ಹೊಸನಗರ ರಾಮಚಂದ್ರಾಪುರ ಮಠದಲ್ಲಿ ಧ್ವಜದ ಸ್ತಂಭ ಪ್ರತಿಷ್ಠಾಪನೆ
ಮುಂಡರಗಿ 29: ಶಿವಮೊಗ್ಗ ಜಿಲ್ಲೆ ಹೊಸನಗರದ ತಾಲೂಕಿನ ರಾಮಚಂದ್ರಾಪುರಮಠದಲ್ಲಿ ಜೂ.3 ರಂದು ಶುಕ್ರವಾರ ದೇವರ ಧ್ವಜದ ಸ್ತಂಭ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಬೆಳಿಗ್ಗೆ 9 ಘಂಟೆಗೆ ಜರುಗಲಿದೆ ಎಂದು ಸಂತ ಸೇವಕ ಸಮಿತಿಯ ರಾಜ್ಯ ಅಧ್ಯಕ್ಷರಾದ ನಾರಾಯಣ ಇಲ್ಲೂರ ಹೇಳಿದರು.
ಮುಂಡರಗಿಯ ರಾಮೇನಹಳ್ಳಿ ರಸ್ತೆ ಇಲ್ಲೂರ ತೋಟದಲ್ಲಿರುವ ನಂಜನಗೂಡ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಅವರು ಶುಕ್ರವಾರ ಸುದ್ಧಿಗಾರರೊಂದಿಗೆ ಮಾತನಾಡಿದರು.
ಪ್ರತಿಷ್ಠಾಪನೆಯ ಸಮಾರಂಭದ ಸಾನಿಧ್ಯವನ್ನು ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್, ಸಂಸ್ಥಾನ ಗೋಕರ್ಣ, ರಾಮಚಂದ್ರಾಪುರ ಮಠ, ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯಸಾನಿಧ್ಯದಲ್ಲಿ ಜರುಗಲಿದೆ.
ಧಾರ್ಮಿಕ ಕಾರ್ಯಕ್ರಮಗಳನ್ನು ಬ್ರಹ್ಮ ಅಮ್ಯತೇಶ ಭಟ್ ಹಿರೇಗೋಕರ್ಣ ನೆರವೇರಿಸುವರು. ಸರ್ವ ಭಕ್ತರು ಆಗಮಿಸಿ ಪೂಜ್ಯರ ದರ್ಶನ ಆರ್ಶೀವಾದ ಪಡೆದುಕೊಳ್ಳಬೇಕೆಂದು ಇಲ್ಲೂರ ತಿಳಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತ ದೀಲೀಪಕುಮಾರ ಜೋಶಿ, ಕಾಂತರಾಜ ಹಿರೇಮಠ, ಹನುಮಂತರಾವ ದಫ್ತರದಾರ, ವಿಶ್ವನಾಥಭಟ್ಟ ಜೋಶಿ, ಸುಧೀರ ಪದಕಿ, ಕೃಷ್ಣಾ ಗಂಭೀರ, ದತ್ತಣ್ಣ ಹೆಗ್ಗಡಾಳ, ವಿಶ್ವನಾಥ ತಾಮ್ರಗುಂಡಿ, ಧ್ರುವ ಹೂಗಾರ, ರಾಘವೇಂದ್ರ ಚಿನ್ನಿ, ಗೋವಿಂದರಾವ ಹೆಗ್ಗಡಾಳ, ಗೋವಿಂದರಾವ ಜೋಶಿ, ಪ್ರಶಾಂತ ತಾವರಗೇರಿ, ಎ ಎಸ್ ಮಕಾಂದಾರ, ಕೃಷ್ಣ ಸಾವಕಾರ, ಅಶೋಕ ಶಿದ್ಲಿಂಗ್ ಮೊದಲಾದವರಿದ್ದರು.