ಬಳ್ಳಾರಿ

ಜಾನಪದ ಕಲಾವಿದರನ್ನು ಪ್ರೋತ್ಸಾಹಿಸಿ: ಮಲ್ಲಿಕಾರ್ಜುನ

ಜಾನಪದ ಕಲಾವಿದರನ್ನು ಪ್ರೋತ್ಸಾಹಿಸಿ: ಮಲ್ಲಿಕಾರ್ಜುನ


ಬಳ್ಳಾರಿ, ಅ.25: ನಶಿಸುತ್ತಿರುವ ಪೂರ್ವಜನ ಕಲೆಗಳನ್ನು ಇನ್ನೂ ಜೀವಂತಗೊಳಿಸುವ ಕಾರ್ಯವನ್ನು ಹೊನ್ನೂರುಸ್ವಾಮಿ ಮತ್ತು ತಂಡದವರು ಮಾಡುತ್ತಿರುವುದು ಹರ್ಷದಾಯಕ. ಇಂತಹ ಜಾನಪದ ಕಲಾವಿದರನ್ನು ನಾವುಗಳು ಪ್ರೋತ್ಸಾಹಿಸಬೇಕೆಂದರು. ಇಂದಿನ ಕಾಲದ ಯುವಕರಿಗೆ ಪ್ರಾಚೀನ ಕಾಲದ ಕಲೆಗಳನ ಬಗ್ಗೆ ಅರಿವು ನೀಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಮುಖಂಡ ಮಲ್ಲಿಕಾರ್ಜುನ ಹೇಳಿದರು. 

ಶ್ರೀವಶ್ರೀ ಸಾರ್ವಜನಿಕ ಸೇವಾ ಟ್ರಸ್ಟ್‌ ಬಳ್ಳಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ವಿಶೇಷ ಘಟಕ ಯೋಜನೆಯಡಿಯಲ್ಲಿ ಕೆ.ಹೊನ್ನೂರುಸ್ವಾಮಿ ಮತ್ತು ತಂಡ ಬಳ್ಳಾರಿ ಇವರಿಂದ ದಶಕಂಠ ರಾವಣ, ಶಿವನ ಆತ್ಮಲಿಂಗ ಎಂಬ ತೊಗಲುಗೊಂಬೆ ಪ್ರದರ್ಶನವನ್ನು ತಾಲೂಕಿನ ಬಿ.ಗೋನಾಳ್ ಗ್ರಾಮದಲ್ಲಿ ಏರಿ​‍್ಡಸಲಾಗಿತ್ತು.  

ಈ ಕಾರ್ಯಕ್ರಮವನ್ನು ಟ್ರಸ್ಟ್‌ನ ಅಧ್ಯಕ್ಷ ಬಿ.ಶಿವರಾಜಗೌಡ ಹಾಗೂ ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಬಿ.ರಮೇಶ್ ಅವರು ವಹಿಸಿದ್ದರು.  

ನಂತರ ಕೆ.ಹೊನ್ನೂರುಸ್ವಾಮಿ ಮತ್ತು ತಂಡ ಬಳ್ಳಾರಿ ಇವರಿಂದ ದಶಕಂಠ ರಾವಣ, ಶಿವನ ಆತ್ಮಲಿಂಗ ಎಂಬ ತೊಗಲುಗೊಂಬೆ ಪ್ರದರ್ಶನ ನೀಡುತ್ತಿರುವ ಸಂದರ್ಭದಲ್ಲಿ ಮಳೆರಾಯನ ದರ್ಶನ ಅದ್ದೂರಿಯಾಗಿ ಜರುಗಿತು. ಆದರೂ ಮಳೆಯಲ್ಲೇ ಪ್ರದರ್ಶನ ಮಾಡಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಹುಲಿಮಾನೆಪ್ಪ, ಕುಮಾರ್, ಸೇರಿದಂತೆ ಹಲವಾರು ಊರಿನ ಗಣ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