ಪ್ರತಿಯೊಂದು ಜೀವಿಗೂ ಕಾಡು ಅತಿ ಅವಶ್ಯ:ಸುರೇಶ
ಲೋಕದರ್ಶನ ವರದಿ
ಮುಂಡಗೋಡ:ನಮ್ಮ ಮುಂದಿನ ಪೀಳಿಗೆಗಾಗಿ ಕಾರ್ಬನ್ ರಹಿತ ದೇಶವನ್ನಾಗಿ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಸ.ಕಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕ ವಸಂತಕುಮಾರ ರಾಠೋಡ ಹೇಳಿದರು.
ತಾಲೂಕಿನ ಬ್ಯಾನಳ್ಳಿ ಗ್ರಾಮದ ಕಂಪಾರ್ಟ್ಮೆಂರ್ಟ್ 6ರ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಬೀಜ ಬಿತ್ತೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಬೀಜಗಳನ್ನು ಬಿತ್ತೋಣ ಅರಣ್ಯ ಬೆಳೆಸೋಣ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆರ್ಎಫ್ಒ ಸುರೇಶ ಕುಳ್ಳೊಳ್ಳಿ ಪ್ರತಿಯೊಂದು ಜೀವಿಗೂ ಕಾಡು ಅತಿ ಅವಶ್ಯ ಎಂದರು. ಈ ಸಂದರ್ಭದಲ್ಲಿ ಎಸ್ಡಿಎಮ್ಸಿ ಅಧ್ಯಕ್ಷ ಬಾಗು ಕಾತ್ರಟ್, ಶಿಕ್ಷಕ ಎಂ.ಟಿ.ಕಲಾಲ, ಅರಣ್ಯ ಇಲಾಖೆ ಸಿಬ್ಬಂದಿ ಅಮಿತ್, ರಮಾಕಾಂತ, ಗಂಗು ಜೋರೆ, ಜಾವು ವರಕ, ಹಜರತ್ ದುಂಡಶಿ, ಮಾಂಬು ಪಾಂಡರಮೀಸೆ ಮತ್ತು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಫಕೀರೇಶ ಸುಣಗಾರ ಸ್ವಾಗತಿಸಿದರು. ಶ್ರೀಧರ ಭಜಂತ್ರಿ ವಂದಿಸಿದರು.