ಮುಂಡರಗಿ

ತುಟ್ಟಿ ಭತ್ಯೆ ಹೆಚ್ಚಳ: ನೌಕರರ ಸಂಘ ಹರ್ಷ

ತುಟ್ಟಿ ಭತ್ಯೆ ಹೆಚ್ಚಳ: ನೌಕರರ ಸಂಘ ಹರ್ಷ

ಮುಂಡರಗಿ 08: ರಾಜ್ಯ ಸರ್ಕಾರವು ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಜುಲೈ 1 ರಿಂದ ಅನ್ವಯವಾಗುವಂತೆ 3.75ಅ ಬಿಡುಗಡೆ ಮಾಡಿ ಮೂಲವೇತನದ ಶೇ.27.25 ರಿಂದ ಶೇ 31ಕ್ಕೆ ಹೆಚ್ಚಳ ಮಾಡಲಾಗಿರುವದರಿಂದ ಸರಕಾರಿ ನೌಕರರ ಸಂಘದ ಮುಂಡರಗಿ ತಾಲೂಕ ಶಾಖೆಯು ಹರ್ಷ ವ್ಯಕ್ತಪಡಿಸಿದೆ. 

ಸಕಾಲದಲ್ಲಿ ತುಟ್ಟಿ ಭತ್ಯೆಯನ್ನು ಬಿಡುಗಡೆಗೊಳಿಸಿ, ಸಮಸ್ತ ನೌಕರರ ಹಿತವನ್ನು ರಕ್ಷಿಸಿದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ, ಸಂಘದ ರಾಜ್ಯಾಧ್ಯಕ್ಷರಾದ ಸಿ ಷಡಕ್ಷರಿ, ಮತ್ತು ಸರ್ಕಾರದ ಆರ್ಥಿಕ ಇಲಾಖೆಯ ಎಲ್ಲಾ ಉನ್ನತ ಅಧಿಕಾರಿಗಳಿಗೆ ಮುಂಡರಗಿ ತಾಲೂಕ ಅಧ್ಯಕ್ಷ ನಾಗರಾಜ ಹಳ್ಳಿಕೇರಿ, ಕಾರ್ಯದರ್ಶಿ ಶಂಕರ ಸರ್ವದೆ ಕೃತಜ್ಞತೆ ಸಲ್ಲಿಸಿದ್ದಾರೆ. 


ಸುದ್ದಿ ಓದಿ