ಪದಾಧಿಕಾರಿಗಳ ಆಯ್ಕೆ
ಶಿಗ್ಗಾವಿ 06: ಪಟ್ಟಣದ ಮೈಲಾರ ಲಿಂಗೇಶ್ವರ ದೇವಸ್ಥಾನದಲ್ಲಿ ಕನಕದಾಸ ಸೇವಾ ಸಮಿತಿಯ ನಗರ ಘಟಕದ ನೂತನ ಪದಾಧಿಕಾರಿಗಳ ಆಯ್ಕೆಯು ವಿವಿಧ ಹಿರಿಯ ಮುಖಂಡರ ಸಮ್ಮುಖದಲ್ಲಿ ಜರುಗಿತು.
ಸಮೀತಿಯ ನೂತನ ಅಧ್ಯಕ್ಷರಾಗಿ ಪರಶುರಾಮ ಕುದುರಿ, ಉಪಾಧ್ಯಕ್ಷರಾಗಿ ಹನುಮಂತಪ್ಪ ಜವಳಗಟ್ಟಿ, ಕಾರ್ಯದರ್ಶಿಯಾಗಿ ಮಲ್ಲೇಶಪ್ಪ ಮುಳಕೇರಿ, ಖಜಾಂಚಿಯಾಗಿ ನವೀನ ಇಂಗಳಗಿ, ಸಂಘಟನಾ ಕಾರ್ಯದರ್ಶಿಯಾಗಿ ಚಂದ್ರು ಬಂಕಾಪುರ ಅವರುಗಳನ್ನ ಆಯ್ಕೆ ಮಾಡಲಾಗಿದೆ.
ಮುಖಂಡರುಗಳಾದ ಫಕೀರ್ಪ ಕುಂದೂರ, ಮಹಾಂತೇಶ್ ಯಲುವಿಗಿ, ಸಂಗಪ್ಪ ಕಂಕನವಾಡ, ಪುಟ್ಟೆಶ ಮತ್ತೂರ, ಮಹಾಂತೇಶ, ಕಂಕನವಾಡ, ಸುರೇಶ ಬಿಸ್ನಳ್ಳಿ, ರಮೇಶ ಜವಳಗಟ್ಟಿ, ನಿಂಗಪ್ಪ ಮಾವೂರ, ಸಂಗಪ್ಪ ಮಾವೂರ, ಮಲ್ಲೇಶಪ್ಪ ನವರದ, ಚಂದ್ರು ಕೊಡ್ಲಿವಾಡ ಭರಮಣ್ಣ ಬುಳ್ಳಣ್ಣನವರ ಸೇರಿದಂತೆ ವಿವಿಧ ಮುಖಂಡರು ಉಪಸ್ಥಿತರಿದ್ದರು.