ಲೇಖನಗಳು

ಹೆಣ್ಣು ಮಕ್ಕಳ ಓದು... ತಂದೆ ತಾಯಿಗೆ ಆಭಾರಿ

ಹೆಣ್ಣು ಮಕ್ಕಳ ಓದು... ತಂದೆ ತಾಯಿಗೆ ಆಭಾರಿ

ಓದು ಎಲ್ಲರಿಗೂ ಮುಖ್ಯ ಅದರಲ್ಲಿ ಹೆಣ್ಣು ಮಕ್ಕಳಿಗೆ ಓದು ಜೀವನ ರೂಪಿಸಿಕೊಳ್ಳುವ ಒಂದು ದೊಡ್ಡ ಸಾಧನೆ. ತಂದೆ ತಾಯಿಗೆ ಅದೊಂದು ಹೋರಾಟ...! ಮಕ್ಕಳ ಮೇಲಿನ ಕಾಳಜಿ ಅತಿಯಾದ ಪ್ರೀತಿಯಿಂದ ತಮ್ಮನ್ನು ತಾವು ಮರೆತು ಗದರಿಸಿ ಇದನ್ನೇ ಮಾಡು ಎಂದು ಹೇಳುವ ಕಾರ್ಯ ಅವರಿಗೆ ಮುದ ನೀಡುವ ನೀಡುವುದು.  

ಅದೊಂದು ಕಾಲವಿತ್ತು ಅನಾಗರಿಕರಿಗೆ ಹೆಣ್ಣು ಮಕ್ಕಳ ಕಲಿಕೆ ತಂದೆ ತಾಯಿಗೆ ಕುತ್ತು ಎನ್ನುವ ರೀತಿ, ಆದರೆ ಇಲ್ಲಿ ಒಬ್ಬ ತಂದೆ ಮಗಳಿಗೆ ಎನೋ ಒಂದು ದಾರಿ ತೊರಿಸುವ ಹರಸಾಹಸ..! ತಂದೆಯ ಗುರಿ ಮಗಳ ಗೆಲುವು, ಮಗಳಿಗೆ ತಂದೆಯ ಮುಂದೆ ಒಬ್ಬ ನೌಕರಸ್ತೆ ಎಂದೆನ್ನಿಸಿಕೊಳ್ಳುವುದು..! ಅಪ್ಪನಿಗೆ ನನ್ನನ್ನು ಟೀಚರ್ ಆಗಿ ನೋಡುವುದು ಆದರೆ ನನಗೆ ಮಾಸ್ಟರ್ ಡಿಗ್ರಿ ಮಾಡುವುದು ಆಸೆ..! ಆದರೆ ಯಾವ ಕೋರ್ಸ್‌ ನನಗೆ ಅರಿವೇ ಇರಲಿಲ್ಲ. ಅಂದ ಹಾಗೇ ನನಗೆ ಇನ್ನೊಂದು ಹುಚ್ಚು ಇರುತ್ತಿತ್ತು. ನಾನು ಲಾಯರ್ ಆಗೋದು,, ಅದೇನೋ ಅಪ್ಪನಿಗೆ ಅದು ಆಗಿ ಬರುತ್ತಿರಲಿಲ್ಲ. ನೀನು ಅದು ಬೇಡ ಎಂದು ಅವರಿಗೆ ಇಷ್ಟವಾದ ಕಾಲೇಜಿನಲ್ಲಿ ನನ್ನನ್ನು ಅಡ್ಮಿಷನ್ ಮಾಡಿಸಿದರು.  

ನಾನು ಒಬ್ಬ ಪತ್ರಿಕೋದ್ಯಮ ವಿದ್ಯಾರ್ಥಿನಿ, ಓದು ಹೊಸದು ಅರೆರೆ ಇದೇನು ಹೊಸದು ಎನ್ನುವಿರಾ ನಾನ ಹೇಳಿದ್ದು ಪತ್ರಿಕೋದ್ಯಮ ಎಂಬ ಪದ ನನಗೆ ಹೊಸದು, ನಾನು ಬಿಎ ವಿದ್ಯಾರ್ಥಿನಿ ರಾಜ್ಯಶಾಸ್ತ್ರ, ಇತಿಹಾಸ, ಸಮಾಜಶಾಸ್ತ್ರ ಇವು ನನ್ನ ವಿಷಯ ಒಬ್ಬರ ಬಗ್ಗೆ ಓದಿ ಅವರನ್ನು ರೊಲ್ ಮಾಡೇಲ್ ಮಾಡಿ ಅವರ ಹಾಗೆ ಬದುಕುವುದು ನನ್ನ ವಿಷಯ. ಅದರ ಹೊರತು ಒಂದು ಸುದ್ದಿ ಮಾಡುವುದು ಎಂದರೆ ನನಗೆ ಅದು ಹೊಸ ವಿಷಯ ಒಲ್ಲದ ಮನಸ್ಸಿನಲ್ಲಿ ಬಂದು ಕಲಿಯುವುದು..!  

