ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ: ಮಲ್ಲನಗೌಡ ಬಿರಾದಾರ
ಮುದ್ದೇಬಿಹಾಳ 20: ಮನುಷ್ಯ ಸದಾ ಆರೋಗ್ಯವಂತನಾಗಿರಲು ನಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಕಾರಣ ಸಾರ್ವಜನಿಕರು ಕಸ ಮುಕ್ತ, ಪ್ಲಾಷ್ಠಿಕ್ ಮುಕ್ತ ಉತ್ತಮ ಪರಿಸರ ನಿರ್ಮಾಣಕ್ಕಾಗಿ ಪುರಸಭೆ ಇಲಾಖೆಯ ಕೈಜೋಡಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಹೇಳಿದರು.
ಪಟ್ಟಣದ ಪುರಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇದೇ ಸ, 14 ರಿಂದ ಅ, 2ರವರೆಗೆ ಸ್ವಚ್ಚಭಾರತ ಮಿಷನ ಅಡಿಯಲ್ಲಿ ಪುರಸಭೆ ನೂತನ ಅಧ್ಯಕ್ಷ ಮೈಬೂಬ ಗೊಳಸಂಗಿ ಹಾಗೂ ಉಪಾಧ್ಯಕ್ಷ ಪ್ರೀತಿ ದೇಗಿನಾಳ ಅವರ ನೇತೃತ್ವದಲ್ಲಿ ಪಟ್ಟಣದ ಬಹುತೇಕ ಎಲ್ಲ 23 ಪ್ರತಿ ವಾರ್ಡುಗಳಲ್ಲಿ ಸ್ವಚ್ಚತಾ ಅಭಿಯಾನ ನಡೆಸುವ ಮೂಲಕ ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಕಾರಣ ಸಾರ್ವಜನಿಕರು ಒಣ ಕಸ ಹಾಗೂ ಹಸಿ ಕಸವನ್ನು ಎರಡನ್ನು ಪ್ರತ್ಯೇಕಿಸಿ ಪುರಸಭೆಯಿಂದ ತಮ್ಮ ಮನೆ ಬಾಗಿಲಗೆ ಬರುವ ಕಸದ ವಾಹನದಲ್ಲಿ ಹಾಕಬೇಕು. ಜೊತೆಗೆ ಪ್ಲಾಷ್ಠಿಕ ಬಳಕೆ ನಿಲ್ಲಿಸಬೇಕು ಇದರಿಂದ ಪರಿಸರದಲ್ಲಿ ವ್ಯತಾಸಗೊಂಡು ವಿಷಮಕಾರಿ ಪರಿಸರಹೊಂದಿ ಮನುಷ್ಯನ ಮಾತ್ರವಲ್ಲದೇ ದನಕರುಗಳ ಆರೋಗ್ಯದ ಮೇಲೆ ದುಶ್ಪರಿಣಾಮ ಬೀರಲಿದೆ ಎಂದರು.
ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿಯವರು ಮಾತನಾಡಿ ಸುಂದರ ಪಟ್ಟಣ, ನಗರ, ಬಡಾವಣೆಗಳಾಗಬೇಕಾದರೇ ನಾವೇಲ್ಲ ಮೊದಲು ಸ್ವಚ್ಚತೆಗೆ ಆಧ್ಯತೆ ನೀಡಬೇಕು. ಇದು ಪ್ರತಿಯೊಬ್ಬರ ಜವಾಬ್ದಾರಿಯೂ ಕೂಡ ಆಗಿದೆ. ಪಟ್ಟಣದ ಜನರು ಎಲ್ಲೆಂದರಲ್ಲಿ ಕಸ ಕಡ್ಡಿ, ಮುಸುರೆ ಎಸೆಯುವುದರಿಂದ ಆ ಭಾಗದ ಕೊಳಚೆ ಪ್ರದೇಶವಾಗಿ ಸೊಳ್ಳೆಗಳ ಉತ್ಪತ್ತಿಯಿಂದ ಮನುಷ್ಯನು ಹಲವು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಾನೆ ಇದರಿಂದ ಮನುಷ್ಯನ ಆರೋಗ್ಯವೂ ಹದಗೆಟ್ಟುಹೋಗುತ್ತದೆ ಜೊತೆಗೆ ನಮ್ಮ ಪರಿಸರವೂ ಕೆಟ್ಟು ಹೋಗಿ ತೀವ್ರ ತೊಂದರೆ ಅನುಭವಿಸುವಂತಾಗುತ್ತದೆ.
ಈ ಹಿನ್ನೆಲೆಯಲ್ಲಿ ಸರಕಾರ ಸ್ವಚ್ಛ ಭಾರತ ಅಭಿಯಾನ ಮೂಲಕ ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಉತ್ತಮ ಪರಿಸರ ನಿರ್ಮಿಸುವ ಉದ್ದೇಶಹೊಂದಿದೆ. ಕಾರಣ ಇದೊಂದು ಕೇವಲ ಅಭಿಯಾನ ಮಾತ್ರವಾಗದೇ ನಿತ್ಯದ ಕರ್ತವ್ಯದಲ್ಲಿ ಒಂದಾಗಬೇಕು ಎನ್ನುವ ಉದ್ದೇಶದಿಂದ ಈ ಬಾರಿ ಪುರಸಭೆಯಿಂದ ಪಟ್ಟಣದ ಆಯಾ ವಾರ್ಡುಗಳ ಸದಸ್ಯರ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳ ನೇತೃತ್ವದಲ್ಲಿ ಪ್ರತಿ ವಾರ್ಡುಗಳಲ್ಲಿ ಸಂಚರಿಸಿ ಮನೆ ಮನೆಗೆ ತೆರಳಿ ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಮ್ಮದಾಗಿದೆ ಜೊತೆಗೆ ಗಿಡ ಮರಗಳನ್ನು ಬೆಳೆಸುವುದು ಸೇರಿದಂತೆ ಹಲವು ರೀತಿಯಲ್ಲಿ ಅಭಿಯಾನಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಪುರಸಭೆ ಉಪಾಧ್ಯಕ್ಷ ಪ್ರೀತಿ ದೇಗಿನಾಳ, ಸದಸ್ಯೆ ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ರಪೀಕ ದ್ರಾಕ್ಷಿ, ಗೋಪಿ ಮಡಿವಾಳರ, ಚನ್ನಪ್ಪ ಕಂಠಿ, ಕಂದಾಯ ಅಧಿಕಾರಿ ಎನ್. ಎಸ್ ಪಾಟೀಲ, ಆರೋಗ್ಯ ನೀರೀಕ್ಷಕರಾದ ಮಹಾಂತೇಶ ಕಟ್ಟಿಮನಿ, ಜಾವಿದ ನಾಯ್ಕೋಡಿ ಸೇರಿದಂತೆ ಹಲವರು ಇದ್ದರು.