ಬಳ್ಳಾರಿ

ಹಾಲ್‍ಟಿಕೇಟ್ ನೆಪದಲ್ಲಿ ಶೈಕ್ಷಣಿಕ ಲಾಬಿ

ಹಾಲ್‍ಟಿಕೇಟ್ ನೆಪದಲ್ಲಿ ಶೈಕ್ಷಣಿಕ ಲಾಬಿ

ಹಾಲ್‍ಟಿಕೇಟ್ ನೆಪದಲ್ಲಿ ಶೈಕ್ಷಣಿಕ ಲಾಬಿ

ಪರೀಕ್ಷೆ ಎದುರಿಸುವ ಮುನ್ನವೇ ಮಕ್ಕಳಲ್ಲಿ ಭಯ ತುಂಬಿದ ಶಿಕ್ಷಣ ಸಂಸ್ಥೆ

ರಾಜಾವಲಿ ಗಡ್ಡದ್

ಹಗರಿಬೊಮ್ಮನಹಳ್ಳಿ: ಪಟ್ಟಣದ ಶ್ರೀ ರೇಣುಕ ವಿದ್ಯಾ ಸಂಸ್ಥೆಯು ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಹಾಲ್ ಟಿಕೇಟ್ ನೀಡುವ ನೆಪದಲ್ಲಿ ಕೋವಿಡ್ ನಿಯಮ ಉಲ್ಲಂಘನೆ  ಮಾಡಿದ್ದಲ್ಲದೇ ಶೈಕ್ಷಣಿಕ ಲಾಬಿ ನಡೆಸಿರುವುದು ವಿಕ್‍ಎಂಡ್ ಲಾಕ್‍ಡೌನ್ ಜಾರಿಯಲ್ಲಿರುವ ಶನಿವಾರದಂದು ಸಂಸ್ಥೆಯ ಸಭಾಂಗಣದಲ್ಲಿ ನಡೆದಿದೆ. 

ವಾಟ್ಸಾಪ್ ಮೇಸೇಜ್ : ಶ್ರೀ ರೇಣುಕಾ, ಜ್ಞಾನದೀಪ,ಮತ್ತು ಜ್ಞಾನಜ್ಯೋತಿ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಶನಿವಾರದಂದು ಅರ್ಜೆಂಟಾಗಿ ಪ್ರವೇಶ ಪತ್ರ ಪರಿಶೀಲನೆ ಮತ್ತು ಪರೀಕ್ಷೆ ಸಂಬಂಧ ಇನ್ನಿತರ ವಿಷಯಗಳನ್ನು ತಿಳಿಸಲಾಗುವುದು ಹಾಗಾಗಿ ಯಾವುದೇ ಕಾರಣ ತಿಳಿಸದಂತೆ ಕಡ್ಡಾಯವಾಗಿ ರೇಣುಕಾ ಶಾಲಾ ಕ್ಯಾಂಪಸ್‍ಗೆ ಬೆಳೆಗ್ಗೆ 10ಗಂ.ಗೆ ಹಾಜರಾಗುವಂತೆ ಕಳಿಸಿದ ಮೇಸೇಜ್‍ಗೆ ವಿದ್ಯಾರ್ಥಿಗಳು ಹಾಜರ್.

ಎಸ್‍ಎಂಎಸ್ ಮಾಯ : ರಾಜ್ಯ ಸರಕಾರ ಕೋವಿಡ್ ವೈರಸ್‍ನಿಂದ ಬಚಾವಾಗಲು ಹತ್ತಾರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಬೊಬ್ಬೆ ಹಾಕುತ್ತಿದ್ದರೆ ಇತ್ತ ಮಕ್ಕಳ ಭವಿಷ್ಯದ ಜೊತೆ ಆಟವಾಡುತ್ತಾ ಸಂಸ್ಥೆ ಮಾತ್ರ ಎಸ್‍ಎಂಎಸ್ ಪಾಲಿಸದೇ ಸಭೆಯೊಂದನ್ನು ರಾಜಾರೋಷವಾಗಿ ನಡೆಸಿದ್ದನ್ನು ಕಾಣಬಹುದಾಗಿದೆ.

