ಬಳ್ಳಾರಿ

ವಿಕಲಚೇತನ ಮಕ್ಕಳಿಗೆ ಸಾಧನ ಸಲಕರಣೆ ವಿತರಣೆ ಕಾರ್ಯಕ್ರಮ

ವಿಕಲಚೇತನ ಮಕ್ಕಳಿಗೆ ಸಾಧನ ಸಲಕರಣೆ ವಿತರಣೆ ಕಾರ್ಯಕ್ರಮ

ಬಳ್ಳಾರಿ  27: ನಗರದ  ಕೋಟೆ ಪ್ರದೇಶದ  ಪೂರ್ವ ವಲಯದ  ಬಿ. ಆರಿ​‍್ಸ. ಕಛೇರಿಯಲ್ಲಿ ವಿಕಲಚೇತನ (ಅಘಖಓ)ಮಕ್ಕಳಿಗೆ ಸಾಧನ ಸಲಕರಣೆಗಳನ್ನು ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಡಿವೈ ಪಿ ಸಿ ಗಳಾದ  ಇಂದ್ರಾಣಿ ರವರು ವಿಕಲಚೇತನ ಮಕ್ಕಳನ್ನು ಕುರಿತು ಮಾತನಾಡಿದ 2022-23ನೇ ಸಾಲಿನ( ಸಿ ಡಬ್ಲ್ಯೂ ಎಸ್ ಏನ್) ವಿಕಲಚೇತನ  ಮಕ್ಕಳು ಮತ್ತು ಅವರ ಪೋಷಕರ ಸಮ್ಮುಖದಲ್ಲಿ ಸೂಕ್ತವಾಗಿರುವ ಸಾಧನ ಸಲಕರಣೆಗಳನ್ನು  ಫಲಾನುಭವಿಗಳಿಗೆ  ವಿತರಿಸಲಾಯಿತು.  

ಒಟ್ಟಾರೆಯಾಗಿ 105 ಫಲಾನುಭವಿಗಳು ವಿಕಲಚೇತನ ಮಕ್ಕಳು ಇದರ ಪ್ರಯೋಜನವನ್ನು ಪಡೆದರು. ಈಗ ವಿತರಿಸಿದ ಸಾಧನಾ ಸಲಕರಣೆಗಳನ್ನು ದುರುಪಯೋಗ ಮಾಡದೆ ಇಲ್ಲಿ ಬಂದಿರುವಂತಹ ಪೋಷಕರು ತಮ್ಮ ಮಕ್ಕಳಿಗೆ ಸಮಯ ಮತ್ತು ಸಂದರ್ಭ ಅನುಗುಣವಾಗಿ ಜವಾಬ್ದಾರಿಯುತವಾಗಿ ಸರಿಯಾದ ವಿಧಾನಗಳಿಂದ ಮುಂಜಾಗ್ರತೆವಹಿಸಿ ಉಪಯೋಗಿಸಲು ತಿಳಿಸಿದರು. ಹಾಗೂ ಈ ಸಾಧನಾ ಸಲಕರಣೆಗಳನ್ನು ನೀವು ದಿನನಿತ್ಯದಲ್ಲಿ ಬಳಸಿದಾಗ ಮಾತ್ರ ಆರೋಗ್ಯದಲ್ಲಿ ಸುಧಾರಣೆ ಉಂಟಾಗಬಹುದು, ಹಾಗೂ ವಿತರಿಸಿದ  ಸಾಧನಾ ಸಲಕರಣಗಳನ್ನು ಉಪಯೋಗಿಸಿದರೆ ಸಾರ್ಥಕತೆ ಆಗುತ್ತದೆ ಎಂದು ಮಾತನಾಡಿದರು. ಈ ಸಂದರ್ಭದಲ್ಲಿ ಡಿ ವೈ ಪಿ ಸಿ ಗಳಾದ  ಇಂದ್ರಾಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಮೆಹಮರ್ ರೆಹಮನ್, ಎಪಿಸಿ ಶಿವಲಿಂಗ ರೆಡ್ಡಿ, ಪೂರ್ವ ವಲಯದ ಬಿಆರಿ​‍್ಸ ಮಲ್ಲಪ್ಪ, ಹಾಗೂ ಬಿಐಈಆರ್‌ಟಿ  ಎಸ್ ವೀರಬಸಪ್ಪ, ಜಿ. ಸೂರ್ಯನಾರಾಯಣ  ಮತ್ತು  ವಿಕಲಚೇತನ ಮಕ್ಕಳು ಮತ್ತು ಅವರ ಪೋಷಕರು ಅಧಿಕಾರಿಗಳು ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