ಅರ್ಹ ಕಟ್ಟಡ- ಇತರೆ ನಿಮರ್ಾಣ ಕಾಮರ್ಿಕ ಫಲಾನುಭವಿಗಳಿಗೆ ನೆರವು: ನೋಂದಣಿಗೆ ಸುಲಭ ಪ್ರಕ್ರಿಯೆ ಕಾಮರ್ಿಕ ಇಲಾಖೆ 'ಸೌಲಭ್ಯಗಳ ಆಗರ'
ಕಾಮರ್ಿಕ ಇಲಾಖೆಯ ಕನರ್ಾಟಕ ಕಟ್ಟಡ ಮತ್ತು ಇತರೆ ನಿಮರ್ಾಣ ಕಾಮರ್ಿಕರ ಕಲ್ಯಾಣ ಮಂಡಳಿಯು ವಿವಿಧ ಯೋಜನೆಗಳ ಮೂಲಕ ಕಟ್ಟಡ ಮತ್ತು ಇತರೆ ನಿಮರ್ಾಣ ಕಾಮರ್ಿಕರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಕಾಮರ್ಿಕ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಾಯಧನ, ವಸತಿ ಸೌಕರ್ಯ, ಮದುವೆಗೆ ಸಹಾಯಧನ, ಪ್ರಮುಖ ವೈದ್ಯಕೀಯ ವೆಚ್ಚ, ಪಿಂಚಣಿ ಸೇರಿದಂತೆ ಇನ್ನೂ ಅನೇಕ ಪ್ರಮುಖವಾದ ಸೌಲಭ್ಯಗಳನ್ನು ಕಟ್ಟಡ ಹಾಗೂ ಇತರೆ ನಿಮರ್ಾಣ ಕಾಮರ್ಿಕರಿಗೆ ನೆರವಾಗಲು ಒದಗಿಸಲಾಗುತ್ತಿದೆ. ಕಾಮರ್ಿಕರ ನೋಂದಣಿಗೆ ಸಕರ್ಾರ ಸುಲಭ ಪ್ರಕ್ರಿಯೆಯನ್ನು ಅಳವಡಿಸಿದ್ದು, ಈ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳು ಕಾಮರ್ಿಕ ಮಂಡಳಿಗೆ ನೋಂದಣಿಯಾಗುವುದರ ಮೂಲಕ ಸದುಪಯೋಗ ಪಡೆದುಕೊಳ್ಳಬಹುದು.
ಫಲಾನುಭವಿಗೆ ಸಿಗುವ ಸೌಲಭ್ಯಗಳು:
ಮೂರು ವರ್ಷಗಳ ಸದಸ್ಯತ್ವ ಹೊಂದಿದ ಹಾಗೂ 60 ವರ್ಷ ಪೂರೈಸಿದ ಫಲಾನುಭವಿಗೆ ಮಾಸಿಕ 2,000 ಸಾವಿರ ರೂ. ಹಾಗೂ ಮೃತ ಪಿಂಚಣಿದಾರರ ಪತಿ, ಪತ್ನಿಗೆ ಮಾಸಿಕ 1,000 ಸಾವಿರ ರೂ. ಪಿಂಚಣಿ ಸೌಲಭ್ಯವನ್ನು ನೀಡಲಾಗುತ್ತದೆ. ನೋಂದಾಯಿತ ಫಲಾನುಭವಿಯು ಖಾಯಿಲೆಗಳಿಂದ ಅಥವಾ ಕಟ್ಟಡ ಕಾಮಗಾರಿ ಸಂದರ್ಭದಲ್ಲಿ ಅಪಘಾತದಿಂದ ಶಾಶ್ವತ, ಭಾಗಶಃ ಅಂಗವಿಕಲತೆ ಹೊಂದಿದ್ದರೆ ಮಾಸಿಕ ಸಹಾಯಧನದೊಂದಿಗೆ ವೈಕಲ್ಯತೆಗೆ ಸಂಬಂಧಿಸಿದ ಸಾಧನಗಳನ್ನು, ಅನುಗ್ರಹ ರಾಶಿ ಸಹಾಯಧನ, ಕನ್ನಡಕ, ಶ್ರವಣಯಂತ್ರ, ಕೃತಕ ಕೈಕಾಲು ಮತ್ತು ಗಾಲಿ ಕುಚರ್ಿ ಸೌಲಭ್ಯಗಳನ್ನು ನೀಡಲಾಗುತ್ತದೆ.
