ಶಿಗ್ಗಾವ್

ವಕೀಲರ ರಕ್ಷಣಾಕಾಯ್ದೆ ಜಾರಿಗೋಳಿಸಿ:ಹನುಮಂತ

ವಕೀಲರ ರಕ್ಷಣಾಕಾಯ್ದೆ ಜಾರಿಗೋಳಿಸಿ:ಹನುಮಂತ

ಲೋಕದರ್ಶನ ವರದಿ

ಶಿಗ್ಗಾವಿ 07:  ಡಾ. ಬಿ. ಆರ್.ಅಂಬೇಡ್ಕರವರು ಈ ದೇಶದ ಸಂವಿಧಾನ ಶಿಲ್ಪಿ ಹಾಗೂ ಸರ್ವ ಶ್ರೇಷ್ಟ ನ್ಯಾಯವಾದಿಗಳು ಆಗಿದ್ರು. ಬೆಳಗಾವಿ ಯಲ್ಲಿ ನಡೆಯುವ ಅಧಿವೇಶನದಲ್ಲಿ ವಕೀಲರ ರಕ್ಷಣಾಕಾಯ್ದೆ ಜಾರಿಗೊಳಿಸಿ ಅನುಮೋದನೆ ಮಾಡಬೇಕು ಹಾಗೂ ಜೀವ ವಿಮೆ ಜಾರಿಗೆ ಗೊಳಿಸಬೇಕು ಅಂತಾ ಮುಖ್ಯಮಂತ್ರಿಗಳಿಗೆ ನ್ಯಾಯವಾದಿ ಹಾಗೂ ಸಮಾಜಸೇವಕ ಹನುಮಂತಎನ್. ಬಂಡಿವಡ್ಡರ ಆಗ್ರಹಿಸಿದರು.

ಪಟ್ಟಣದ ವಸತಿ ನಿಲಯದಲ್ಲಿ67 ನೆಯ  ಪರಿನಿವರ್ಾಣದ  ಅಂಗವಾಗಿ ಡಾ. ಬಿ. ಆರ್.ಅಂಬೇಡ್ಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ರಮೇಶ ಚೌಹಾಣ ಮಾತನಾಡಿ ವಿದ್ಯಾರ್ಥಿಗಳಿಗೆ ಚೆನ್ನಾಗಿ ಓದಿ ಡಾ.ಅಂಬೇಡ್ಕರವರ ಹಾದಿಯಲ್ಲಿ ನಡೆಯ ಬೇಕು ಅಂತಾ ಹೇಳಿದರು.

ವಕೀಲರಾದ  ಮಂಜುನಾಥ ಹುರಳಿಕೊಪ್ಪಿ ಸೇರಿದಂತೆ ವಸತಿ ನಿಲಯದ  ವಿದ್ಯಾರ್ಥಿಗಳು ಉಪಸ್ಥಿತರಿದ್ದರು 

ಸುದ್ದಿ ಓದಿ