ಚಿಕ್ಕೋಡಿ

ಎಂಟು ಚೆಕ್ ಪೋಸ್ಟ್ಗಳಲ್ಲಿತೀವ್ರ ಕಟ್ಟೆಚ್ಚರ: ಯುಕೇಶಕುಮಾರ

ಎಂಟು ಚೆಕ್ ಪೋಸ್ಟ್ಗಳಲ್ಲಿತೀವ್ರ ಕಟ್ಟೆಚ್ಚರ: ಯುಕೇಶಕುಮಾರ
ಚಿಕ್ಕೋಡಿ: ಮಾಸ್ಕ ಧರಿಸಿದ ವ್ಯಕ್ತಿಗಳಿಗೆ ದಂಡ ಹಾಕಲು ಉಪವಿಭಾಗಾಧಿಕಾರಿ ಯುಕೇಶಕುಮಾರ ನೇತೃತ್ವದಲ್ಲಿ ಅಧಿಕಾರಿಗಳು ನಗರ

ಚಿಕ್ಕೋಡಿ 23: ನೆರೆಯ ಮಹಾರಾಷ್ಟ್ರ ದಲ್ಲಿ ಕೊರೊನಾ ಅಬ್ಬರದ ಹಿನ್ನೆಲೆಯಲ್ಲಿ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಎಂಟು ಚೆಕ್ ಪೋಸ್ಟ್‍ಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಯುಕೇಶಕುಮಾರ ಹೇಳಿದರು.

ಚಿಕ್ಕೋಡಿ ನಗರದಲ್ಲಿ ಮಾಸ್ಕ್ ಇಲ್ಲದ ವ್ಯಕ್ತಿಗಳಿಗೆ ದಂಡ ಹಾಕಲು ನಗರದ ವಿವಿಧ ಕಡೆಗಳಲ್ಲಿ ಸಂಚಾರ ಮಾಡಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.  

ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಚಿಕ್ಕೋಡಿಯ ಗಡಿಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.ಮಹಾರಾಷ್ಟ್ರದಿಂದ ಬರುವ ಜನರಿಗೆ ಆರ್ಟಿಪಿಎಲ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದೆ ಎಂದರು.

ಕೊರೊನಾ ನೆಗೆಟಿವ ರಿಪೋರ್ಟ ಇದ್ದವರಿಗೆ ಮಾತ್ರ ರಾಜ್ಯಕ್ಕೆ ಪ್ರವೇಶಿಸಲು ಅವಕಾಶವಿದೆ.ಹಾಗೂ ಚಿಕ್ಕೋಡಿಯ ಉಪವಿಭಾಗ ವ್ಯಾಪ್ತಿಯ 8 ಚೆಕಪೂಸ್ಟಗಳಲ್ಲಿ ಪೊಲೀಸ್ ಸಿಬ್ಬಂದಿಗಳು,ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಕಂದಾಯ ಇಲಾಖಾಧಿಕಾರಿಗಳನ್ನು ನೇಮಕಮಾಡಿ ತೀವ್ರಕಟ್ಟೆಚರವಹಿಸಲಾಗಿದೆ. ಕೆಲವೊಂದು ಜನರು ಕಳ್ಳಮಾರ್ಗವನ್ನು ಹಿಡಿದು ಕಾಲ್ನಡಿಗೆಯಲ್ಲಿ, ಬೈಕಮೂಲಕ ಗಡಿಪ್ರವೇಶಿಸುತ್ತಿದಾರೆ ಈ ಬಗ್ಗೆಯೂ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದರು.

ಸದ್ಯ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆ ಜನರು ಮಾಸ್ಕ್‍ಧರಿಸದೇ,ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಭಯವಿಲ್ಲದೆ ತಿರುಗುತ್ತಿದ್ದಾರೆ. ಮಾಸ್ಕ್ ಧರಿಸಿದ ವ್ಯಕ್ತಿಗಳಿಗೆ ದಂಡ ಹಾಕಲು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಮಂಗಳವಾರದಿಂದ ಈ ಪ್ರಕ್ರಿಯೆ ಆರಂಭವಾಗಿದೆ. ಸಾರ್ವಜನಿಕರು ಮಾಸ್ಕ ಇಲ್ಲದೇ ಹೊರಗೆ ಓಡಾಡುವಂತಿಲ್ಲ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಡಿವೈಎಸ್‍ಪಿ ಮನೋಜಕುಮಾರ ನಾಯಿಕ, ತಹಶೀಲ್ದಾರ ಪ್ರವೀಣ ಜೈನ್, ಸಿಪಿಐ ಆರ್‍ಆರ್ ಪಾಟೀಲ, ಮುಖ್ಯಾಧಿಕಾರಿ ಡಾ, ಸುಂದರ ರೋಗಿ, ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ, ಸಂತೋಷ ಕೊಣ್ಣೂರೆ ಮುಂತಾದವರು ಇದ್ದರು.

ಸುದ್ದಿ ಓದಿ