ಶರಣ ಸಕ್ಕರೆ ಕರಡೀಶನವರ ಪುತ್ಥಳಿಯನ್ನು ಬಳ್ಳಾರಿಯಲ್ಲಿ ಸ್ಥಾಪಿಸಲಿ: ಬಸವರಾಜ
ಬಳ್ಳಾರಿ 15: ಸತ್ಕಾರ್ಯ ಪುರುಷ ಸಕ್ಕರೆ ಕರಡೀಶನವರ ಪುತ್ಥಳಿಯನ್ನು ಬಳ್ಳಾರಿಯ ರೈಲ್ವೆ ನಿಲ್ದಾಣದ ಮುಂದೆ ಸ್ಥಾಪಿಸಬೇಕೆಂದು ಕನರ್ಾಟಕ ಇತಿಹಾಸ ಅಕಾಡೆಮಿಯ ಬಳ್ಳಾರಿ ಜಿಲ್ಲಾಧ್ಯಕ್ಷ ಟಿ.ಹೆಚ್.ಎಂ. ಬಸವರಾಜ ರವರು ನ.14ರಂದು ಸಂಜೆ ಬಸವೇಶ್ವರ ನಗರದ ಸಂಗಮೇಶ್ವರ ದೇವಸ್ಥಾನದಲ್ಲಿ ಅಭಿನಯ ಕಲಾಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಹಮ್ಮಿಕೊಂಡ ಸತ್ಕಾರ್ಯ ಪುರುಷ ಸಕ್ಕರೆ ಕರಡೀಶ ನಾಟಕವನ್ನು ತಮಟೆ ಬಾರಿಸಿ ಉದ್ಘಾಟಿಸಿ ಮಾತನಾಡಿದರು.
ಸಕ್ಕರೆ ಕರಡೀಶನವರು 1805ರಲ್ಲಿ ಜನಿಸಿ ಸುಮಾರು 60 ವರ್ಷಗಳ ಕಾಲ ಬ್ರಿಟೀಷರ ಆಡಳಿತದಲ್ಲಿ ಸಮಾಜ ಸೇವೆ ಮಾಡಿ ಬಳ್ಳಾರಿಯನ್ನು ನಿಮರ್ಾಣ ಮಾಡಿದರು. 1800ನೇ ಇಸ್ವಿಯಲ್ಲಿ ಬಳ್ಳಾರಿ ಜಿಲ್ಲಾ 20 ತಾಲೂಕುಗಳನ್ನೊಂಡಿತು.
ಆಗ ಮಹಾ ತಪಸ್ವಿ ಮರಿಸ್ವಾಮಿಗಳು ಬಳ್ಳಾರಿಗೆ ಆಗಮಿಸಿ ಮರಿಸ್ವಾಮಿ ಮಠದಲ್ಲಿ ಉಳಿದುಕೊಂಡರು. ಅವರ ಪರಮ ಶಿಷ್ಯರಾಗಿದ್ದ ಸಕ್ಕರೆ ಕರಡೀಶರವರು ಅವರ ಮಾರ್ಗದರ್ಶನದಲ್ಲಿ ಸಮಾಜ ಸೇವೆಯನ್ನು ಮುಂದುವರೆಸಿ ವ್ಯಾಪರದಲ್ಲಿ ತೊಡಗಿಕೊಂಡರು.