ರಾಜ್ಯದಾದ್ಯಂತ ವಿದ್ಯಾಭ್ಯಾಸದಲ್ಲಿ ತೊಡಗಿರುವ ನೋಂದಾಯಿತ ಕಾಮರ್ಿಕರ ಇಬ್ಬರು ಮಕ್ಕಳಿಗೆ ಕೆಎಸ್ಆರ್ಟಿಸಿ ಬಸ್ಪಾಸ್ನ ಸೌಲಭ್ಯ ಒದಗಿಸಲಾಗುವುದು. ಮಹಿಳಾ ಫಲಾನುಭವಿಯು ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಆಕೆಯ ಮಗುವಿನ ಶಾಲಾ ಪೂರ್ವ ಶಿಕ್ಷಣ ಮತ್ತು ಪೌಷ್ಠಿಕತೆಗಾಗಿ ಮಗುವಿಗೆ ಮೂರು ವರ್ಷಗಳು ತುಂಬುವವರೆಗೆ ವಾಷರ್ಿಕ ರೂ.6,000 ಗಳ ಸಹಾಯಧನ, ಕಲಿಕೆ ಭಾಗ್ಯ ಯೋಜನೆಯಡಿ ಫಲಾನುಭವಿಯ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನರ್ಸರಿಯಿಂದ ಸ್ನಾತಕೋತ್ತರ ಪದವಿಯವರೆಗೆ ರೂ.3,000 ಸಾವಿರ ದಿಂದ ರೂ.55,000 ಸಾವಿರದವರೆಗೆ ಶೈಕ್ಷಣಿಕ ಸಹಾಯಧನ ನೀಡಲಾಗುತ್ತದೆ.
ಕಾಮರ್ಿಕ ಗೃಹ ಭಾಗ್ಯ ಯೋಜನೆಯಡಿ ವಸತಿ ಸೌಲಭ್ಯಕ್ಕಾಗಿ 2 ಲಕ್ಷ ರೂ. ವರೆಗೆ ಮುಂಗಡ ಸಾಲ, ತಾಯಿ ಬಾಂಡ್ ಯೋಜನೆಯಡಿ ಮಹಿಳಾ ಫಲಾನುಭವಿಯ ಮೊದಲ ಎರಡು ಮಕ್ಕಳಿಗೆ ಹೆಣ್ಣು ಮಗುವಿನ ಜನನಕ್ಕೆ 30,000 ಮತ್ತು ಗಂಡು ಮಗುವಿನ ಜನನಕ್ಕೆ 20,000 ರೂ. ಹೆರಿಗೆ ಸೌಲಭ್ಯ ಒದಗಿಸಲಾಗುತ್ತದೆ. ಅಂತ್ಯಕ್ರಿಯೆ ವೆಚ್ಚಕ್ಕಾಗಿ 4,000 ರೂ. ಹಾಗೂ ಅನುಗ್ರಹ ರಾಶಿ ಯೋಜನೆಯಡಿ 50,000 ಸಾವಿರ ರೂ. ಸಹಾಯಧನ, ಕಾಮರ್ಿಕ ಚಿಕಿತ್ಸಾ ಭಾಗ್ಯ ಯೋಜನೆಯಡಿ 2 ಲಕ್ಷ ರೂ. ವರೆಗೆ ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ ಒದಗಿಸಲಾಗುತ್ತದೆ.
ಗೃಹ ಬಾಂಡ್ ಯೋಜನೆಯಡಿ ಫಲಾನುಭವಿ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ತಲಾ 50,000 ಸಾವಿರ ರೂ. ಮದುವೆ ಸಹಾಯಧನ, ಕಾಮರ್ಿಕ ಅನಿಲ ಭಾಗ್ಯ ಯೋಜನೆಯಡಿ ಅನಿಲ ಸಂಪರ್ಕದೊಂದಿಗೆ ಎರಡು ಬರ್ನರ್ ಸ್ಟೌವ್ ಎಲ್ಪಿಜಿ ಸಂಪರ್ಕ ಸೌಲಭ್ಯ, ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವಂತಹ ಹಾಗೂ ವಾಸಸ್ಥಳದಿಂದ ಬೆಂಗಳೂರಿಗೆ ಪ್ರಯಾಣಿಸುವ ನೋಂದಾಯಿತ ಕಟ್ಟಡ ಕಾಮರ್ಿಕರಿಗೆ ಬಿಎಂಟಿಸಿ ಬಸ್ಪಾಸ್ ಸೌಲಭ್ಯ, ಶ್ರಮ ಸಾಮಥ್ರ್ಯ ಯೋಜನೆಯಡಿ 20,000 ಸಾವಿರ ವರೆಗೆ ಕಮ್ ಟೂಲ್ಕಿಟ್ ಸೌಲಭ್ಯವನ್ನು ಇಲಾಖೆಯಿಂದ ಒದಗಿಸಲಾಗುತ್ತದೆ.
