ಬಳ್ಳಾರಿ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ: ವಸಂತ್ ಕುಮಾರ್

ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ: ವಸಂತ್ ಕುಮಾರ್

ಬಳ್ಳಾರಿ 08:  ಇಂದಿನ ದಿನಮಾನಗಳಲ್ಲಿ ದೇಶದಲ್ಲಿ ಸಾಕಷ್ಟು ವಾಯುಮಾಲಿನ್ಯ ವಾಗುತ್ತಿದ್ದು ಅದನ್ನು ತಡೆಯಬೇಕಾದರೆ ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ಬೆಂಗಳೂರು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಸಂತ್ ಕುಮಾರ್ ಹೇಳಿದರು 

ಇಂದು ಸ್ಟುಡೆಂಟ್ ಫರ್ ಡೆವಲಪ್ಮೆಂಟ್  ಬಳ್ಳಾರಿ ವತಿಯಿಂದ ಸರ್ಕಾರಿ ಪ್ರೌಢಶಾಲೆ ಕಪ್ಪಗಲ್ ರಸ್ತೆ ದುರ್ಗಮ್ಮ ಗುಡಿ ಹಿಂಭಾಗದ ಶಾಲೆಯಲ್ಲಿ ಸ್ವಚ್ಛತೆ ಮತ್ತು ಸಸಿ ನೆಡುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು. 

ಸರಳಾದೇವಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಹೇಮಣ್ಣ ಮಾತನಾಡಿ Sಈಆ ವತಿಯಿಂದ ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಇಂತಹ ಸರ್ಕಾರಿ ಶಾಲೆಗಳಲ್ಲಿ ಯುವಕರ ಪಾತ್ರ ಬಹಳ ಮಹತ್ವ ಅನಿಸಿದೆ ಎಂದು ಹೇಳಿದರು ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ನಾಗರಾಜ ರವರು ಜಿಲ್ಲಾ Sಈಆ ಪ್ರಮುಖರಾದ ರುದ್ರೇಶ್ ನಗರ Sಈಆ ಪ್ರಮುಖರಾದ ಗೋವಿಂದರಾಜ್ ಕಾರ್ಯಕರ್ತರಾದ ಹರ್ಷ ಕೌಶಿಕ್ ಶ್ರೀನಿವಾಸ್ ಶ್ರೀಧರ್ ಶರಣ ಸುರೇಶ್ ನವೀನ್ ಭೀಮ ವೀರೇಶ್ ಶಿವು ತಿಮ್ಮಯ್ಯ ಗಣೇಶ್ ಮತ್ತಿತರರಿದ್ದರು.

ಸುದ್ದಿ ಓದಿ