ಆಗಿನ ಜಿಲ್ಲಾಧಿಕಾರಿಯಾಗಿದ್ದ ಎ. ಮಿಲ್ಲರ್ ರವರೊಂದಿಗೆ ಆಪ್ತ ಸಂಬಂಧವನ್ನು ಹೊಂದಿ ಗುತ್ತಿಗೆದಾರರಾದರು. ನಂತರ 1858ರಲ್ಲಿ ಬಳ್ಳಾರಿ ರೈಲ್ವೆ ನಿಲ್ದಾಣ, ಜಿಲ್ಲಾಧಿಕಾರಿಗಳ ಕಛೇರಿ, ಕೋಟೆಯ ಅಂಚೆ ಕಛೇರಿ, ಟೌನ್ಹಾಲ್ ಇನ್ನೂ ಅನೇಕ ಕಟ್ಟಡಗಳನ್ನು ನಿರ್ಮಿಸಿದರು. 200ವರ್ಷಗಳ ಕಳೆದರೂ ಈ ಕಟ್ಟಡಗಳು ಗಟ್ಟಿ ಮುಟ್ಟಾಗಿರುವುದಕ್ಕೆ ಇವರ ಪ್ರಾಮಾಣಿಕತೆಯೆ ಸಾಕ್ಷಿ ಸರ್ಕಾರದ ಹಣವನ್ನು ಪ್ರಾಮಾಣೀಕವಾಗಿ ಬಳಸಿ ಉಳಿದ ಹಣವನ್ನು ಸರ್ಕಾರ ಕ್ಕೆ ವಾಪಸ್ಸು ಕೊಡುತ್ತಿದ್ದರು. ಇವರ ಅಧ್ವೀತಿಯ ಪ್ರಾಮಾಣೀಕತೆಯನ್ನು ಮೆಚ್ಚಿ ಬ್ರಿಟೀಷ್ ಸರ್ಕಾರ 1862ರಲ್ಲಿ ಇವರಿಗೆ ಗೌರವ ನ್ಯಾಯಾದೀಶ ಪಟ್ಟವನ್ನು ನೀಡಿ ಗೌರವಿಸಿತು. ಮತ್ತು 1866ರಲ್ಲಿ ಬಳ್ಳಾರಿಯಲ್ಲಿ ಬೀಕರ ಬರಗಾಲ ಬಂದಾಗ ಸಾವಿರಾರು ಬಡವರಿಗೆ ದೀನ ದಲಿತರಿಗೆ, ಅಂಗವಿಕಲರಿಗೆ, ಆಶ್ರಯ ನೀಡಿ ದಾಸೋಹದ ಸೇವೆ ಮಾಡಿದರು. ಇದನ್ನು ಮೆಚ್ಚಿ 1867ರಲ್ಲಿ ಬ್ರೀಟನ್ ರಾಣಿಯಿಂದ ರಾಯ್ಬಹದ್ದೂರು ಗೌರವ ಲಭಿಸಿತು. 1869ರಲ್ಲಿ ಶ್ರೀಗುರು ನಿವಾಸ ಸಂಸ್ಕೃತಿ ಪಾಠ ಶಾಲೆ ಮತ್ತು ಉಚಿತ ಪ್ರಸಾದ ನಿಲಯವನ್ನು ಸ್ಥಾಪಿಸಿದರು. ಇವರ ಸಂಸ್ಕೃತ ಪಾಠಶಾಲೆಯಲ್ಲಿ ಅನೇಕ ಜಗದ್ಗುರುಗಳು, ಸ್ವಾಮೀಜಿಗಳು, ವಿದ್ಯಾರ್ಥಿ ಗಳಾಗಿದ್ದರು. 1872ರಲ್ಲಿ ಮರಿಸ್ವಾಮಿಗಳು ಲಿಂಗೈಕ್ಯ ನಂತರ ಅವರ ಅಪ್ಪಣೆಯ ಮೇರೆಗೆ 1873ರಲ್ಲಿ ವಿಭೂತಿ ಕಣಜವನ್ನು ಮರಿಸ್ವಾಮಿ ಮಠದಲ್ಲಿ ನಿರ್ಮಾಣ ಮಾಡಿದರು. ಬಳ್ಳಾರಿಯನ್ನು ಮರಿಕಲ್ಯಾಣ ಮಾಡಿ ಬಳ್ಳಾರಿಯ ನಿರ್ಮಿತೃ ಆಗಿದ್ದರು ಎಂದರೆ ತಪ್ಪಾಗಲಿಕ್ಕಿಲ್ಲ. ಬಳ್ಳಾರಿಯಲ್ಲಿ ರಸ್ತೆಗಳನ್ನು, ಭಾವಿಗಳನ್ನು ಇನ್ನೂ ಅನೇಕ ಲೋಕೋಪಯೋಗಿ ಕೆಲಸ ಮಾಡಿ ತಾವು ದುಡಿದ ಹಣವನ್ನನೆಲ್ಲಾ ಬಡವರಿಗೆ ಮುಡುಪ್ಪಾಗಿಟ್ಟು, 1875ರಲ್ಲಿ ಲಿಂಗೈಕರಾದರು. ಇಂತವರ ಹೆಸರನ್ನು ಬಳ್ಳಾರಿಯಲ್ಲಿ ರಸ್ತೆಗೆ, ವೃತ್ತಕ್ಕೆ, ಬಡಾವಣೆಗೆ ನಾಮಕರಣ ಮಾಡಿ ಸಂಬಂಧಪಟ್ಟವರು ಇವರ ಪುತ್ಥಳಿಯನ್ನು ಬಳ್ಳಾರಿಯಲ್ಲಿ ಸ್ಥಾಪಿಸಬೇಕೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೆಚ್.ಎಂ.ಗುರುಸಿದ್ದಯ್ಯ ನವರು ಮಾತನಾಡಿತ್ತಾ ಇಂತಹ ಭಕ್ತಿ ಪೂರ್ವಕವಾದ ನಾಟಕಗಳು ಇನ್ನೂ ಹೆಚ್ಚಾಗಿ ಬರಬೇಕು ಮತ್ತು ಇವರ ಪುತ್ಥಳಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆಂದು ತಿಳಿಸಿದರು.
