ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹದ ಅಗತ್ಯ : ಹೊಸಮನಿ
ತಾಳಿಕೋಟಿ: ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಕ್ರೀಡೆಗಳಾದ ಕಬಡ್ಡಿ, ಕುಸ್ತಿ, ಹಾಗೂ ಖೊಖೊ ದಂಥಹ ಆಟಗಳು ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಮಹತ್ವವನ್ನು ಪಡೆದುಕೊಂಡಿವೆ ಅವುಗಳನ್ನು ರಕ್ಷಿಸಿಕೊಳ್ಳುವದರ ಜೊತೆಗೆ ಪ್ರೋತ್ಸಾಹಿಸುವ ಅಗತ್ಯ ಇದೆ ಎಂದು ಬ.ಸಾಲವಾಡಗಿ ಗ್ರಾಮ ಪಂಚಾಯತ ಅಧ್ಯಕ್ಷ ಮಲ್ಲನಗೌಡ ಹೊಸಮನಿ(ಗುಂಡಕನಾಳ) ತಿಳಿಸಿದರು.
ಇತ್ತೀಚಿಗೆ ಬ.ಸಾಲವಾಡಗಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ ವಿಜಯಪೂರ ತಾಲೂಕ ಪಂಚಾಯತ ತಾಳಿಕೋಟಿ ಹಾಗೂ ಗ್ರಾಮಪಂಚಾಯತ ಬ.ಸಾಲವಾಡಗಿ ಇವರ ಸಹಯೋಗದಲ್ಲಿ ಆಯೋಜಿಸಿದ ಗ್ರಾಮೀಣ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಈ ಕ್ರೀಡಾಕೂಟದಲ್ಲಿ ಬ.ಸಾಲವಾಡಗಿ ಗ್ರಾಮಪಂಚಾಯತ ವ್ಯಾಪ್ತಿಯ ಬಂಡೆಪ್ಪನಹಳ್ಳಿ, ಗುಂಡಕನಾಳ ಬಿಳೇಭಾವಿ ಹಾಗೂ ಬ.ಸಾಲವಾಡಗಿ ಕ್ರೀಡಾಪಟುಗಳು ಭಾಗವಹಿಸಿದ್ದರು ಇದರ ವಿಜೇತರಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು.
ಈ ಸಂದರ್ಭದಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷ ಯಮನಪ್ಪಗೌಡ ಹೊರಗಿನಮನಿ, ಗುರುಗೌಡ ಗುರಡ್ಡಿ ಮಲ್ಲನಗೌಡ ಕಾರಲಕುಂಟ, ಬಸವರಾಜ ದೊಡಮನಿ. ಪಿಡಿಓ ನಿಂಗನಗೌಡ ದೋಡಮನಿ ಬಸಯ್ಯ ಮುತ್ಯಾ, ಮುತ್ತುಗೌಡ ಅಸ್ಕಿ ಬಸ್ಸು ಲಕ್ಕುಂಡಿ ಶಿಕ್ಷಕರಾದ ಚೌದ್ರಿ ಹಾಗೂ ಸುಮಂಗಲಾ ಕೋಳೂರ ಉಪಸ್ಥಿತರಿದ್ದರು.