ಬಳ್ಳಾರಿ

ಮಕ್ಕಳಿಗೆ ಶಿಕ್ಷಣ ನೀಡಿ ಸ್ವಾವಲಂಬಿಗಳನ್ನಾಗಿಸಿ: ಕೂಡಲಗಿ

ಮಕ್ಕಳಿಗೆ ಶಿಕ್ಷಣ ನೀಡಿ ಸ್ವಾವಲಂಬಿಗಳನ್ನಾಗಿಸಿ: ಕೂಡಲಗಿ

ಸಿರುಗುಪ್ಪ 20: ಸವಿತಾ ಸಮಾಜ ಶೈಕ್ಷಣಿಕ ಸ್ವಾವಲಂಬಿ ಬದುಕಿಗೆ ಮಕ್ಕಳಿಗೆ ಶಿಕ್ಷಣ ಕೊಡಿಸಿ ಸರ್ಕಾರದ ಸೌಲಭ್ಯ ಪಡೆದು ಮುಖ್ಯ ವಾಹಿನಿಗೆ ತರಬೇಕು ಎಂದು ತಹಸೀಲ್ದಾರ್ ಎಸ್ ಬಿ ಕೂಡಲಗಿ ಹೇಳಿದರು 

ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಶಿಶು ಅಭಿವೃದ್ಧಿ ಯೋಜನಾಧಿ ಕಾರಿ ಸಭಾ ಭವನ ದಲ್ಲಿ ಕರ್ನಾಟಕ ಸರಕಾರ ತಾಲೂಕು ಆಡಳಿತ ತಾಲೂಕು ಪಂಚಾಯತ್ ಹಿಂದುಳಿದ ವರ್ಗಗಳ ಇಲಾಖೆ ಸಹಯೋಗದಲ್ಲಿ ಆಯೋಜಿಸಿದೆ ಸವಿತಾ ಮಹರ್ಷಿ ಜಯಂತಿ ಯ ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಶಾಸಕ ಎಂ ಎಸ್ ಸೋಮಲಿಂಗಪ್ಪ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಸವಿತಾ ಮಹರ್ಷಿ ಜನರ ಬದುಕಿಗೆ ಉನ್ನತ ದಾರಿ ತೋರಿಸಿದ ದಿವ್ಯ ಜ್ಙಾನಿ ಯಾಗಿದ್ದರು. ಅವರ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ಅಳವಡಿಸಿ ಕೊಳ್ಳಬೇಕೆಂದರು. 

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಎಂ ಎ ಗಾದಿಲಿಂಗಪ್ಪ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ಪ ಸುಬೇದಾರ ತಾಲೂಕು ಪಂಚಾಯತ್ ಉಪಾಧ್ಯಕ್ಷ ಶರಣಬಸವ ಜನಾಭಿಪ್ರಾಯ ಮುಖಂಡ ಎ ಅಬ್ದುಲ್ ನಬಿ ವಕೀಲ ಯು ವೆಂಕೋಬ ಎಂ ವೀರೇಶ ಸವಿತಾ ಸಮಾಜದ ಅಧ್ಯಕ್ಷ ರಾಘವೇಂದ್ರ ಸಮಾಜ ದವರು ಉಪಸ್ಥಿತ ರಿದ್ದರು.

ಸುದ್ದಿ ಓದಿ