ಮುಖ್ಯ ಅತಿಥಿಗಳಾದ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಗಳಾದ ಬಿ.ವಿ.ಬಸವರಾಜ ಮಾತನಾಡುತ್ತಾ ಸಕ್ಕರೆ ಕರಡೀಶ ನಂತವರು ಬಳ್ಳಾರಿಯಲ್ಲಿ ಜನಿಸಿರುವುದು ನಮ್ಮ ಪುಣ್ಯ ಈ ನಾಟಕವನ್ನು ಪ್ರಸ್ತುತ ಪಡಿಸಿರುವ ಕೆ.ಜಗದೀಶ್ ಇವರಿಗೆ ಧನ್ಯವಾದಗಳನ್ನು ತಿಳಿಸಿದರು.
ಮಹಾನಗರ ಪಾಲಿಕೆಯ ಸದಸ್ಯ ಸುರೇಖಾ ಮಲ್ಲನಗೌಡರು ಮಾತನಾಡುತ್ತಾ ಹೆಣ್ಣು ಮಕ್ಕಳ ಮೇಲೆ ಅಪಾರ ಗೌರವನ್ನು ಇಟ್ಟಿದ್ದ ಸಕ್ಕರೆ ಕರಡೀಶ ರವರನ್ನು ನೆನೆದು ಇಂತಹ ಪ್ರಾತಃಸ್ಮರಣೀಯರ ನಾಟಕಗಳು ಹೆಚ್ಚು ಹೆಚ್ಚು ಬರಲೆಂದು ಆಶಿಸಿದರು.
ಸಮಾರಂಭದಲ್ಲಿ ಮಸೀದಿಪುರ ಸಿದ್ದರಾಮನಗೌಡ ಪರವಾಗಿ ಚಂದ್ರಶೇಖರ್ಗೌಡರು, ದಾನಿಗಳಾದ ಯಾಳ್ಪಿ ಮೇಟಿ ಪೊಂಪನಗೌಡರನ್ನು ಮತ್ತು ಕರ್ನಾಟಕ ಕಾರ್ಯನಿರತ ಪರ್ತಕರ್ತರ ಸಂಘದ ಜಿಲ್ಲಾಧ್ಯಕ್ಷ ಯಾಳ್ಪಿ ವಲಿಭಾಷರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ನಂತರ ಸತ್ಕಾರ್ಯ ಪುರುಷ ಸಕ್ಕರೆ ಕರಡೀಶ ನಾಟಕವನ್ನು ನುರಿತ ಕಲಾವಿದರು ಹಾಗೂ ಸಮೂಹ ನೃತ್ಯವನ್ನು ಎಂ.ಬಿ.ಚಾರುಲತಾ ಇವರ ತಂಡ ನೇರವೇರಿಸಿತು. ಆರಂಭದಲ್ಲಿ ನಾಟಕದ ರಚನೆ ಮತ್ತು ನಿರ್ದೇಶನ ಮಾಡಿದ ಅಭಿನಯ ಕಲಾಕೇಂದ್ರದ ಅಧ್ಯಕ್ಷರಾದ ಕೆ.ಜಗದೀಶ್ ರವರು ಸ್ವಾಗತಿಸಿ ವಂದಿಸಿದರು.
ಸುಷ್ಮಾ ಸಿ.ಡಿ. ಇವರು ಹಚ್ಚುಕಟ್ಟಾಗಿ ನಿರ್ವಹಿಸಿದರು. ವೇದಿಕೆಯ ಮೇಲೆ ಸಂಗಮೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಹಾವಿನಾಳ್ ಬಸವರಾಜರವರು ಉಪಸ್ಥಿತರಿದ್ದರು. ನೆರೆದಿದ್ದ ನೂರಾರು ಸಭಿಕರು ಸಮಾರಂಭವನ್ನು ಸಾಕ್ಷಿಕರಿಸಿದರು