ವಿಜಯಪುರ

ಶಿಕ್ಷಣ ನಿಧಿ ರೂ. 1,56,516/- ಚೆಕ್ ವಿತರಣೆ

ಶಿಕ್ಷಣ ನಿಧಿ ರೂ. 1,56,516/- ಚೆಕ್ ವಿತರಣೆ


ವಿಜಯಪುರ 06: ದಿ. 05ರಂದು ಜಿಲ್ಲೆಯ ಪ್ರತಿಷ್ಠಿತ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ  ಶ್ರೀ ಶಿವಾಜಿ ಮಹಾರಾಜ ಕೋ-ಆಪ್‌. ಕ್ರೆಡಿಟ್ ಸೊಸಾಯಿಟಿ ಲಿ., ವಿಜಯಪುರ ಇದರ ಸನ್ 2024-25 ನೇ ಸಾಲಿನ ನಿವ್ವಳ ಲಾಭದಿಂದ ತಗೆದಿರಿಸಿದ್ದ ಸಹಕಾರಿ ಶಿಕ್ಷಣ ನಿಧಿ ರೂ. 1,56,516/- ಗಳ ಚೆಕ್ಕನ್ನು ಸಂಘದ ಅಧ್ಯಕ್ಷರಾದ ಶಂಕರ ಕನಸೆ ಇವರು ವಿಜಯಪುರ ಜಿಲ್ಲಾ ಸಹಕಾರಿ ಯುನಿಯನ್ ವಿಜಯಪುರ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ. ಎನ್‌. ಪಾರಗೊಂಡ ಇವರ ಮುಖಾಂತರ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ಇವರಿಗೆ ನೀಡಿದರು.  

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಸಂಜಯ ಜಂಬೂರೆ, ಆಡಳಿತ ಮಂಡಳಿ ಸದಸ್ಯರುಗಳಾದ ಮಹಾದೇವ ಪವಾರ, ಸರೋಜನಿ ನಿಕ್ಕಮ್, ಅಂಬುತಾಯಿ ಜಾಧವ, ಪ್ರವೀಣ ಬೋಡಕೆ, ಭಾರತ ದೇವಕುಳೆ, ರವಿ ಮಧಬಾವಿ, ವ್ಯವಸ್ಥಾಪಕರುಗಳಾದ ಸಂಜಯ ಜಾಧವ, ಅಂಬಾದಾಸ ಚವ್ಹಾಣ ಹಾಗೂ ವಿಠ್ಠಲ ಚವ್ಹಾಣ ಉಪಸ್ಥಿತರಿದ್ದರು. 


ಸುದ್ದಿ ಓದಿ