ಹೊಸ ವಿಷಯಗಳನ್ನು ಕಲಿಯುವ ಆಸಕ್ತಿ ಎಲ್ಲರಲ್ಲೂ ಇದೆ:ಮಹಾನಂದಾ
ಲೋಕದರ್ಶನ ವರದಿ
ಮುಂಡಗೋಡ:ಸಂಸ್ಥೆಯ ಕೆಲಸ ಕಾರ್ಯಗಳಲ್ಲಿ ಸಣ್ಣದು ದೊಡ್ಡದು ಎಂಬ ಭಾವನೆ ಬೇಡ ಅಳಿಲು ಸೇವೆ ಮಾಡಿದರೆ ಸಾಕು ಹೊಸ-ಹೊಸ ವಿಷಯಗಳನ್ನು ಕಲಿಯಬೇಕು ಎಂಬ ಆಸಕ್ತಿ ಎಲ್ಲರಲ್ಲೂ ಇದೆ ಎಂದು ಇನ್ನರ್ ವ್ಹೀಲ್ ಕ್ಲಬ್ನ ಜಿಲ್ಲಾ ಚೇರ್ಮನ್ ಮಹಾನಂದಾ ಚಂದರಗಿ ಹೇಳಿದರು.
ಇಲ್ಲಿನ ಇನ್ನರ್ ವ್ಹೀಲ್ ಕ್ಲಬ್ ಕಚೇರಿಗೆ ರವಿವಾರ ಭೇಟಿ ನೀಡಿ ಪಟ್ಟಣದ ಹುಬ್ಬಳ್ಳಿ ರಸ್ತೆಯಲ್ಲಿರುವ ಟ್ರಿನಿಟಿ ಹಾಲ್ನಲ್ಲಿ ಜರುಗಿದ ಸಾರ್ವಜನಿಕ ಕಾರ್ಯಕ್ರಮವನ್ನು ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು. ಕೇವಲ ಒಂದು ವರ್ಷದ ಕಡಿಮೆ ಅವಧಿಯಲ್ಲಿ ಹೊಸ ಹೊಸ ಯೋಜನೆಗಳನ್ನು ತುಂಬಾ ಚೆನ್ನಾಗಿ ಅಭಿವೃದ್ಧಿ ಮಾಡಿದ್ದಾರೆ. ಎಲ್ಲರಲ್ಲಿ ಆ ಸಾಮರ್ಥ್ಯ ಕೂಡ ಇದೆ. ನಮ್ಮ ಸಂಸ್ಥೆಯಲ್ಲಿ ಯುವಕರು ಕಾಲೇಜ್ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತುಂಬಾ ವಿಭಿನ್ನವಾದ ಯೋಜನೆಗಳನ್ನು ಮಾಡುತ್ತಿದ್ದಾರೆ. ಕಾರ್ಯದರ್ಶಿ ದಿವ್ಯಾ ರಾವ್ ತುಂಬಾ ಕಾರ್ಯಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಜು.1ರಂದು ಸ್ಥಾಪನೆ ಮಾಡಿದ ಅಂತಾರಾಷ್ಟ್ರೀಯ ಇನ್ನರ್ ವ್ಹೀಲ್ ಡಾಕ್ಟರ್ಸ ಕ್ಲಬ್ನಲ್ಲಿ ಎಲ್ಲ ಸದಸ್ಯರು ಡಾಕ್ಟರ್ಸಗಳಿದ್ದಾರೆ. ಕೇವಲ ಇಂಜಿನಿಯರ್ಸ ಇರುವ ಕ್ಲಬ್ ಕೂಡ ಮಾಡಿದ್ದು 30 ಇಂಜಿನಿಯರ್ಸ ಮತ್ತು ಉಪನ್ಯಾಸಕರು