ರೈತರಿಗೆ ಮುಂಗಾರು ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಆಗದಂತೆ ನೋಡಿಕೊಳ್ಳಿ
ಆಯಾ ತಾಲೂಕಿನ ರಸಗೊಬ್ಬರ, ಮಳಿಗೆಗಳ ಮಾರಾಟಗಾರರ ಸಭೆಯಲ್ಲಿ ತಾಲೂಕಾ ಕೃಷಿ ಅಧಿಕಾರಿ ಸುರೇಶ ಭಾವಿಕಟ್ಟಿ ಸೂಚನೆ
ಮುದ್ದೇಬಿಹಾಳ 23: ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ತಾಳಿಕೋಟಿ ತಹಶೀಲ್ದಾರ ಕೀರ್ತಿ ಚಾಲಕ ರವರ ಅಧ್ಯಕ್ಷತೆಯಲ್ಲಿ ತಹಶೀಲ್ದಾರ ಮುದ್ದೇಬಿಹಾಳ 23: 2024-25 ಮುಂಗಾರು ಹಂಗಾಮಿನ ಪೂರ್ವದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನಿನ ಬಗ್ಗೆ ಚರ್ಚಿಸಿ ರೈತರಿಗೆ ಯಾವುದೇ ಬಿತ್ತನೆ ಬೀಜ, ರಸಗೊಬ್ಬರ ಕೊರತೆ ಆಗದಂತೆ ನೋಡಿಕೊಳ್ಳಬೇಕು ಹಾಗೂ ಯಾವುದೇ ಕೃತಕ ಅಭಾವ ಸೃಷ್ಠಿ ಆಗದಂತೆ ನೋಡಿಕೊಳ್ಳಬೇಕು ಎಂದು ತಾಲೂಕಾ ಕೃಷಿ ಅಧಿಕಾರಿ ಸುರೇಶ ಭಾವಿಕಟ್ಟಿ ಹೇಳಿದರು.
ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ತಾಳಿಕೋಟಿ ತಹಶೀಲ್ದಾರ ಕೀರ್ತಿ ಚಾಲಕ ರವರ ಅಧ್ಯಕ್ಷತೆಯಲ್ಲಿ ತಹಶೀಲ್ದಾರ ಆಯಾ ತಾಲ್ಲೂಕಿನ ರಸಗೊಬ್ಬರ, ಮಳಿಗೆಗಳ ಮಾರಾಟಗಾರರ ಸಭೆ ಯಲ್ಲಿ ಮಾತನಾಡಿದರು.
*ಒಂದು ವಾರದೊಳಗೆ ಯಾವುದೇ ಪರವಾನಿಗೆಯಲ್ಲಿ ಉತ್ಪನ್ನಗಳನ್ನು ಸೇರಿಸುವದು ಅಥವಾ ನವೀಕರಿಸುವದು ಇದ್ದಲ್ಲಿ ಕೂಡಲೇ ಮಾಡಿಸಿ ಪ್ರಧಾನ ಪ್ರಮಾಣ ಪತ್ರಗಳ ನವೀಕರಿಸುವದರ ಅನುಮತಿ ಪಡೆದು ದಾಖಲಾತಿಗಳ ಅಚ್ಚುಕಟ್ಟು ನಿರ್ವಹಣೆ ಮಾಡಬೇಕಾಗಿ ಕಟ್ಟುನಿಟ್ಟಾಗಿ ಸೂಚಿಸಿದೆ. ಈಹಿನ್ನೆಲೆಯಲ್ಲಿ ಯಾವುದೇ ನಕಲಿ ಅಥವಾ ನೊಂದಾಯಿತವಲ್ಲದ ಅಥವಾ ಅವಧಿ ಮುಗಿದಿರುವ ಉತ್ಪನ್ನಗಳನ್ನು ಮಾರಾಟ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವುದು ಕಾನೂನು ಬಾಹಿರವಾಗಿದ್ದು ಹಾಗೇನಾದರೂ ಸಾರ್ವಜನಿಕರಿಂದ ಅನಧಿಕೃತ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳ ಕಂಡಬಂದಲ್ಲಿ ದಾಳಿ ನಡೆಸಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.
*ಸರಕಾರದ ಎಲ್ಲಾ ನಿಯಮಗಳನ್ನು ಆದೇಶಗಳನ್ನು ಪಾಲಿಸಿ ರೈತರ ಹಿತದೃಷ್ಠಿ ಕಾಪಾಡಬೇಕು ಮತ್ತು ಎಲ್ಲರೂ ಗುಣಮಟ್ಟದ ಕೃಷಿ ಪರಿಕರಗಳನ್ನು ರೈತರಿಗೆ ವಿತರಣೆ ಮಾಡುವಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
*ರೈತರು ತಮ್ಮ ಬಳಿ ಖರಿದಿಸಿ ಪರಿಕರಕರಗಳ ಬಗ್ಗೆ ಎಲ್ಲರೂ ಕಡ್ಡಾಯವಾಗಿ ರಸೀದಿ ನೀಡಬೇಕು, ತಾವು ಮಾರಾಟ ಮಡುವ ಎಲ್ಲಾ ಉತ್ಪನ್ನಗಳಿಗೆ ಉದ್ರಿಬಿಲ್ಲು ಇನ್ವಾಯಿಸ್ ದಾಖಲಿಡಬೇಕು. ಯಾವುದೇ ಅನಧಿಕೃತ ದಾಸ್ತಾನನ್ನು ಅನುಮತಿ ಪಡೆಯದ ಸ್ಥಳದಲ್ಲಿ ಇಡುವಂತಿಲ್ಲ ತಾವು ದಾಸ್ತಾನಿಕರಿಸುವ ಗೋದಾಮಿನ ಸ್ಥಳ ಪರವಾನಿಗೆಯಲ್ಲಿ ಕಡ್ಡಾಯವಾಗಿ ಸೇರಿಸಬೇಕು. ಪ್ರತಿ ತಿಂಗಳು ತಮ್ಮಲ್ಲಿರುವ ದಾಸ್ತಾನಿನ ವಿವರ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಕಡ್ಡಾಯವಾಗಿ ನೀಡಬೇಕು ಎಂದು ತಿಳಿಸಿದರು.
ಕೃಷಿ ಅಧಿಕಾರಿ ದಾನಪ್ಪ ಕತ್ನಳ್ಳಿ ಹಾಗೂ ರಾಜೇಶ್ವರಿ ನಾಡಗೌಡರ, ಕೃಷಿ ಅಧಿಕಾರಿಗಳಾದ ಜಿ ಬಿ ಮೆದಿಕಿನಾಳ, ಆರ್ ಬಿ ರುದ್ರವಾಡಿ, ಎಸ್ ಆರ್ ಕಟ್ಟಿಮನಿ, ಆರ್ ವಾಯ್ ಸಾಗರ ಹಾಗೂ ಎಮ್ ಹೆಚ್ ಬೀಳಗಿ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯ ಮುಖ್ಯ ಅತಿಥಿಗಳಾಗಿ ಕೃಷಿ ಪರಿಕರ ಮಾರಾಟಗಾರರ ಅಧ್ಯಕ್ಷ ಶಂಕರಗೌಡ ಹಿರೇಗೌಡರ ರವರು ಪ್ರತಿನಿಧಿಯಾಗಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕೃಷಿ ಅಧಿಕಾರಿ ಮಹೇಶ ಜೋಷಿ ಸ್ವಾಗತಿಸಿ ನಿರೂಪಿಸಿದರು.