ಉದ್ಯಮಿ ನವಲಗುಂದ ಅವರಿಗೆ ಸಮಿತಿಯಿಂದ ಗೌರವ ಸನ್ಮಾನ
ಲೋಕದರ್ಶನ ವರದಿ
ಶಿಗ್ಗಾವಿ 28: ಪಟ್ಟಣದ ಐತಿಹಾಸಿಕ ದ್ಯಾಮವ್ವದೇವಿ ಜಾತ್ರಾ ಮಹೋತ್ಸವ ಸಮಿತಿ ಶಿಗ್ಗಾವಿ ಮತ್ತು ಗಂಜೀಗಟ್ಟಿ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಶರನ್ನವರಾತ್ರಿ ಅಂಗವಾಗಿ ಶ್ರೀದೇವಿ ಮಹಾ ಪುರಾಣ ಪ್ರವಚನದ 2 ನೇ ದಿನದ ಕಾರ್ಯಕ್ರಮದಲ್ಲಿ ಶಿಗ್ಗಾವಿ ಪಟ್ಟಣದ ಜನತೆಯ ಉದ್ಯೋಗದಾತ ಹಾಗೂ ಬಾಂಬೆಯಲ್ಲಿ ನಲೆಸಿ ಪ್ರಖ್ಯಾತ ಉದ್ಯಮಿಯಾದ ನಾಗೇಶ ನವಲಗುಂದ ಅವರನ್ನು ಸಮಿತಿವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಾತ್ರಾ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಮಂಜುನಾಥ ಕುನ್ನೂರ, ಸಮಿತಿ ಅಧ್ಯಕ್ಷ ಭರಮಜ್ಜ ನವಲಗುಂದ, ಕೋಶಾಧ್ಯಕ್ಷ ಟಿ.ವ್ಹಿ.ಸುರಗೀಮಠ, ಉಪಾಧ್ಯಕ್ಷರಾದ ಎಸ್.ಪಿ.ಜೋಶಿ, ಸಿದ್ದಾರ್ಥಗೌಡ ಪಾಟೀಲ, ಪಕ್ಕೀರಜ್ಜ ಯಲಿಗಾರ, ಸಮಿತಿ ಸದಸ್ಯ ಜಯಣ್ಣಾ ಹೆಸರೂರ ಸೇರಿದಂತೆ ಇತರರು ಪಾಲ್ಗೊಂಡಿದ್ದರು