ತಾಳಿಕೋಟಿ

ನೀರಾವರಿಯಿಂದಲೇ ರೈತರ ಆರ್ಥಿಕ ಪ್ರಗತಿ ಸಾಧ್ಯ : ಶಾಸಕ ಸೋಮನಗೌಡ

ನೀರಾವರಿಯಿಂದಲೇ ರೈತರ ಆರ್ಥಿಕ  ಪ್ರಗತಿ ಸಾಧ್ಯ : ಶಾಸಕ ಸೋಮನಗೌಡ

ತಾಳಿಕೋಟಿ: ನೀರಾವರಿ ಯೋಜನೆಗಳ ಅನುಷ್ಠಾನದಿಂದಲೇ ನಮ್ಮ ರೈತರ ಆರ್ಥಿಕ  ಸ್ಥಿತಿಯನ್ನು ಸುಧಾರಣೆ ಮಾಡಲು ಸಾಧ್ಯ ಇರುವದರಿಂದ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚು ಒತ್ತು ನೀಡಿ ಕೆಲಸಮಾಡುತ್ತಿದ್ದೇನೆ ಎಂದು ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಹೇಳಿದರು.

ತಾಳಿಕೋಟಿ ತಾಲೂಕಿನ ಬನ್ನಟ್ಟಿ ಪಿ.ಟಿ.ಗ್ರಾಮದಲ್ಲಿ ಬನ್ನಟ್ಟಿ ಪಿ.ಟಿ.-ಜಲಪೂರ ರೂ. 80 ಲಕ್ಷ ಮೊತ್ತದ ಮುಖ್ಯ ರಸ್ತೆ ಮರುಡಾಂಬರೀಕರಣ ಹಾಗೂ ರೂ. 50 ಲಕ್ಷ ಮೊತ್ತದ ಸಿ.ಸಿ. ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕೋವಿಡ್ ಕಾರಣದಿಂದಾಗಿ ನಿಮ್ಮ ಈ ಗ್ರಾಮಕ್ಕೆ ಕೆಲಸ ಹಾಕುವಲ್ಲಿ ವಿಳಂಬವಾಯಿತು. ಇಂದು ಸುಮಾರು 1.30 ಕೋಟಿ ಮೊತ್ತದ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಇದರ ಜೊತೆಗೆ ಈಗಾಗಲೆ ನಿಮ್ಮ ಬೇಡಿಕೆಗಳಾದ ಪ್ರಮುಖ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಹಾಗೂ ಒಂದು ಸಮುದಾಯ ಭವನಕ್ಕೆ ಅನುದಾನ ಬಿಡುಗಡೆಯಾಗಿದ್ದು ಶೀಘ್ರವೇ ಇದರ ಭೂಮಿಪೂಜೆ ನೆರವೇರಿಸುತ್ತೇನೆ. ಪ್ರಧಾನಿಯವರ ಕನಸಿನ ಯೋಜನೆಯಾದ ಜಲಜೀವನ್ ಮಿಷನ್ದ ಮೂಲಕ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು ಎಂದರು.

ಈ ಭಾಗದ ರೈತರ ಬಹುದಿನಗಳ ಬೇಡಿಕೆಯಾಗಿದ್ದ ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆಯ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು ಸಂಕ್ರಮಣದವರೆಗೆ ರೈತರ ಸುಮಾರು 55 ಸಾವಿರ ಎಕರೆ ಜಮೀನುಗಳಿಗೆ ನೀರು ಹರಿಯಲಿದೆ. ಇನ್ನೂಳಿದ ಭಾಗಕ್ಕಾಗಿ ವಿಜಯಪುರ ಮುಖ್ಯ ಕಾಲುವೆಗಾಗಿ ರೂ. 838 ಕೋಟಿ ಮಂಜೂರಾಗಿದ್ದು ಟೆಂಡರ್ ಹಂತದಲ್ಲಿದ್ದು, ಇದರಿಂದ ಸುಮಾರು 1.25 ಎಕರೆ ಜಮೀನು ನೀರಾವರಿಗೆ ಒಳಪಡಲಿದೆ.

ಈ ಮತಕ್ಷೇತ್ರ ದೊಡ್ಡದಾಗಿರುವದರಿಂದ ಹಂತ-ಹಂತವಾಗಿ ಅಭಿವೃದ್ಧಿಗಾಗಿ ಪ್ರಯತ್ನಿಸಲಾಗುವುದು. ಇದಕ್ಕೆ ನಿಮ್ಮೆಲ್ಲರ ಸಹಕಾರ ನನಗೆ ಬೇಕು ಎಂದು ಹೇಳಿದರು.

ಜಿಲ್ಲಾ ಉಪಾಧ್ಯಕ್ಷ ಪ್ರಭುಗೌಡ ಬಿರಾದಾರ (ಅಸ್ಕಿ) ಜಿಲ್ಲಾ ರೈತ ಮೋರ್ಚಾ  ಅಧ್ಯಕ್ಷ ಸಿದ್ದು ಬುಳ್ಳಾ, ಬೆಕಿನಾಳ ಪಿಕೆಪಿಎಸ್ ಅಧ್ಯಕ್ಷ ಸಜ್ಜನ ಸರ್ ಅವರು ಮಾತನಾಡಿ ಈ ಕ್ಷೇತ್ರದಲ್ಲಿ ಹಿಂದೆಂದೂ ಆಗದಂಥಹ ಅಭಿವೃದ್ಧಿಯ ಕಾರ್ಯಗಳು ಶಾಸಕ ಸೋಮನಗೌಡರ ಅವಧಿಯಲ್ಲಾಗಿವೆ. ಸುಮಾರು 2 ಸಾವಿರ ಕೋಟಿ ಅನುದಾನ ತಂದು ಕೆಲಸ ಮಾಡುತ್ತಿದ್ದಾರೆ. ಈ ಕ್ಷೇತ್ರ ಇನ್ನೂ ಅಭಿವೃದ್ಧಿ ಸಾಧಿಸಲು 2023ರಲ್ಲಿ ಮತ್ತೇ ಅವರನ್ನೇ ಆಯ್ಕೆ ಮಾಡುವ ಸಂಕಲ್ಪ ನಾವೆಲ್ಲರೂ ಮಾಡಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.

ಈ ಸಮಯದಲ್ಲಿ ಗ್ರಾಪಂ ಅಧ್ಯಕ್ಷ ಭೀಮನಗೌಡ ಸಿದರಡ್ಡಿ, ಗಣ್ಯರಾದ ಸೋಮನಗೌಡ ಪಾಟೀಲ, ಅಪ್ಪುಗೌಡ ಪಾಟೀಲ, ರಾಮರಾವ್ ಕುಲಕಣರ್ಿ, ಗ್ರಾಪಂ ಸದಸ್ಯ ಹುಸೇನಸಾಬ, ಪಿ.ಎಸ್.ಆಯ್. ರವಿ, ಎಇಇ ರಾಜಶೇಖರ ಪೂಜಾರಿ, ಅಭಿಯಂತರ ಪ್ರಫುಲ್ಲಕುಮಾರ, ಮತ್ತಿತರರು ಇದ್ದರು.

 

ಸುದ್ದಿ ಓದಿ