ಪಾಲಕರ ಪೀಕಲಾಟ : ತಾಲೂಕಿನ ಹೆಸರಾಂತ ವಿದ್ಯಾ ಸಂಸ್ಥೆಗಳಲ್ಲಿ ಶ್ರೀ ರೇಣುಕಾ ಸಂಸ್ಥೆಯು ಒಂದಾಗಿದೆ, ಈ ಶಾಲೆಯಲ್ಲಿ ವಿದ್ಯಾಭ್ಯಸ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸುಮಾರು 20/30ಕೀ.ಮಿ.ದೂರದಿಂದ ಮಕ್ಕಳು ಬರುತ್ತಾರೆ ಆದರೆ ಕರೊನಾ ಹೆಮ್ಮಾರಿಯ ಸರಪಳಿ ಕತ್ತರಿಸಲು ಹೇರಿದ ವಿಕ್ ಎಂಡ್ ಲಾಕ್‍ಡೌನ್ ಮೀರಿ ಶನಿವಾರ ಎರ್ಪಡಿಸಿದ್ದ ಕಾರ್ಯಕ್ರಮಕ್ಕೆ ಮಕ್ಕಳು ಟಂಟಂ, ಸೇರಿದಂತೆ ಆಟೋ,ಬೈಕ್ ಮೂಲಕ ಬಂದಿರುವುದು ಕಾಣಬಹುದಾಗಿದೆ.

ಇಂತಹ ಕಾರ್ಯಕ್ರಮ ಮೂರನೆ ಅಲೆಗೆ ದಾರಿಯಾಗದಿರಲಿ : ಜನ ಜೀವನವನ್ನೆ ಅಸ್ತವ್ಯೆಸ್ತ ಮಾಡಿದ ಕೊರೊನಾ ವೈರಸ್‍ನ ಮೂರನೇ ಅಲೆಯು ನೇರವಾಗಿ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ ಎಂಬ ತಜ್ಞರ ವರದಿ ಮುಂದಿಟ್ಟುಕೊಂಡು ಶಾಲೆ ಆಡಳಿತ ಮಂಡಳಿ ಸಹಕರಿಸದೇ ಇಂತಹ ಕಾರ್ಯಕ್ರಮ ನಡೆಸಿ ಮೂರನೇ ಅಲೆಗೆ ದಾರಿ ಮಾಡಿದಂತಾಗಿದೆ ಎಂಬುದರಲ್ಲಿ ಎರೆಡು ಮಾತಿಲ್ಲ.

ಎಸ್‍ಎಸ್‍ಎಲ್‍ಸಿ ಮುಗಿಯದವರಿಗೆ ಎನ್‍ಇಇಟಿ/ಜೆಇಇ/ಕೆಸಿಇಟಿ ಕೋಚಿಂಗ್ ನಮ್ಮ ಸಂಸ್ಥೆಯಲ್ಲಿಯೇ ನೀಡಲಾಗುವುದು, ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ನುರಿತ ತಜ್ಞರಿಂದ ಉಪನ್ಯಾಸ ನೀಡಲಾಗುವುದು ಎಂಬ ಭಯವನ್ನು ಸದ್ಯದ ಎಸ್‍ಎಸ್‍ಎಲ್‍ಸಿ ತರಗತಿಯ ತುದಿ ಹಂತದಲ್ಲಿರುವ ಮಕ್ಕಳಿಗೆ ನೀಡುತ್ತಿರುದು ನೋಡಿದರೆ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂಬುದರಲ್ಲಿ ಅನುಮನವೇ ಇಲ್ಲ.

