ಮೂಡಲಗಿ

ಅಧ್ಯಕ್ಷರಾಗಿ ಜಾತಗಾರ, ಉಪಾಧ್ಯಕ್ಷರಾಗಿ ತಿಗಡಿ ಆಯ್ಕೆ

ಅಧ್ಯಕ್ಷರಾಗಿ ಜಾತಗಾರ, ಉಪಾಧ್ಯಕ್ಷರಾಗಿ ತಿಗಡಿ ಆಯ್ಕೆ
ಮೂಡಲಗಿ, ತಾಲ್ಲೂಕಿನ ಧರ್ಮಟ್ಟಿ ಗ್ರಾಮ ಪಂಚಾಯಿತಿಯಗೆ ಆಯ್ಕೆಯಾದ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರನ್ನು ಮುಖಂಡರು ಹಿರಿಯರು ಸ

ಮೂಡಲಗಿ 04: ತಾಲೂಕಿನ ಧರ್ಮಟ್ಟಿ ಗ್ರಾಪಂಗೆ ಜರುಗಿದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಕ್ತುಮಾ ಸುನಾರ ಜಾತಗಾರ, ಉಪಾಧ್ಯಕ್ಷರಾಗಿ ಕೆಂಚಪ್ಪ ಕಲ್ಲಪ್ಪ ತಿಗಡಿ ಆಯ್ಕೆಯಾಗಿದ್ದಾರೆ.

12 ಜನ ಸದಸ್ಯರನ್ನು ಹೊಂದಿರುವ ಪಂಚಾಯಿತಿಯಲ್ಲಿ ಬಡ್ಡಿ ಮತ್ತು ಸನದಿ ಗುಂಪಿನ ಮಧ್ಯೆ ಪೈಪೋಟಿ ನಡೆಯಿತು. ಎರಡೂ ಗುಂಪಿನ ಪ್ರತಿಸ್ಪರ್ಧಿಗಳು ತಲಾ 6-6 ಮತಗಳ ಪಡೆದು ಸಮಬಲ ಸಾಧಿಸಿದಾಗ ಚುನಾವಣಾಧಿಕಾರಿ, ಪಿಡಿಓ ಹಾಗೂ ಪಿಎಸ್‍ಐ ಎಚ್.ವೈ. ಬಾಲದಂಡಿ ಹಾಗೂ ಮುಖಂಡರ ಸಮ್ಮುಖದಲ್ಲಿ ಚೀಟಿ ಎತ್ತಿದರು. ವಿಶೇಷವೆಂದರೆ ಲಾಟರಿಯಲ್ಲೂ ಬಡ್ಡಿ ಗುಂಪಿನ ಇಬ್ಬರು ಸದಸ್ಯರ ಹೆಸರೇ ಬಂದಿದ್ದರಿಂದ ಅಧ್ಯಕ್ಷ, ಉಪಾಧ್ಯಕ್ಷ ಎರಡು ಸ್ಥಾನಗಳು ಒಂದೆ ಗುಂಪಿಗೆ ದೊರೆತಂತಾಗಿದೆ.  

ಪ್ರಮುಖರಾದ ಚನ್ನಬಸು ಬಡ್ಡಿ, ಮಲೀಕ ಹುಣಶ್ಯಾಳ, ನನ್ನುಸಾಬ ಶೇಖ, ಹನಮಂತ ಕನಕಿಕೋಡಿ, ಓಗೆಪ್ಪ ಬಬಲಿ, ಯಲ್ಲಪ್ಪ ವಾಳದ, ಲಕ್ಕಪ್ಪ ತೆಳಗಡೆ, ಭೀಮಪ್ಪ ಪೂಜೇರಿ, ಲಕ್ಷ್ಮಣ ತೆಳಗಡೆ, ಉದ್ದಪ್ಪ ಬಬಲಿ, ಯಮನಪ್ಪ ಮೇತ್ರಿ, ನಿಂಗಪ್ಪ ಹಾರಗೊಪ್ಪ, ಸದಸ್ಯರಾದ ಪ್ರಭು ಕನಕಿಕೋಡಿ, ಮಹಾದೇವ ಬಡ್ಡಿ, ಯಲ್ಲವ್ವ ವಾಳದ, ಸಾವಿತ್ರಿ ಉಪ್ಪಾರ, ಲಕ್ಷ್ಮಣ ಕೊರಕಪೂಜೇರಿ, ಲಕ್ಕಪ್ಪ ಸನದಿ, ಮಾಯವ್ವ ವಗ್ಗಾಲಿ,ಲಕ್ಷ್ಮೀಬಾಯಿ ಹಳ್ಳೂರ, ಭೀಮಪ್ಪ ಕುಂಬಾರ, ಸವಿತಾ ಭಜಂತ್ರಿ ಇದ್ದರು.

ಸುದ್ದಿ ಓದಿ