ಬೆಳಗಾವಿ

ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ ಪ್ರಾರಂಭ

ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ ಪ್ರಾರಂಭ
ಮಲಾಬಾದ ಗ್ರಾಮದಲ್ಲಿ ಅಗ್ರಾಣಿ ನದಿಯಲ್ಲಿ ಕೂಜಿಗಳ ಹುಳೆತ್ತುವ ದೃಶ್ಯ

ಸಂಬರಗಿ 06:  ಗಡಿಭಾಗದ ಮಲಾಬಾದ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಕಾಮಗಾರಿ ಪ್ರಾರಂಭ ಮಾಡಿ ಮಾಹಾರಾಷ್ಟ್ರಕ್ಕೆ ಗುಳೆ ಹೋಗುತ್ತಿರುವದನ್ನು ತಡೆಗಟ್ಟಿಸಿ ಕೂಲಿಗರಿಗೆ ಗ್ರಾಮ ಪಂಚಾಯತ್‍ದಿಂದ ಕೆಲಸ ನೀಡಿ ಅನಕೂಲ ಮಾಡಿದ್ದಾರೆ.

ಮಲಾಬಾದ ಗ್ರಾಮದಲ್ಲಿ ಅಗ್ರಾಣಿ ಸಸಿಯಲದಲ್ಲಿ ಹೂಳೆತ್ತುವ ಕೆಲಸ ಪ್ರಾರಂಭ ಮಾಡಿದ್ದು ಸಧ್ಯದಲ್ಲಿ 20 ಕೂಲಿಗಳು ಕೆಲಸ ಮಾಡುತ್ತಿದ್ದಾರೆ. ಗಡಿ ಭಾಗ ಬೇಸಿಗೆ ಕಾಲದಲ್ಲಿ ಕೂಲಿಗರಿಗೆ ಕೆಲಸ ಇರುವದಿಲ್ಲ ಮಾಹಾರಾಷ್ಟ್ರದ ಜತ್ ತೊ ಕವಟೆಮಾಹಾಂಕಾಲ ತಾಲೂಕಿಗೆ ಕೆಲಸಕ್ಕೆ ಹೊಗುತ್ತಾರೆ ಈ ಕಾಮಗಾರಿಯಿಂದ ಬಹಳಷ್ಟು ಕೂಲಿಗಾರರೂ

ಉದ್ಯೋಗ ಅವಕಾಶ ಆಗಿದೆ. ಆದರೆ ಉದ್ಯೋಗ ಖಾತ್ರಿ ಸ್ಥಳದಲ್ಲಿ ಸರಕಾರದ ಯಾವುದೇ ಸೌಲಭ್ಯ ಕಾಣುತ್ತಾ ಇಲ್ಲ ಕೆಲಸದ ಸ್ಥಳದಲ್ಲಿ ನೀರಿನ ಹಾಗೂ ಆರೋಗ್ಯ ವ್ಯವಸ್ಥೆ ಇಲ್ಲ. ಸರಕಾರದ ಎಲ್ಲಾ ಸೌಲಭ್ಯ ನೀಡಬೇಕೆಂದು ಕೂಲಿಗಳು ಆಗ್ರಹಿಸಿದರು

ಕೂಲಿಗಾರ ಮಹಿಳೆ ಕಲ್ಲವ್ವ ಬಿರಾದಾರ ಮಾತನಾಡಿ ಕೂಲಿಗಾರರಿಗೆ 100 ಜನ ಕೆಲಸ ನೀಡಬೇಕೆಂದು ಸರಕಾರದ ಆದೇಶ ಇದೆ. ಆ ಪ್ರಕಾರ ಇಲ್ಲಿ ಕೆಲಸ ಮಾಡುವ ವರ್ಷದಲ್ಲಿ 50 ದಿನ ಕೆಲಸ ನೀಡಿದ್ದಾರೆ. ಇನ್ನು 50 ದಿನ ಕೆಲಸ ಬಾಕಿ ಇದೆ. ಆ ಪ್ರಕಾರ  ನಮಗೆ 50 ದಿನ ಕೆಲಸ ನೀಡಬೇಕೆಂದು ಸರಕಾರಕ್ಕೆ ವಿನಂತಿ ಮಾಡಿದರು.

ಸುದ್ದಿ ಓದಿ