ಬಳ್ಳಾರಿ

ಬಾಪೂಜಿ ಗ್ರಾಮ ಸ್ವರಾಜ್ಯ ಪರಿಕಲ್ಪನೆ ಸಾಕಾರಗೊಳಿಸಿ:ಲೋಕೇಶ್

ಬಾಪೂಜಿ ಗ್ರಾಮ ಸ್ವರಾಜ್ಯ ಪರಿಕಲ್ಪನೆ ಸಾಕಾರಗೊಳಿಸಿ:ಲೋಕೇಶ್

ಲೋಕದರ್ಶನ ವರದಿ 

ಕಂಪ್ಲಿ 02: ಅಭಿವೃದ್ಧಿ ವಿಷಯದಲ್ಲಿ ಸದಸ್ಯರೆಲ್ಲರೂ ಸಂಘಟಿತರಾಗಿ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸಬೇಕು ಮಹಾತ್ಮಗಾಂಧೀಜಿಯವರ ಗ್ರಾಮ ಸ್ವರಾಜ್ಯ ಮಾಡುವ ಕನಸು ನನಸಾಗಬೇಕಾದರೆ ಸ್ಥಳೀಯ ಜನಪ್ರತಿನಿಧಿಗಳು ಒಂದಾಗಿ ಕೆಲಸ ಮಾಡುವುದು ತುಂಬಾ ಮುಖ್ಯ ಎಂದು ಸಂಪನ್ಮೂಲ ವ್ಯಕ್ತಿ ಎಂ. ಲೋಕೇಶ್ ಹೇಳಿದರು. 

ಇಲ್ಲಿಯ ಎಪಿಎಂಸಿ ಆವರಣದಲ್ಲಿ ಗುರುವಾರ ನಡೆದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ ಕಂಪ್ಲಿ ತಾಲ್ಲೂಕು ಘಟಕ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಸದಸ್ಯರು ಸಮುದಾಯದ ಅಭಿಪ್ರಾಯಗಳನ್ನು ಪ್ರತಿನಿಧಿಸಬೇಕು. ಆಡಳಿತ ಮಂಡಳಿ ಸಾಮಾನ್ಯ ಸಭೆಯಲ್ಲಿ ಅಭಿವೃದ್ಧಿ, ಸರ್ಕಾರದ ಯೋಜನೆ, ಅನುದಾನ ಕುರಿತು ಪ್ರಶ್ನಿಸುವ ಮನೋಭಾವ ರೂಢಿಸಿಕೊಳ್ಳಬೇಕು. ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ ಅಸ್ತಿತ್ವಕ್ಕೆ -ಬಾಪೂಜಿ ಗ್ರಾಮ ಸ್ವರಾಜ್ಯ ಪರಿಕಲ್ಪನೆ ಸಾಕಾರಗೊಳಿಸಿಎಂದರು.ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ವಿಜಯನಗರ ಜಿಲ್ಲೆ ಸಂಚಾಲಕ ಸಣ್ಣಕ್ಕಿ ಲಕ್ಷ್ಮಣ ಮಾತನಾಡಿ, ‘ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿದತೀರ್ಮಾನಗಳನ್ನು ಅಧಿಕಾರಿಗಳಿಂದ ಬದಲಿಸಲಾಗದು. ಪ್ರತಿ ಸಭೆಯ ನಡಾವಳಿ ಪ್ರತಿ ಪಡೆದುಕೊಂಡು ಆಡಳಿತ ಮಂಡಳಿ ತೆಗೆದುಕೊಂಡ ನಿರ್ಧಾರಗಳು ಕಾರ್ಯರೂಪಕ್ಕೆ ಬಂದಿವೆ ಎಂದು ಪರೀಶೀಲಿಸಬೇಕು’ ಎಂದು ಸದಸ್ಯರಿಗೆ ತಿಳಿಸಿದರು.ಸಂಪನ್ಮೂಲ ವ್ಯಕ್ತಿ ಡಾ. ಕುರುವಳ್ಳಿ ತಿಮ್ಮಯ್ಯ, ಒಕ್ಕೂಟದ ಜಿಲ್ಲಾ ಸಂಚಾಲಕ ಹಂಪಯ್ಯ, ಗೌರವ ಅಧ್ಯಕ್ಷ ಹರಿವರ್ಧನರೆಡ್ಡಿ, ಜಿಲ್ಲಾ ಸಂಚಾಲಕರಾದ ಶ್ರೀಧರ್, ಪ್ರಕಾಶ್‌ಗೌಡ, ಕುರುಗೋಡು ಘಟಕ ಅಧ್ಯಕ್ಷ ಎಚ್‌. ಲಕ್ಷ್ಮಿರೆಡ್ಡಿ, ಪದಾಧಿಕಾರಿ ಡಿ. ಮಾರೆಣ್ಣ, ನೆಲ್ಲೂಡಿ ಗ್ರಾ.ಪಂ ಉಪಾಧ್ಯಕ್ಷ ಹನುಮಯ್ಯ, ಕಂಪ್ಲಿ ತಾಲ್ಲೂಕು ಗ್ರಾಮ ಪಂಚಾಯಿತಿ ಸದಸ್ಯರು ಭಾಗವಹಿಸಿದ್ದರು.ಆಯ್ಕೆ: ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ ಕಂಪ್ಪಿ ತಾಲ್ಲೂಕು ಘಟಕಕ್ಕೆ ಸಣಾಪುರ ಭಾಸ್ಕರರೆಡ್ಡಿ(ಗೌರವಧ್ಯಕ್ಷ), ಎಮ್ಮಿಗನೂರು ಜಡೇಶ್(ಅಧ್ಯಕ್ಷ), ಸಣಾಪುರ ತಿಪ್ಪೇಸ್ವಾಮಿ, ಹೊನ್ನೂರಮ್ಮ(ಉಪಾಧ್ಯಕ್ಷರು), ಮೆಟ್ರಿ ಎಚ್‌. ಕುಮಾರಸ್ವಾಮಿ(ಪ್ರಧಾನ ಕಾರ್ಯದರ್ಶಿ), ಮೌಲಸಾಬ್, ಮೆಟ್ರಿ ಹೊನ್ನೂರಮ್ಮ(ಸಹ ಕಾರ್ಯದರ್ಶಿ), ಮಾರೇಶ್(ಖಜಾಂಚಿ), ಸಂಘಟನಾ ಕಾರ್ಯದರ್ಶಿಗಳಾಗಿ ಹನುಮಯ್ಯ, ಎ.ಕೆ. ಲೋಕೇಶ್, ಲಕ್ಷ್ಮೀ, ಸೋಮೇಶ್ವರಿ, ಪಾರ್ವತಮ್ಮ, ಹೊನ್ನಮ್ಮ, ಎಚ್‌.ಸುರೇಶ್ ಆಯ್ಕೆಯಾದರು. 


ಸುದ್ದಿ ಓದಿ