ಶಿಗ್ಗಾವ್

ತುರ್ತು ಪರಿಸ್ಥಿತಿ ಕರಾಳ ದಿನಾಚರಣೆ

ತುರ್ತು ಪರಿಸ್ಥಿತಿ ಕರಾಳ ದಿನಾಚರಣೆ

ಶಿಗ್ಗಾವಿ 26:  ತುರ್ತು ಪರಿಸ್ಥಿತಿ ಹೇರಿ ಅಂದಿನ ಕಾಂಗ್ರೆಸ್ ಪ್ರಧಾನಿ ಇಂದಿರಾಗಾಂಧಿ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ ಎಂದು ಶಿಗ್ಗಾವಿ ಬಿಜೆಪಿ ತಾಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ ಹೇಳಿದರು. 

ಪಟ್ಟಣದ ಮುಖ್ಯಮಂತ್ರಿಗಳ ಮನೆಯ ಸಭಾಂಗಣದಲ್ಲಿ ಏರಿ​‍್ಡಸಿದ ತುರ್ತು ಪರಿಸ್ಥಿತಿ ಕರಾಳ ದಿನಾಚರಣೆಯಲ್ಲಿ ಮಾತನಾಡಿದ ಅವರು ಸ್ವಾರ್ಥದ ಅಧಿಕಾರಕ್ಕಾಗಿ ಸಂವಿಧಾನವನ್ನು ದಿಕ್ಕರಿಸಿ ಸ್ವಾತಂತ್ರ್ಯ ಹರಣ ಮಾಡಿದ ಆ ಕರಾಳ ದಿನವನ್ನು ದೇಶದ ಜನ ಇಂದಿಗೂ ಮರೆತಿಲ್ಲ ಕಾಂಗ್ರೆಸ ಪಕ್ಷಕ್ಕೆ ಅಧಿಕಾರ ಕೊಟ್ಟರೆ ಪ್ರಜೆಗಳನ್ನು ಕೈಗೊಂಬೆಯನ್ನಾಗಿ ಮಾಡಿಕೊಳ್ಳುತ್ತಾರೆ ಎಂಬುದನ್ನು ಜನತೆ ಮರೆತಿಲ್ಲ ಅದರ ಶಾಪವೇ ಇಂದು ಕಾಂಗ್ರೆಸ್‌ನ್ನು ಜನತೆ ಯಾವ ಸ್ಥಾನದಲ್ಲಿಟ್ಟಿದೆ. ಎಂಬುದನ್ನು ಕಾಂಗ್ರೆಸ್ ತಿಳಿಯಬೇಕಿದೆ ಪ್ರಧಾನಿ ಮೋದಿಜಿ ಅವರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜನಪರ ಆಡಳಿತವನ್ನು ಕಂಡು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದರು.  

ಈ ಸಂದರ್ಭದಲ್ಲಿ ಕೆಎಂಎಫ್ ನಿರ್ದೇಶಕ ಬಸನಗೌಡ ಮೇಲಿನಮನಿ, ಭಾಜಪ ಪ್ರಧಾನ ಕಾರ್ಯದರ್ಶಿಗಳಾದ  ಬಸವರಾಜ ನಾರಾಯಣಪುರ, ರೇಣುಕನಗೌಡ ಪಾಟೀಲ್ ಎಸ್‌.ಟಿ ಮೋರ್ಚಾ ಕಾರ್ಯದರ್ಶಿ ಬಸನಗೌಡ ರಾಮನಗೌಡ್ರ, ಮಲ್ಲಿಕಾರ್ಜುನ ಹಡಪದ, ನಾಗಪ್ಪ ತುಪ್ಪದ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