ಮಕ್ಕಳಲ್ಲಿ ಆಸಕ್ತಿದಾಯಕ ವಿಷಯಗಳನ್ನು ತುಂಬುವುದು ಶಿಕ್ಷಣದಲ್ಲಿ ಸಾಮಾನ್ಯವಾದರೂ,ಇಂತಹ ಕೋವಿಡ್ ಲಾಕ್‍ಡೌನ್ ಅವಧಿಯಲ್ಲಿ ಇದರ ಅವಶ್ಯಕತೆಯಾದರೂ ಎನಿತ್ತು ಎಂಬ ಪ್ರಶ್ನೆ ಒಂದೆಡೆಯಾದರೆ ಇನ್ನು ಮಕ್ಕಳಲ್ಲಿ ಒದಿನ ಬಗ್ಗೆ ಭಯದ ವತವಾರಣವು ಸೃಷ್ಟಿಸಿದಂತೆ ಭಾಸವಾಗುತ್ತದೆ. ಹಾಲ್‍ಟಿಕೇಟ್ ನೀಡುವ ಕಾರ್ಯದಲ್ಲಿ ಮಕ್ಕಳ,ಮತ್ತು ಪೋಷಕರ ಮೇಲೆ ಒತ್ತಡ ಹೇರಲಾಗುತ್ತಿದೆಯೇ ಎಂಬುದನ್ನು ಇಲ್ಲಿನ ಶಿಕ್ಷಣ ಇಲಾಖೆ ಸಂಸ್ಥೆಯಿಂದ ಸ್ಫಷ್ಟೀಕರಣ ಕೇಳಬಹುದೇ ಎಂದು ಕಾದು ನೋಡಬೇಕಿದೆ.

ಬಿಇಒ ಪ್ರತಿಕ್ರಿಯೆ : ಪಟ್ಟಣದ ರೇಣುಕಾ ವಿದ್ಯಾ ಸಂಸ್ಥೆಯಲ್ಲಿ ಮಕ್ಕಳಿಗೆ ಯಾವುದೂ ಕಾರ್ಯಗಾರದಂತಹ ಕಾರ್ಯಕ್ರಮ ನಡೆಯುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ .ವಿಷಯ ಗಮನಕ್ಕೆ ಬಂದಿಲ್ಲಾ ಇಲಾಖೆಯ ಇಸಿಒ ಅವರನ್ನು ಸ್ಥಳಕ್ಕೆ ಕಳುಹಿಸಲಾಗಿದೆ, ವಿಷಯವನ್ನು ಡಿಡಿಪಿಐ ಅವರ ಗಮನಕ್ಕೆ ತರಲಾಗಿದೆ ಎಂದು ಹೇಳುತ್ತಾ ಲಾಕ್ ಡೌನ್‍ದಿನದ ವಿಷಯಕ್ಕೆ ಲಾಅಂಡ್ ಆರ್ಡರ್‍ಗೆ ಸಂಬಂಧಿಸಿದ್ದು ತಹಶಿಲ್ದಾರ್ ಹಾಗೂ ಪೋಲೀಸ್ ಇಲಾಖೆ ಹಮನಹರಿಸಬೇಕಿತ್ತು.






ಕೋಟ್

ಶ್ರೀ ರೇಣುಕಾ ವಿದ್ಯಾ ಸಂಸ್ಥೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಬಗ್ಗೆ ಮಾಹಿತಿ ಬಂದಿಲ್ಲ, ದಾಖಲಾತಿ ಸೇರಿದಂತೆ ಹಾಲ್‍ಟಿಕೇಟ್ ನೀಡುವ ಕಾರ್ಯವಿದ್ದರು, ವೀಕ್ ಎಂಡ್ ಲಾಕ್‍ಡೌನ್ ಜಾರಿಯಲ್ಲಿದೆ ಇಂತಹ ಕಾರ್ಯಕ್ರಮ ನಡೆಸುವುದು ಕಾನೂನು ಬಾಹಿರವಾಗಿದೆ ಇದರ ಬಗ್ಗೆ ವಿವರಣೆ ಪಡೆದು ಕ್ರಮ ಜರುಗಿಸಲಾಗುವುದು.

ಶರಣಮ್ಮ

ತಹಶಿಲ್ದಾರರು, ಹಗರಿಬೊಮ್ಮನಹಳ್ಳಿ.

ಸುದ್ದಿ ಓದಿ