ಶಿಗ್ಗಾವ್

ವಿದ್ಯುತ್ ಮೀಟರ ಉಚಿತವಾಗಿ ಅಳವಡಿಕೆ: ಪಾಟೀಲ

ವಿದ್ಯುತ್ ಮೀಟರ ಉಚಿತವಾಗಿ ಅಳವಡಿಕೆ: ಪಾಟೀಲ

ಶಿಗ್ಗಾವಿ : ತಾಲೂಕಿನಾದ್ಯಂತ ಬೆಳಕು ಯೋಜನೆಗೆ ಅರ್ಜಿ ಕೊಟ್ಟ ಮನೆಗಳಿಗೆ ಉಚಿತವಾಗಿ ಮೀಟರ ಅಳವಡಿಸುತ್ತಿದ್ದಾರೆ ಯಾರು ಸಹಿತ ಹಣವನ್ನು ನೀಡಬಾರದು ಎಂದು ಭಾಜಪ ಪ್ರಧಾನ ಕಾರ್ಯದರ್ಶಿ ಹಾಗೂ ವಿದ್ಯುತ್ತ ಗುತ್ತಿಗೆದಾರ ರೇಣುಕನಗೌಡ ಪಾಟೀಲ ಹೇಳಿದರು. 

ಪಟ್ಟಣದ ಸುದ್ದಿಗಾರರೊಂದಿಗೆ ಮಾತನಾಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಡವರ ಮಹತ್ವಾಕಾಂಕ್ಷಿ ಯೋಜನೆಯಾದ ಬೆಳಕು ಯೋಜನೆಗೆ  ಇಂದನ ಸಚಿವ ಸುನೀಲ ಕುಮಾರ ಮುಖಾಂತರ ಕಾರ್ಯರೂಪಕ್ಕೆ ಬರುತ್ತಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದ್ದು, ತಾಲೂಕಿನಲ್ಲಿ ಮೀಟರ ಅಳವಡಿಸಲು ಯಾರಾದರೂ ಹಣದ ಆಮಿಷ ಒಡ್ಡಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ಆಗ್ರಹಿಸಿದ್ದಾರೆ. 


ಸುದ್ದಿ ಓದಿ