ಇಂದು ವಿದ್ಯುತ್ ವ್ಯತ್ಯಯ
ಬಳ್ಳಾರಿ 17: ಜೆಸ್ಕಾಂ ನಗರ ಉಪವಿಭಾಗ-1 ರ ವ್ಯಾಪ್ತಿಗೆ ಬರುವ 110/11 ಕೆ.ವಿ ಸೌತ್ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಏ.18 ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಜೆಸ್ಕಾಂ ನಗರ ಉಪವಿಭಾಗ-1 ರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎನ್.ಅರೀಫ್ ಅಲಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.110/11ಕೆವಿ ಸೌತ್ ವಿದ್ಯುತ್ ವಿತರಣ ಕೇಂದ್ರದ ಎಫ್-23, ಎಫ್-24, ಎಫ್-25, ಎಫ್-46 ಎಫ್-47ಮತ್ತು ಎಫ್-48, ಫೀಡರ್ಗಳ ವ್ಯಾಪ್ತಿಯ ಬೆಂಗಳೂರು ರಸ್ತೆ, ಅಂದ್ರಾಳ್ ರಸ್ತೆ, ಕೊಲಮಿ ಚೌಕ್, ಕಾರ್ಕಲ ತೋಟ, ಬಾಪೂಜಿ ನಗರ, ಮಿಲ್ಲರ ಪೇಟೆ, ಮೋತಿ ವೃತ್ತ, ತೇರು ಬೀದಿ, ಇಂಡಸ್ಟ್ರೀಯಲ್ ಏರಿಯಾ ಹಂತ-1, ಮಹೇಶ್ ಪೈಪ್ಸ್, ಲಾರಿ ಟರ್ಮಿನಲ್, ಜೈನ್ ರ್ಮಾಕೆಟ್, ಸಾಯಿ ಕಾಲೋನಿ, ಎಪಿಎಮ್ಸಿ, ರಾಣಿತೋಟ, ಮರಿಸ್ವಾಮಿ ಮಠ, ದೊಡ್ಡ ರ್ಮಾಕೆಟ್, ತೋಪಿಗಲ್ಲಿ, ಬೊಮ್ಮನಾಳ್ ರೋಡ್ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.ಗ್ರಾಮೀಣ ಉಪ-ವಿಭಾಗ ವ್ಯಾಪ್ತಿಗೆ ಬರುವ 110/11ಕೆ.ವಿ ಸೌತ್ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಫೀಡರ್ ಎಫ್-26, ಎಫ್-27, ಎಫ್-29 ಮತ್ತು ಎಫ್-43 ವ್ಯಾಪ್ತಿಗೆ ಬರುವ ಗುಗ್ಗರಟ್ಟಿ, ಅಂದ್ರಾಳ್, ಮುಂಡ್ರಗಿ ಪ್ರದೇಶಗಳ ವಿದ್ಯುತ್ ಸರಬರಾಜಿನಲ್ಲೂ ವ್ಯತ್ಯಯ ಉಂಟಾಗಲಿದ್ದು ಸಾರ್ವಜನಿಕರು, ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಅವರು ತಿಳಿಸಿದ್ದಾರೆ.