ಜಮಖಂಡಿ

ಪ್ರತಿಯೊಬ್ಬರೂ ಉಪಾಧ್ಯಾಯ ಅವರ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು

ಪ್ರತಿಯೊಬ್ಬರೂ ಉಪಾಧ್ಯಾಯ ಅವರ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು

ಲೋಕದರ್ಶನ ವರದಿ,

ಜಮಖಂಡಿ28: ದೀನ ದಯಾಳ ಅವರು ಸಾಕಷ್ಟು ಅಧ್ಯಯನ ಮಾಡಿ ಪ್ರಸ್ತುತ ಪಡಿಸಿದ ಏಕಾತ್ಮ ಮಾನವ ತತ್ವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ. ಶಿಸ್ತಿಗೆ ಹೆಸರಾಗಿದ್ದ ಪಂಡಿತ್ ದೀನ ದಯಾಳ ಉಪಾಧ್ಯಾಯ ಅವರ ಆದರ್ಶವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ  ಏರ್ಪಡಿಸಿದ್ದ ಪಂಡಿತ್ ದೀನ ದಯಾಳ ಉಪಾಧ್ಯಾಯರ ಭಾವಚಿತ್ರಕ್ಕೆ ಪೂಜೆ ಸಲಿಸಿ ಮಾತನಾಡಿದ ಅವರು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಧಿಕಾರದಲ್ಲಿರುವವರು ಜನಹಿತದ ಕೆಲಸಗಳನ್ನು ಮಾಡಬೇಕು. ಆಧುನಿಕ ತಂತ್ರಜ್ಞಾನವನ್ನು ಸ್ವಾಗತಿಸಿ, ಭಾರತೀಯ ಅಗತ್ಯಗಳಿಗೆ ತಕ್ಕಂತೆ ಅಳವಡಿಸಿಕೊಳ್ಳಬೇಕೆಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಏಗಪ್ಪ ಸವದಿ ಮಾತನಾಡಿ, ದೀನ ದಯಾಳ ಉಪಾಧ್ಯಾಯ ಸ್ವಯಂ ಸೇವಕ ಸಂಘದ ಶಿಕ್ಷಕರಾಗಿ ಅರ್ಹತೆ ಹೊಂದಿದ್ದ ವ್ಯಕ್ತಿಯಾಗಿದರು. ಅವರನ್ನು ಬೋಧನೆಗೆ ನೇಮಿಸಿಕೊಳ್ಳಲಿಲ್ಲ. ಶಿಕ್ಷಕ ವೃತ್ತಿ ಬದಲಾಗಿ ಅವರು 1942ರಿಂದ ಪೂರ್ಣ ಸಮಯದ ಕೆಲಸಕ್ಕೆ ತಮ್ಮನ್ನು ಅರ್ಪಿಸಿಕೊಂಡರು. ಅವರು ಮಾಸಿಕ ಪತ್ರಿಕೆ ರಾಷ್ಟ್ರಧರ್ಮ ವಾರಪತ್ರಿಕೆ ಪಾಂಚಜನ್ಯ ಆರಂಭಿಸಿದ್ದರು ಎಂದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ಅಜಯ ಕಡಪಟ್ಟಿ ಮಾತನಾಡಿ, ಬಸವರಾಜ ಕಲೂತಿ, ವಿಜಯಲಕ್ಷ್ಮಿ ಉಕುಮನಾಳ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