ಏಕತಾ ಫೌಂಡೇಶನ್ ಜನರ ಪರ ಕಾರ್ಯ ಶ್ಲಾಘನೀಯ
ಮಾಂಜರಿ 3: ಮಾಂಜರಿ ಗ್ರಾಮದ ಬದಿಗಿದ್ದ ಕೃಷ್ಣ ನದಿ ತಟದಲ್ಲಿರುವ ಘಾಟಗಳ ಮೇಲಿರುವ ಭಾರಿ ಪ್ರಮಾಣದ ಮಣ್ಣನ್ನು ತೆಗೆದು ಸಾರ್ವಜನಿಕರ ಸುವ್ಯವಸ್ಥೆಗೆ ಮಾಂಜರಿ ಗ್ರಾಮದ ಏಕತಾ ಸೋಸಿಯಲ್ ಫೌಂಡೇಶನ್ ಸದಸ್ಯರು ಅನುಕೂಲವನ್ನು ಮಾಡಿಕೊಡುತ್ತಿದ್ದಾರೆ.ಏಕತಾ ಫೌಂಡೇಶನ್ ಜನರ ಪರ ಕಾರ್ಯಕ್ಕೆ ನಾಗರಿಕರಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.
ಘಾಟಗಳ ಮೇಲಿರುವ ಮಣ್ಣನ್ನು ತೆಗೆದು ಸ್ವಚ್ಛತೆ ಕಾರ್ಯದಲ್ಲಿ ಸದಸ್ಯರು ತೋಡಗಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಕೃಷ್ಣ ನದಿಗೆ ಭಾರಿ ಪ್ರಮಾಣದ ಪ್ರವಾಹ ಬಂದೆರಗಿದ ಪರಿಣಾಮ ಕೃಷ್ಣಾ ನದಿಯ ಘಾಟಗಳ ಮೇಲೆ ಭಾರಿ ಪ್ರಮಾಣದಲ್ಲಿ ಮಣ್ಣು ಮತ್ತು ಉಸುಕು ಸಂಗ್ರಹವಾಗಿ ಸಾರ್ವಜನಿಕರು ಬಹಳಷ್ಟು ಅನಾನುಕೂಲವಾಗಿತ್ತು. ಈ ಸಮಸ್ಯೆಯನ್ನು ಅರಿತು ವಾರದಲ್ಲಿ ಎರಡು ದಿನ ಸ್ವಚ್ಛತೆಗೆ ಮುಂದಾಗಲಿದ್ದೇವೆ, ಇದರ ಜೊತೆಗೆ ಸ್ಮಶಾನಗಳನ್ನು ಸಹ ಶುಚಿಗೊಳಿಸಲಿದ್ದೇವೆ ಎಂದು ಫೌಂಡೇಶನ್ ಅಧ್ಯಕ್ಷ ದಿಲೀಪ ಪವಾರ ತಿಳಿಸಿದ್ದಾರೆ.
ಡಾ.ವಿಜಯ ಕುಮಾರ ಉಪಾದ್ಯೆ, ಅಮರಯಾದವ, ಸುರೇಶ ಮಾಂಗಲೆಕರ, ಸಂಜಯ ನಾಂದ್ರೆ, ಸಚಿನ ಮಾನೆ, ದೀಪಕ ಟೋನಪೆ, ಫಾರುಕ ತಾಂಬೋಳಿ, ಮಹಾದೇವ ವಾಡಕರ, ಪ್ರಕಾಶ ಪಾಟೀಲ, ಬಾಬಾಹೇಬ ಖಟಕೋಳೆ, ನಾಯಕು ಚವ್ಹಾಣ, ವಿಶಾಲ ಕಮತೆ, ವಿನೋದ ಕಾಡಾಪೂರೆ, ರವಿ ಚವ್ಹಾಣ, ಚಂದ್ರಕಾಂತಕದಂ, ಮುಂತಾದವರು ಶ್ರಮಿಸಿದರು.