ಎಮಿನೆಂಟ್ ಎಜುಕೇಟರ್ ಅವಾರ್ಡ್ ಪುರಸ್ಕೃತ ಪ್ರೊ. ವಾಸುದೇವ ಪಾರ್ವತಿ, ಪವನಕುಮಾರ್ ಬೆಟಗೇರಿ ಅವರಿಗೆ ಸನ್ಮಾನ
ಬೆಟಗೇರಿ, ಸೆ. 24: ಎಮಿನೆಂಟ್ ಎಜುಕೇಟರ್ ಅವಾರ್ಡ್ಗೆ ಪುರಸ್ಕೃತರಾದ ಪ್ರೊ. ವಾಸುದೇವ ಪಾರ್ವತಿ ಹಾಗೂ ವಿದೇಶ ಪ್ರವಾಸ ಕೈಗೊಳ್ಳುತ್ತಿರುವ ಪವನಕುಮಾರ್ ಬೆಟಗೇರಿ ಅವರನ್ನು ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಹಾಗೂ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಲೋಕಲ್ ಸೆಂಟರ್ ಧಾರವಾಡ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು. ಶಿಕ್ಷಣ, ಕಲೆ, ಸಾಮಾಜಿಕ ಚಟುವಟಿಕೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅವರು ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಈ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಬ್ಬರ ಸಾಧನೆ ಹಾಗೂ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದ ಪದಾಧಿಕಾರಿಗಳು, ಅವರ ಮುಂದಿನ ಕಾರ್ಯಗಳಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ಉಪಾಧ್ಯಕ್ಷ ಸುರೇಶ್ ಬೆಟಗೇರಿ, ಸಹಕಾರ್ಯದರ್ಶಿ ಕೃಷ್ಣಮೂರ್ತಿ ಗೊಲ್ಲರ, ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ, ಧಾರವಾಡ ಲೋಕಲ್ ಸೆಂಟರ್ನ ಅಧ್ಯಕ್ಷ ಇಂಜಿನಿಯರ್ ಸುನೀಲ್ ಬಾಗೇವಾಡಿ, ಉಪಾಧ್ಯಕ್ಷ ಅರುಣಕುಮಾರ್ ಶೀಲವಂತರ, ಖಜಾಂಚಿ ಕಬೀರ್ ನದಾಫ್, ಡಾ. ಉದಯ ರಾಯ್ಕರ್, ಸುಧೀಂದ್ರ ದೇಶಪಾಂಡೆ, ಅಲ್ತಾಫ್ ಅಲಿ ಹತ್ತಿಮತ್ತೂರು, ಶ್ರೀಕಾಂತ ಗಾಯಕ್ವಾಡ್, ಶಂಕರ ಮೇಸ್ತ್ರಿ ಸೇರಿದಂತೆ ಎರಡೂ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರೊ. ವಾಸುದೇವ ಪಾರ್ವತಿ ಹಾಗೂ ಪವನಕುಮಾರ್ ಬೆಟಗೇರಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ, ಅವರ ಸಾಧನೆ ಹಾಗೂ ಮುಂದಿನ ಪಯಣಕ್ಕೆ ಶುಭಾಶಯ ಕೋರಲಾಯಿತು.