ಪುರುಷರ ಕಬಡ್ಡಿ ಪಂದ್ಯಾವಳಿಗೆ ಉದಯೋನ್ಮುಖ ಕ್ರೀಡಾಪಟುಗಳು ಆಯ್ಕೆ
ಲೋಕದರ್ಶನ ವರದಿ
ಬ್ಯಾಡಗಿ 21: ತಮಿಳುನಾಡಿನ ತಿರುಚನಾಪಳ್ಳಿ ಭಾರತಿದಾಸನ್ ವಿಶ್ವವಿದ್ಯಾಲಯದ ಆವರಣದಲ್ಲಿ ಡಿ. 23ರಿಂದ ಆರಂಭವಾಗಲಿರುವ ಅಂತರ ವಿಶ್ವವಿದ್ಯಾಲಯ ಪುರುಷರ ಕಬಡ್ಡಿ ಪಂದ್ಯಾವಳಿಗೆ ಜಿಲ್ಲೆಯ 5ಉದಯೋನ್ಮುಖ ಕ್ರೀಡಾಪಟುಗಳು ಆಯ್ಕೆಯಾಗಿರುತ್ತಾರೆ.
ಬ್ಯಾಡಗಿ ಪಟ್ಟಣದ ಮೌನೇಶ್ ಕಮ್ಮಾರ, ಶಿಗ್ಗಾವಿ ಪಟ್ಟಣದ ರಮೇಶ ಇಂಗಳಗಿ, ವಿಜಯ್ ಇಂಗಳಗಿ ಹಾಗೂ ಸಚಿನ್ ಇಂಗಳಗಿ ಕರ್ನಾಟಕ ವಿಶ್ವವಿದ್ಯಾಲಯ ತಂಡದಿಂದಲೂ, ಶಿಗ್ಗಾವಿಯ ಇನ್ನೋರ್ವ ಕ್ರೀಡಾಪಟು ಕೃಷ್ಣ ಬ್ಯಾಹಟ್ಟಿ ಕಲಬುರ್ಗಿ ವಿ.ವಿ.ಯಿಂದ ಡಿ. 23ರಿಂದ 27ರವರೆಗೆ 4ದಿನಗಳ ಕಾಲ ನಡೆಯಲಿರುವ ಅಂತರ ವಿಶ್ವವಿದ್ಯಾಲಯ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಉತ್ತಮ ಸಾಧನೆ ತೋರುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿರುವ ಕ್ರೀಡಾಪಟುಗಳಿಗೆ ಹಾವೇರಿ ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಮಂಜಣ್ಣ ಎಲಿ, ಕಾರ್ಯದರ್ಶಿ ಶಿವಾನಂದ ಮಲ್ಲನಗೌಡರ, ಖಜಾಂಚಿ ಗಂಗಾಧರ ಎಲಿ, ಪದಾಧಿಕಾರಿಗಳಾದ ಪ್ರಕಾಶ ಹಾವೇರಿ, ರಾಜೇಶ್ ಮಾಳಗಿ, ಮಲ್ಲಿಕಾರ್ಜುನ ಬಳ್ಳಾರಿ, ಮಲ್ಲಿಕಾರ್ಜುನ ಅಂಗಡಿ, ಮಾರುತಿ ಜನ್ನು, ಎಂ.ಆರ್. ಕೋಡಿಹಳ್ಳಿ, ಎ.ಟಿ.ಪೀಠದ, ವಿಜಯಕುಮಾರ ಮಾಳಗಿ, ಕಿರಣ ಕಂಬಳಿ, ಶಿವಯೋಗಿ ಎಲಿ, ಪುನೀತ ಲಕ್ಷ್ಮೇಶ್ವರ, ಪಾರ್ವತಿ ಕುರುವತ್ತೇರ, ಕೋಚ್ ಮಂಜುಳಾ ಭಜಂತ್ರಿ, ಕಬಡ್ಡಿ ತೀರ್ುಗಾರರ ಮಂಡಳಿ ಛೇರಮನ್ ಸಿ.ಜಿ.ಚಕ್ರಸಾಲಿ, ನಂದೀಶ್ ದಳವಾಯಿ, ಸದಸ್ಯರಾದ ಬಿ.ಸಿ.ದಾಣ್ಗಲ್ ಮಾರುತಿ ಚೌಹಾಣ, ಎ.ಬಿ.ಕಲ್ಮನಿ, ಜಿನ್ನಾ ಹಲಗೇರಿ, ಶಿವಣ್ಣ ಜಂಗರಡ್ಡೇರ, ಶಿವರಾಜ್ ಗುಂಡೆ ಎಂ.ಕೆ.ಹೊಸ್ಮನಿ, ಕುಮಾರಸ್ವಾಮಿ ಹಿರೇಮಠ, ರಮೇಶ ಕರಬಣ್ಣನವರ, ಬಿ.ಆರ್. ಹುಲ್ಮನಿ, ಬಸವರಾಜ ಹೊಸಪೇಟಿ, ಎನ್.ವಿರೇಶ, ಬಸವರಾಜಪ್ಪ, ಎಸ್.ಎಂ.ಸೋಮನಹಳ್ಳಿ, ವಿರೇಶ್ ಬಾರ್ಕಿ ನಾಗರಾಜ ಮೇಡ್ಲೇರಿ, ಗೋಣಿಬಸಪ್ಪ ಹಾಗೂ ಮಾರುತಿ ಇನ್ನಿತರರು ಅಭಿನಂದಿಸಿದ್ದಾರೆ.