ಸಡಗರದ ಈದ್ ಮಿಲಾದ್ ಆಚರಣೆ
ಮುಂಡಗೋಡ: ಪಟ್ಟಣ ಮತ್ತು ಗ್ರಾಮೀಣ ಭಾಗಗಳಲ್ಲಿ ರವಿವಾರ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬವನ್ನು ಸಡಗರದಿಂದ ಆಚರಿಸಿದರು.
ಬೆಳಗ್ಗೆ ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿರುವ ಮಸೀದಿಯಿಂದ ಮುಸ್ಲಿಂ ಬಾಂಧವರು ಮೆರವಣಿಗೆ ಹೊರಟು ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಅಲಂಕರಿಸಿದ ಕಾರು ಮತ್ತು ಬೈಕ್ ಗಳು ಮೆರವಣಿಗೆಗೆ ಮೆರಗು ತಂದವು. ಮುಸ್ಲಿಂ ಬಾಂಧವರು ಎಲ್ಲರಿಗೂ ಸಿಹಿ ಹಂಚುತ್ತಾ ಒಬ್ಬರಿಗೊಬ್ಬರು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ತಾಲೂಕಿನ ಹುನಗುಂದ, ಇಂದೂರ, ಪಾಳಾ, ಮಳಗಿ, ಚವಡಳ್ಳಿ, ಚಿಗಳ್ಳಿ ಹಾಗೂ ಇನ್ನೂ ಅನೇಕ ಕಡೆಗಳಲ್ಲಿ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬವನ್ನು ಆಚರಿಸಿದರು.
ಸಿಪಿಆಯ್ ಎಸ್.ಎಸ್.ಸಿಮಾನಿ ನೇತೃತ್ವದಲ್ಲಿ ತಾಲೂಕಿನಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಏರಿ್ಡಸಲಾಗಿತ್ತು.