು ಮತ್ತು ಲೆಕ್ಕಪಾಲಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಟ್ಯಾಕ್ಸ್ ಬಾರ್ ಅಸೋಸಿಯೇಷನ್, ಆಡಿಟ್ ರಗಳು,ಅಸೋಸಿಯೇಷನ್, ಕಾಟನ್ ಅಸೋಸಿಯೇಷನ್, ಎಪಿಎಂಸಿ ವರ್ತಕರ ಸಂಘ, ಬಳ್ಳಾರಿ ಜಿಲ್ಲಾ ಇಂಡಸ್ಟ್ರಿಯಲ್ ಅಸೋಸಿಯೇಷನ್, ಕೋಲ್ಡ್ ಸ್ಟೋರೇಜ್ ಅಸೋಸಿಯೇಷನ್ನವರು, ಇನ್ನು ಇತರೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.