ಬಳ್ಳಾರಿ

ಪರರ ಸ್ವತ್ತು ಪಾಶಾಣಕ್ಕೆ ಸಮ: ನ್ಯಾ. ಮಲ್ಲಪ್ಪನವರು

ಪರರ ಸ್ವತ್ತು ಪಾಶಾಣಕ್ಕೆ ಸಮ: ನ್ಯಾ. ಮಲ್ಲಪ್ಪನವರು

ಲೋಕದರ್ಶನ ವರದಿ 

ಬಳ್ಳಾರಿ 29: ಪ್ರಪಂಚದ ಬದುಕು ಪರಸ್ಪರ ಅವಲಂಬನೆಯಿಂದ ಕೂಡಿದೆ. ಇಲ್ಲಿ ಯಾರೂ ಸ್ವಾವಲಂಬಿಗಳಲ್ಲ. ತಾನು ಒಳ್ಳೆಯವನಾಗುವ ಮೂಲಕ ತನ್ನ ಕುಟುಂಬ ಮತ್ತು ಪರಿಸರದಲ್ಲಿ ಪ್ರೀತಿ, ಪ್ರೇಮ ಸಹಾಯ ಸಹಕಾರಗಳೊಂದಿಗೆ, ನೆಮ್ಮದಿಯನ್ನು ಉಂಟು ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಶರಣರು ಬಾಳಿ ಬೆಳಗಿ ನಮಗೆ ನಿದರ್ಶನರಾಗಿದ್ದಾರೆ ಎಂದು ನ್ಯಾಯವಾದಿಗಳಾದ ಪಿ.ಮಲ್ಲಪ್ಪನವರು ನುಡಿದರು. 

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಗುಗ್ಗರಹಟ್ಟಿಯ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಏರಿ​‍್ಡಸಿದ್ದ 256ನೇ ಮಹಾಮನೆ ಲಿಂ. ಬಸಯ್ಯ ವೀರಭದ್ರಯ್ಯ ಹೊಸೂರುಮಠ ಮತ್ತು ಲಿಂ. ಕೊಟ್ರಯ್ಯ ವೀರಭದ್ರಯ್ಯ ಹೊಸೂರುಮಠ ದತ್ತಿ ಕಾರ್ಯಕ್ರಮದಲ್ಲಿ ಶೃಣರ ಜೀವನದ ಸಪ್ತಸೂತ್ರಗಳು ವಿಷಯದ ಬಗ್ಗೆ ಮಾತನಾಡುತ್ತಾ, ವಿಶ್ವದ ಬದುಕಿನ ಸಂವಿಧಾನ ದಂತಿರುವ ಬಸವಣ್ಣನ ಕಳಬೇಡ, ಕೊಲಬೇಡ... ವಚನವನ್ನು ವಿಶ್ಲೇಷಣೆ ಮಾಡುತ್ತಾ, ಸರ್ವ ಜನಾಂಗಕ್ಕೆ ಪ್ರಪಂಚದ ಬದುಕು, ಪಾರಮಾರ್ಥದ ಸದ್ಗತಿಗಳೆರಡನ್ನು ಸಾಧಿಸುವ ವಚನ ನೀಡಿದ್ದಾರೆ ಎಂದರು. 

ಪರರ ಸ್ವತ್ತು ಪಾಶಾಣಕ್ಕೆ ಸಮ ಎಂಬ ಮಾತು ಅರಿವಾದರೆ ಇಂದಿನ ಸಂಘರ್ಷಗಳು ದೂರಾಗಬಲ್ಲವೆಂದು ಅಧ್ಯಕ್ಷತೆ ವಹಿಸಿದ್ದ ಎಸ್‌.ಯು.ಜೆ.ಎಸ್‌.ಎಸ್‌. ಪಿ.ಯು. ಕಾಲೇಜಿನ ಉಪನ್ಯಾಸಕರಾದ ಎಸ್‌.ಪಿ.ಹೊಂಬಳ ನುಡಿದರು. ಶ್ರೀ ವೀರಾಂಜನೇಯ ಭಕ್ತ ಮಂಡಳಿ ಅಧ್ಯಕ್ಷತೆ ಅಂಜಿನಮ್ಮ, ಉಪಾಧ್ಯಕ್ಷೆ ಅಲಿವೇಲಮ್ಮ ಅತಿಥಿಗಳಾಗ ಪಾಲ್ಗೊಂಡಿದ್ದರು. ಎಸ್‌.ಡಿ.ಎಂ.ಸಿ. ಅಧ್ಯಕ್ಷರಾದ ಪುರುಷೋತ್ತಮ ದಂಪತಿಗಳು ತಮ್ಮ ಮಗ ಶಿವಾಜಿಯ ಐದನೇ ಹುಟ್ಟಹಬ್ಬದ ನಿಮಿತ್ತ ಭಕ್ತಿ ಸೇವೆ ವಹಿಸಿಕೊಂಡಿದದರು. ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ.ಸಿದ್ದಲಿಂಗಪ್ಪ ದತ್ತಿ ದಾನಿಗಳನ್ನು ಪರಿಚಯಿಸಿದರು. ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಣೆಯನ್ನು ಪುರುಷೋತ್ತಮ ಮಾಡಿದರು. ವೀರಾಂಜನೇಯ ದೇವಸ್ಥಾನದ ಭಕ್ತ ಮಂಡಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