ಹರಪನಹಳ್ಳಿಯಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪನೆಗೆ ಪ್ರಯತ್ನ: ಜಿ.ಕರುಣಾಕರ ರೆಡ್ಡಿ
ಹರಪನಹಳ್ಳಿ 28: ಹರಪನಹಳ್ಳಿಯಲ್ಲಿ ಒಂದು ಬ್ಲಡ್ ಬ್ಯಾಂಕ್ ಸ್ಥಾಪನೆಗೆ ಅವಶ್ಯಕ ವಾಗಿ ಪ್ರಯತ್ನ ಮಾಡಲಾಗುವುದು ಎಂದು ಹರಪನಹಳ್ಳಿ ಶಾಸಕ ಜಿ.ಕರುಣಾಕರ ರೆಡ್ಡಿ ತಿಳಿಸಿದರು.
ಪಟ್ಟಣದ ಅಂಬ್ಲಿ ದೊಡ್ಡ ಭರಮಪ್ಪ ಪ್ರಥಮ ದರ್ಜೆಕಾಲೇ ಜಿನಲ್ಲಿ ಶನಿವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣಇಲಾ ಖೆ, ಎಡಿಬಿ ಕಾಲೇಜು, ಭಾರತೀಯ ವೈದ್ಯಕೀಯ ಸಂಘಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಅತಿ ಹಿಂದುಳಿದ ಹರಪನಹಳ್ಳಿ ತಾಲೂಕಿನ ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶ ದಿಂದ ಪಟ್ಟಣದಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪನೆ ಅವಶ್ಯಕವಾಗಿ ಮಾಡಬೇಕೆಂದು ರಕ್ತ ಅವಶ್ಯಕತೆ ಇದ್ದರೆ ದೂರದ ದಾವಣ ಗೆರೆ ಹೊಸಪೇಟೆ ಬಳ್ಳಾರಿಗೆ ಹೊಗಬೇಕಾದ ಪರಿಸ್ಥಿತಿ ಇರು ವುದರಿಂದ ಹರಪನಹಳ್ಳಯಲ್ಲಿ ಬ್ಲಡ್ ಬ್ಯಾಂಕ್ ಮಾಡುವು ದಾಗಿ ಶಾಸಕರು ತಿಳಿಸಿದರು.
ರಕ್ತ ಕೊಡುವುದರಿಂದ ಆರೋಗ್ಯ ಉತ್ತಮಗೊಳ್ಳುತ್ತದೆ, ದೇಶದ 135 ಕೋಟಿ ಜನಸಂಖ್ಯೆಗೆ 1.35 ಕೋಟಿ ಯುನಿಟ್ ರಕ್ತ ಸಂಗ್ರಹವಾಗಬೇಕು, ಆದರೆ 2 ಲಕ್ಷ ಯುನಿಟ್ ಕೊರತೆ ಬೀಳುತ್ತದೆ. ಕೋವಿಡ್ ಬಂದು ರಕ್ತದಾನ ಕಡಿಮೆಯಾಗಿದೆ ಎಂದ ಅವರು ಪ್ರತಿಯೊಬ್ಬರೂ ರಕ್ತವನ್ನು ದಾನ ಮಾಡಿ ಎಂದು ಅವರು ನುಡಿದರು.
ವೈದ್ಯಕೀಯ ಸಂಘದ ತಾಲೂಕು ಅಧ್ಯಕ್ಷ ಡಾ.ಮಹೇಶ ಕು ಮಾರ್ ಮಾತನಾಡಿ ರಕ್ತದಾನ ಸರ್ವಶ್ರೇಷ್ಠ ದಾನ, ಒಂದು ಬಾಟಲ್ ರಕ್ತವು ಮೂರು ಜನರ ಪ್ರಾಣ ಉಳಿಸುತ್ತದೆ, ಹೆಚ್ಚಿ ನ ಸಂಖ್ಯೆಯಲ್ಲಿ ಯುವಕರು ರಕ್ತದಾನ ಮಾಡಲು ಮುಂದೆ ಬರಬೇಕು, ಅತಿಹೆಚ್ಚು 40 ಕ್ಕೂ ಹೆಚ್ಚು ಬಾರಿ ರಕ್ತ ದಾನ ಮಾಡಿದ ಯುವಕರನ್ನು ಈ ವೇಳೆ ಶಾಸಕರು ಸನ್ಮಾನಿಸಿದರು.
ಪುರಸಭಾ ಅಧ್ಯಕ್ಷ ಮಂಜುನಾಥ ಇಜಂತಕರ್, ತಾಲೂಕು ವೈದ್ಯಾಧಿಕಾರಿ ಪಿ.ಕೆ.ವೆಂಕಟೇಶ, ವೃತ್ತ ನೀರೀಕ್ಷಕ ನಾಗರಾಜ ಎಂ. ಕಮ್ಮಾರ, ಎಡಿಬಿ ಕಾಲೇಜು ಅಧ್ಯಕ್ಷ ಅಕ್ಕಿ ಶಿವಕುಮಾರ, ಪ್ರಾಂಶುಪಾಲರು ಡಾ.ಮಲ್ಲಿಕಾ ರ್ಜು ನಗೌಡ, ಗೀರೀಶ, ಭುವನೇಶ್ವರಿ ಬಿ.ಹೆಚ್.ಒ ಗೌರಮ್ಮ, ತಾಲೂಕು ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ್, ಆರ್ ಲೋಕೇಶ್, ಹೆಚ್.ಎಂ.ಸಠೋಷ, ಪೂಜಾರ್ ಮಹೇಶ್, ರಾಗವೇಂದ್ರ ಶೆಟ್ಟಿ, ಯು.ಪಿ.ನಾಗರಾಜ ಜೈನ್, ಶಿರಗನಾಹಳ್ಳಿ ವಿಶ್ವನಾಥ, ಎಂ.ಪಿ.ನಾಯ್ಕ್, ಬಾಗಳಿ ಕೋಟ್ರೇಶಪ್ಪ ಹಾಗೂ ಇತರರು ಹಾಜರಿದ್ದರು.