ಇದ್ದಾರೆ. ಇದರಿಂದ ಬೇರೆಯರಿಗೆ ಪ್ರೇರಣೆಯಾಗಲು ಅಧ್ಯಕ್ಷರಿಂದ ಪತ್ರ ಬಂದಿದ್ದು ಇದನ್ನು ಮ್ಯಾಗಝಿನ್ಗೆ ಕಳುಹಿಸುವುದಾಗಿ ಹೇಳಿದ್ದಾರೆ. ಸಂಸ್ಥೆ ಒಂದು ಕುಟುಂಬವಾಗಿದೆ. ಸಂಸ್ಥೆಗೆ ಅರ್ಹ ಸದಸ್ಯತ್ವ ಮಾಡಿಕೊಳ್ಳಬೇಕು. ಸದಸ್ಯರ ಸಂಖ್ಯೆ ಇನ್ನೂ ಹೆಚ್ಚು ಮಾಡಬೇಕು. ಶಿಸ್ತುಬದ್ಧವಾಗಿ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಅಧ್ಯಕ್ಷರಿಗೆ ಎಲ್ಲ ಸದಸ್ಯರು ಸಹಕಾರ ನೀಡಿ ತಮ್ಮನ್ನು ತೊಡಗಿಸಿಕೊಂಡು ಸಂಸ್ಥೆ ಬೆಳೆಸಲು ಕೈಜೋಡಿಸಬೇಕು ಎಂದರು.
ನಿಕಟಪೂರ್ವ ಅಧ್ಯಕ್ಷೆ ಶಶಿರೇಖಾ ಬೈಜು, ಎಡಿಟರ್ ಶಾಲಿನಿ ಮದಭಾವಿ, ಖಜಾಂಚಿ ಮಂಜುಳಾ ಇಂಗಳೆ, ಐಎಸ್ಒ ಸಿಂಧು ಥಾಮಸ್, ಹರಿಣಿ ಪ್ರಸಾದ, ನೇಹಾ ಕಲಾಲ, ಸೀಮಾ ಡಿ.ಎಸ್., ಸೆಲ್ವಿನ್ ರಾಜಾ ಜೇಮ್ಸ್, ಡಾ.ಶಿವಪ್ರಭು ಚಂದರಗಿ ಡಾ.ಪಿ.ಪಿ.ಛಬ್ಬಿ, ಪ್ರಶಾಂತ ಬಾಡಕರ, ಮಹೇಶ ಹೆಗಡೆ, ದೀಪಕ ಮಹಾಲೆ, ಬೈಜು ವಿ.ಜೆ., ಶಾಜಿ ಥಾಮಸ್, ರಾಘವೇಂದ್ರ ತಲಗೇರಿ ಮತ್ತು ಕ್ಲಬ್ನ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ದಿವ್ಯಾ ರಾವ್, ಭಾರತಿ ಗೋಕರ್ಣ, ಶೈಲಜಾ ಕಾನಡೆ, ಜಯಶ್ರೀ ಕೋಳೂರ ಮತ್ತು ಕವಿತಾ ಮಾತ್ರೋಜಿ ಪ್ರಾರ್ಥಿಸಿದರು. ಅಧ್ಯಕ್ಷೆ ಸರೋಜಾ ಛಬ್ಬಿ ಸ್ವಾಗತಿಸಿದರು. ಸಂಗೀತಾ ಬಾಡಕರ ಜಿಲ್ಲಾ ಚೇರ್ಮನ್ನರನ್ನು ಪರಿಚಯಿಸಿದರು. ದಿವ್ಯಾ ರಾವ್ ವರದಿ ವಾಚಿಸಿದರು. ರಾಜೇಶ್ವರಿ ಅಂಡಗಿ ಮತ್ತು ಶಿಬಿ ಮನೋಜ ಕಾರ್ಯಕ್ರಮ ನಿರೂಪಿಸಿದರು. ದಿವ್ಯಾ ರಾವ್ ವಂದಿಸಿದರು.