ನೋಂದಾಯಿತ ಫಲಾನುಭವಿಯ ಅವಲಂಬಿತರಿಗೆ ಶ್ರಮ ಸಾಮಥ್ರ್ಯ ತರಬೇತಿ ಸೌಲಭ್ಯ, ಕಾಮರ್ಿಕ ಆರೋಗ್ಯ ಭಾಗ್ಯ ಯೋಜನೆಯಡಿ ನೋಂದಾಯಿತ ಫಲಾನುಭವಿ ಹಾಗೂ ಅವರ ಅವಲಂಬಿತರಿಗೆ 300 ರೂ. ದಿಂದ 10,000 ರೂ. ವರೆಗೆ ವೈದ್ಯಕೀಯ ಸಹಾಯಧನ, ಅಪಘಾತದಲ್ಲಿ ಮರಣ ಹೊಂದಿದ್ದಲ್ಲಿ 5 ಲಕ್ಷ ರೂ., ಸಂಪೂರ್ಣ ಶಾಶ್ವತ ದುರ್ಬಲತೆಯಾದಲ್ಲಿ 2 ಲಕ್ಷ ರೂ. ಮತ್ತು ಭಾಗಶಃ ಶಾಶ್ವತ ದುರ್ಬಲತೆಯಾದಲ್ಲಿ 1 ಲಕ್ಷ ರೂ. ಪರಿಹಾರ ಸೇರಿದಂತೆ ಶಿಶು ಪಾಲನಾ, ಮರುಪಾವತಿ ಸೌಲಭ್ಯಗಳನ್ನು ಪಡೆಯಬಹುದು.
ನೋಂದಣಿಗೆ ಅರ್ಹತೆ:
ಕನರ್ಾಟಕ ಕಟ್ಟಡ ಮತ್ತು ಇತರೆ ನಿಮರ್ಾಣ ಕಾಮರ್ಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿಗೆ ಕಟ್ಟಡ ನಿಮರ್ಾಣದಲ್ಲಿ 12 ತಿಂಗಳು ಹಾಗೂ ಇತರೆ ನಿಮರ್ಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳು ಕೆಲಸ ನಿರ್ವಹಿಸಿರಬೇಕು. 18 ರಿಂದ 60 ವರ್ಷದೊಳಗಿನ ಕಾಮರ್ಿಕರು ನೋಂದಣಿಗೆ ಅರ್ಹರಾಗಿರುತ್ತಾರೆ.
ನೋಂದಣಿಗೆ ಅಗತ್ಯ ದಾಖಲೆಗಳು:
ನಮೂನೆ ವಿ-1 ರಲ್ಲಿ ವೈಯಕ್ತಿಕ ವಿವರಗಳನ್ನು ಭತರ್ಿ ಮಾಡಿ ಅದರೊಂದಿಗೆ ಉದ್ಯೋಗ ದೃಢೀಕರಣ ಪತ್ರ ಅಥವಾ ಸ್ವಯಂ ದೃಢೀಕರಣ ಪತ್ರ, ಆಧಾರ್ ಕಾಡರ್್ ಪ್ರತಿ, ಪಾಸ್ಪೋಟರ್್ ಅಳತೆಯ ಮೂರು ಭಾವಚಿತ್ರಗಳು, ವಯಸ್ಸಿನ ದಾಖಲೆಯ ಪ್ರತಿಯನ್ನು ಕನರ್ಾಟಕ ಕಟ್ಟಡ ಮತ್ತು ಇತರೆ ನಿಮರ್ಾಣ ಕಾಮರ್ಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಸಂದರ್ಭದಲ್ಲಿ ಸಲ್ಲಿಸಬೇಕು.
ನೋಂದಣಿಯ ಕಚೇರಿಗಳು:
ಕಾಮರ್ಿಕ ಅಧಿಕಾರಿಗಳು, ಹಿರಿಯ ಕಾಮರ್ಿಕ ನಿರೀಕ್ಷಕರು, ಕಾಮರ್ಿಕ ನಿರೀಕ್ಷಕರ ಕಚೇರಿಗಳಲ್ಲಿ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ ಮುಖ್ಯ ಅಭಿಯಂತರರು, ಗ್ರಾಹಕ ಸೇವಾ ಕೇಂದ್ರ (ಸಿಎಸ್ಸಿ ಸೆಂಟರ್)ಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು ಹಾಗೂ ನೋಂದಣಿ ಸದಸ್ಯತ್ವ ಮುಂದುವರಿಕೆಗೆ ನಮೂನೆ ವಿ(ಇ)ರಲ್ಲಿ ಅಜರ್ಿ ಸಲ್ಲಿಸಿ ಸದಸ್ಯತ್ವ ನವೀಕರಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಕನರ್ಾಟಕ ಕಟ್ಟಡ ಮತ್ತು ಇತರೆ ನಿಮರ್ಾಣ ಕಾಮರ್ಿಕರ ಕಲ್ಯಾಣ ಮಂಡಳಿ ಮತ್ತು ಕಾಮರ್ಿಕ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಕಚೇರಿಗಳು, ಕಲ್ಯಾಣ ಸುರಕ್ಷಾ ಭವನ, ಬನ್ನೇರುಘಟ್ಟ ರಸ್ತೆ, ಡೈರಿ ಸರ್ಕಲ್, ಬೆಂಗಳೂರು-560029, ಸಹಾಯವಾಣಿ ಸಂ: 155214 ಗೆ ಸಂಪಕರ್ಿಸಬಹುದು.
- ವೀರೇಶ್ ವಿಕ್ಟರಿ
ಕೊಪ್ಪಳ
ಮೊ.7996364371