ಟಿಪ್ಪರ್ ಹರಿದು ಪಾದಚಾರಿ ವೃದ್ಧ ಗಂಭೀರ

ಟಿಪ್ಪರ್ ಹರಿದು ಪಾದಚಾರಿ ವೃದ್ಧ ಗಂಭೀರ Elderly pedestrian critically injured after being run over by a tipper truck


ಲಕ್ಷ್ಮೇಶ್ವರ 24 : ಪಟ್ಟಣದ ಪ್ರಮುಖ ವೃತ್ತವಾದ ಶಿಗ್ಲಿ ನಾಕಾ ಬಳಿ ಗುರುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪಾದಚಾರಿ ವೃದ್ಧರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ.ಲಕ್ಷ್ಮೇಶ್ವರದ ಕದರಗೇರಿ ಓಣಿಯ ನಿವಾಸಿ ರಾಮಣ್ಣ ಹುರಕರಣವರ ಗಾಯಗೊಂಡ ವೃದ್ಧ ಎಂದು ಗುರುತಿಸಲಾಗಿದೆ.ರಾಮಣ್ಣ ಅವರು ಶಿಗ್ಲಿ ನಾಕಾ ಬಳಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅವರ ಮೇಲೆ ಟಿಪ್ಪರ್ ಹರಿದ ಪರಿಣಾಮ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಘಟನೆ ನಡೆದ ಸ್ಥಳೀಯ ಸಾರ್ವಜನಿಕರು ತಕ್ಷಣವೇ ಗಾಯಾಳು ವೃದ್ಧರನ್ನು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದರು. ನಂತರ ಹೆಚ್ಚಿನ ಹಾಗೂ ಉನ್ನತ ಚಿಕಿತ್ಸೆಗಾಗಿ ಅವರನ್ನು ಗದಗಿನ ಜಿಮ್ಸ್‌ ಆಸ್ಪತ್ರೆಗೆ ರವಾನಿಸಲಾಗಿದೆ.ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಲಕ್ಷ್ಮೇಶ್ವರ ಠಾಣೆಯ ಪೊಲೀಸರು ಸ್ಥಳ ಪರೀಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಕಾರಣವಾದ ಟಿಪ್ಪರ್ ಅನ್ನು ವಶಕ್ಕೆ ಪಡೆದುಕೊಂಡಿರುವಪೊಲೀಸರು, ಮುಂದಿನ ತನಿಖೆ ಕೈಗೊಂಡಿದ್ದಾರೆ.ಟಿಪ್ಪರ್ ಹರಿದು ಪಾದಚಾರಿ ವೃದ್ಧ ಗಂಭೀರ