ತಾಳಿಕೋಟಿ

ಹೆಣ್ಣು ಮಕ್ಕಳನ್ನು ಕ್ರೀಡೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿ: ರವಿ ಗೋಲಾ

ಹೆಣ್ಣು ಮಕ್ಕಳನ್ನು ಕ್ರೀಡೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿ: ರವಿ ಗೋಲಾ

ತಾಳಿಕೋಟೆ11:  ಭಾರತದಲ್ಲಿ ಹೆಣ್ಣಿಗೆ ವಿಶೇಷ ಗೌರವ, ಕೆಲವು ಕಟ್ಟುಪಾಡುಗಳು ಇವೆ. ಕಟ್ಟುಪಾಡುಗಳಿಂದಾಗಿ ಹೆಣ್ಣು ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸುವ ಸಂಖ್ಯೆ ಕಡಿಮೆಯಾಗಿತ್ತು. ಒಂದು ಮಹಿಳಾ ತಂಡವನ್ನ ಕಟ್ಟಲು ಸಾಕಷ್ಟು ಕಷ್ಟಪಡಬೇಕಾಗಿತ್ತು. ಮಹಿಳಾ ಕ್ರೀಡಾಕೂಟದಲ್ಲಿಯೂ ಸಹ ಸ್ಪರ್ಧೆ ಹೆಚ್ಚಾದಾಗ ಉತ್ತಮ ಮಹಿಳಾ ಕ್ರೀಡಾಪಟು ರೂಪಗೊಳ್ಳಲು ಸಾಧ್ಯ ಎಂದು ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ದೈಹಿಕ ಶಿಕ್ಷಕರ ಸಂಘದ ಗೌರವಾಧ್ಯಕ್ಷ ರವಿ ಗೋಲಾ ಹೇಳಿದರು. 

ಅವರು ಪಟ್ಟಣದ ವೀವಿ ಸಂಘದ ಎಸ್‌.ಕೆ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲದಲ್ಲಿ ಹಮ್ಮಿಕೊಂಡಿದ್ದ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 2021-22 ನೇ ಸಾಲಿನ ಏಕ ವಲಯ ಹ್ಯಾಂಡ್ ಬಾಲ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. 

ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಮಹಿಳಾ ತಂಡಗಳು ಭಾಗವಹಿಸಿದ್ದು ಇತಿಹಾಸವಾಗಿದೆ. ಇಂದಿನ ದಿನಗಳಲ್ಲಿ ಪಾಲಕರು ಹೆಣ್ಣು ಮಕ್ಕಳನ್ನು ಕ್ರೀಡೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುತ್ತಿರುವದು ಸಂತಸದ ಸಂಗತಿಯಾಗಿದೆ. ಕ್ರೀಡೆಯಲ್ಲಿ ಸೋಲು ಗೆಲುವಿ ಮುಖ್ಯವಲ್ಲ. ಸರ್ಧಾತ್ಮಕವಾಗಿ ಆಡುವದು ಮುಖ್ಯ. ಸೋಲನ್ನು ಸ್ವಿಕರಿಸಿ, ಗೆಲುವುವಾಗಿ ಪರಿವರ್ತಿಸುವದು ಉತ್ತಮ ಕ್ರೀಡಾ ಪಟುವಿನ ಲಕ್ಷಣವಾಗಿದೆ ಎಂದರು. 

ಮಹಾವಿದ್ಯಾಲಯದ ಚೇರಮನ್ ವ್ಹಿ.ಸಿ. ಹಿರೇಮಠ ಸಸಿಗೆ ನೀರುಣಿಸುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಪ್ರಾಚಾರ್ಯ ಪ್ರೋ.ಆರ್‌.ವ್ಹಿ.ಜಾಲವಾದಿ ವಹಿಸಿದ್ದರು. 

ವೇದಿಕೆಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಚೇರಮನ್ ಎಸ್‌.ಎ.ಸರೂರ, ವೈಸ್ ಚೇರ್ಮನ್ ಸಿ.ಆರ್‌. ಕತ್ತಿ, ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಿ.ಎಸ್‌. ಗಬಸಾವಳಗಿ ವಿ.ವಿ. ಸಂಘದ ಸಹ ಕಾರ್ಯದರ್ಶಿ ವ್ಹಿ.ಬಿ. ಸಜ್ಜನ, ರಾಣಿ ಚೆನ್ನಮ್ಮ ವಿ.ವಿ.ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್‌.ಬಿ.ಚಳಗೇರಿ, ರಾಣಿ ಚೆನ್ನಮ್ಮ ವಿ.ವಿ.ದೈಹಿಕ ಶಿಕ್ಷಣ ನಿರ್ದೇಶಕ ಜಗದೀಶ ಗಸ್ತಿ, ವಿಜಯಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಅಶೋಕ್ ಜಾಧವ, ಶಿಕ್ಷಣ ಮಹಾವಿದ್ಯಾಲಯದ ಚೇರ್ಮನ್ ಕೆ.ಎಸ್‌.ಮುರಾಳ ಸಂಘಟನಾ ಕಾರ್ಯದರ್ಶಿ ಡಾ.ದಯಾನಂದ ಮುಗಡ್ಲಿಮಠ ಇದ್ದರು. ಒಟ್ಟು 35 ಪುರುಷ ಹಾಗೂ ಮಹಿಳಾ ತಂಡಗಳು ಭಾಗವಹಿಸಿದ್ದವು.  ವೇದಿಕೆಯಲ್ಲಿ ಇದ್ದರು. ಡಾ.ಅನಿಲ ಆಲಾಳಮಠ ನಿರೂಪಿಸಿದರು, ಪ್ರಾಧ್ಯಾಪಕ ಡಾ.ಅಜಯ ಅಬ್ಬಾರ ಸ್ವಾಗತಿಸಿದರು. 


ಸುದ್ದಿ ಓದಿ