ಅಂದು ಕಾಲೇಜಿಗೆ ಅಡ್ಮಿಷನ್ ಮಾಡುವಾಗ ನಮ್ಮ ಅಪ್ಪನಿಗೆ ಬಿ.ಇಡ್ ಅಡ್ಮಿಷನ್ ಮಾಡಿಸುವುದು ಆದರೆ ಅದರಲ್ಲಿ ಡಿಮೋಟಿವೇಷನ್ ಅಂತರಲ್ಲ ಆ ರೀತಿ ಒಬ್ಬ ಗುರು ನನ್ನ ಕಣ್ಣಿಗೆ ಬಿದ್ದರು. ನೋಡಮ್ಮ ಈ ವಿಷಯದಿಂದ ನಿನ್ನನ್ನು ಮನೆ ಜನರು ಮಾತ್ರ ಗುರುತಿಸುತ್ತಾರೆ ಆದರೆ ಈ ಪತ್ರಕೋದ್ಯಮ ವಿಷಯ ಕಲಿತರೆ ನಿನ್ನ ಜೀವನ ಬಂಗಾರ ಅವರ ಮಾತು ನನಗೆ ಎಲ್ಲೋ ಒಂದು ಕಡೆ ಖುಷಿ ಕೊಟ್ಟಿತು. ಮಗಳ ಉದ್ಧಾರ ಬಯಸುವ ಅಪ್ಪನಿಗೆ ಗುರುಗಳ ಮಾತು ಸರಿ ಎನ್ನಿಸಿತು.  

ಅದೇನೋ ಎರಡು ವರ್ಷ ಮುಗಿಸಿಯೇ ಬಿಡೋಣ ಎಂದು ಕಾಲೇಜ್ ಲೈಫ್ ಮುಗಿಸಿದೆ. ಇನ್ನೇನು ಕಾಲೇಜು ಮುಗಿಯಿತು ಜೀವನ ನಡೆಸಲು ಕೆಲಸ ಮಾಡಲೇಬೇಕು ಎಂದು ನನ್ನ ಗುರಿಯನ್ನು ಕೆಲಸ ಹುಡುಕುವುದರ ಕಡೆಗೆ ಸಾಗಿತ್ತು. ಕೆಲಸ ಸಿಗುವುದೇ ಇಲ್ಲವೇ ಎಂಬ ದುಗುಡ ನನ್ನಲ್ಲಿ ಮೂಡ ತೊಡಗಿತು. ನಾನು ಹುಡುಕುವ ಕೆಲಸ ರಿಪೋರ್ಟರ್ ಅದು ಸಿಗುವುದು ಅಸಾಧ್ಯ. ಪ್ರತಿಯೊಂದು ಕಡೆಯೂ ಹೇಳುವುದು ಒಂದೆ ಎಕ್ಸಿ-್ಪರಿಯನ್ಸ್‌ ಕಾಲೇಜು ಕಲಿತ ನಮಗೆ ಕೆಲಸ ಮಾಡುವ ಯಾವ ಅನುಭವ ಇರುತ್ತಿರಲಿಲ್ಲ. ಅಂದ ಹಾಗೇ ನಮ್ಮ ಅಪ್ಪನಿಗೆ ಎಲ್ಲಿಲ್ಲದ ಬೇಜಾರು ಮಗಳಿಗೆ ಕಲಿಸಿದೆ ಆದರೆ ಕೆಲಸ ಇಲ್ಲದೆ ಖಾಲಿ ಕೂರುವ ಹಾಗಾಯಿತು ಎಂದು.. 

ಒಂದು ದಿನ ಅಪ್ಪನಿಗೆ ಮಗಳು ಗೆಲ್ಲಲೇಬೇಕು ಸೋಲಬಾರದು ಎಂಬುದು ಅದೊಂದು ಯಕ್ಷಪ್ರಶ್ನೆಯಾಗಿ ಕಾಡತೊಡಗಿತು. ಹೇಗಾದರೂ ಮಾಡಿ ಸಿಕ್ಕಿದ ಕೆಲಸವನ್ನು ಮಾಡು ಮಗಳೇ ಯಾವುದು ಅಸಾಧ್ಯವಲ್ಲ ಎಂದು ಮಗಳಿಗೆ ಧೈರ್ಯ ಹೇಳಿದರು. ಎಷ್ಟೇ ಆಗಲಿ ಮಗಳ ಬೆಳವಣಿಗೆ ಅಪ್ಪನ ಕನಸಲ್ಲವೇ.. ಯಾವ ಕೆಲಸವು ಅಸಾಧ್ಯವಲ್ಲ ಮನಸ್ಸು ಮಾಡಿದರೆ ನೀನೆ ಕೆಲಸ ಕೊಡಿಸುವಂತ ಜೀವನ ನಿನ್ನದಾಗುವುದು ಎಂಬ ನುಡಿ ಮಾತು ಅಪ್ಪನದು. ನನಗೆ ಧೈರ್ಯ ಸಾಲದೆ ಅಪ್ಪನ ಮೇಲೆ ಅವಲಂಬಿತಳಾದೆ ಬರದ ಕೆಲಸ ನನಗೆ ಕುರುಕ್ಷೇತ್ರ ಯುದ್ಧದಂತೆ ಭಾಸ..! ಅಪ್ಪ ಹೇಳಿದ ಪ್ರತಿಯೊಂದು ಕೆಲಸ ಗೊತ್ತಿಲ್ಲದೇ ಮಾಡುವುದು ಕಿರಿಕಿರಿ ಎಂದು ಅಪ್ಪನಿಗೆ ಹೇಳಲು ಅಸಾಧ್ಯವೆನ್ನಿಸಿತು ಕಾರಣ ಅಪ್ಪನ ಮನಸ್ಸಿಗೆ ಬೇಜಾರು ಮಾಡುವುದು ಇಷ್ಟವಿರಲಿಲ್ಲ. 

ಆದರೆ ಅದೊಂದು ದಿನ ಗೊತ್ತಿಲ್ಲದ ಊರಿಗೆ ಬಂದು ಕೆಲಸ ಮಾಡಲು ಪ್ರಾರಂಭಿಸಿದೆ ಅಲ್ಲಿದ್ದ ಪ್ರತಿಯೊಬ್ಬರು ನೀನು ಕಲಿತಿದ್ದೆ ಬೇರೆ ಮಾಡುತ್ತಿರುವುದೇ ಬೇರೆ ನೀನು ಮಾಡುವ ಕೆಲಸ ನಿನ್ನ ಕಲಿಕೆ ಭಂಗ ಎನ್ನುವಂತೆ ಮಾತನಾಡಿದರು ಇದು ಸರಿ ಅಲ್ಲವೇ ಎಂದು ಅಪ್ಪನಿಗೆ ಹೇಳದೆ ಕೆಲಸ ಬಿಟ್ಟು ನಾನು ಕಲಿತ ವಿಷಯದ ಕೆಲಸ ಹುಡುಕುವ ಕಡೆಗೆ ಗಮನವಿಟ್ಟೆ ನನಗೆ ಅವಾಗ ಜೀವನದ ಮಹತ್ವ ತಿಳಿಯಿತು. ದುಡ್ಡು ಇದ್ದರೆ ಎಲ್ಲ. ಇಲ್ಲವಾದರೆ ಜೀವನ ವ್ಯರ್ಥ.. ಅಂದು ಅಪ್ಪ ಮತ್ತೆ ನಿನ್ನ ಊರಿಗೆ ಹಿಂತಿರುಗು ಎಂದಾಗ ಎಲ್ಲಿಲ್ಲದ ದುಃಖ ಅಪ್ಪ ಹೇಳಿದ ಮಾತು ನೋವಿನಿಂದ ಕಣ್ಣಿರಿನ ಮಳೆ ಸುರಿಸಿದೆ ಅದು ಅಪ್ಪನಿಗೂ ಬೇಜಾರು ಎನ್ನುವುದು ಅರಿಯದೆ ನಾನು ದುಃಖ ಮಾಡಿಕೊಂಡೆ ಎಂದು ಅನ್ನಿಸತೊಡಗಿತು.  

ನನ್ನನ್ನು ಕ್ಷಮಿಸಿ ಅಪ್ಪ ನಾನು ಮತ್ತೆ ಒಬ್ಬ ನೌಕರಸ್ಥೆಯಾಗಿ ಕಾಣಿಸಲು ಇಷ್ಟಪಡುತ್ತೇನೆ ಅಂದು ಕಷ್ಟಪಟ್ಟು ಕಲಿಸಿದ ನಿಮಗೆ ನಾನು ಒಬ್ಬ ಪತ್ರಕರ್ತೆಯಾಗಿ ಕಾಣಿಸುವೆ ಅಪ್ಪ...!  

ಪ್ರತಿಯೊಬ್ಬ ವಿದ್ಯಾರ್ಥಿಗೆ ತನ್ನದೇ ಆದ ಗುರಿ ಇರುತ್ತೇ ತಾನೋಬ್ಬಳು ಲಾಯರ್ ಆಗಬೇಕು, ಡಾಕ್ಟರ್ ಆಗಬೇಕು, ಪೋಲಿಸ್ ಆಗಬೇಕು ಎಂದು ಆದರೆ ತಂದೆ ತಾಯಿಯ ಒತ್ತಾಯಕ್ಕೆ ಒಳಪಡುತ್ತಾರೆ ಅದು ಅವರಿಗೆ ಬೇಸರ ಎನ್ನಿಸಬಹುದು ಆದರೆ ಅಪ್ಪ ಅಮ್ಮನಿಗೆ ಮಕ್ಕಳನ್ನು ತನ್ನ ಇಷ್ಟಪಟ್ಟಂತೆ ಬೆಳಿಸುವುದು ಇಷ್ಟ.. ಅವರಿಗೆ ಬೇಸರ ಉಂಟುಮಾಡದೆ ಜೀವನ ಸಾಗಿಸಿ ಗೆಳೆಯರೇ...  

- ಅಶ್ವಿನಿ ತಳವಾರ 

ಪತ್ರಿಕೋದ್ಯಮ ವಿದ್ಯಾರ್ಥಿನಿ 

- * * * - 


ಸುದ್ದಿ ಓದಿ