ಮುಂದಗೋಡ

ಅಪೌಷ್ಟಿಕತೆ ತಡೆಯಲು ಪೌಷ್ಟಿಯುಕ್ತ ಆಹಾರ ಸೇವಿಸಿ

ಅಪೌಷ್ಟಿಕತೆ ತಡೆಯಲು ಪೌಷ್ಟಿಯುಕ್ತ ಆಹಾರ ಸೇವಿಸಿ

ಮುಂಡಗೋಡ 22: ಎನ್.ಕೆ.ಜೆ.ಇ, ಸಿ.ಎಸ್ ಹಾಗೂ ಚೈಲ್ಡ್ ಫಂಡ್ ಇಂಡಿಯಾ ಆಶ್ರಯದಲ್ಲಿ ಪೌಷ್ಟಿಕ ಆಹಾರ ಮತ್ತು ಆರೋಗ್ಯ ದಿನ ಕಾರ್ಯಕ್ರಮವನ್ನು ಲೊಯೋಲ ವಿಕಾಸ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು. 

ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಶೈಲ್ ಪಟ್ಟಣಶೆಟ್ಟಿ ಉದ್ಘಾಟಿಸಿ ಮಾತನಾಡಿ, ರಕ್ತ ಹೀನತೆಯಿಂದಾಗುವ ತೊಂದರೆಗಳು ಹಾಗೂ ಆರೋಗ್ಯ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸುವ ಮೂಲಕ ಜಂತು ಹುಳು ನಿವಾರಣೆ, ಅಪೌಷ್ಟಿಕತೆ ಹಾಗೂ ರಕ್ತ ಹೀನತೆಯ ಕುರಿತು ಕಿರು ಚಿತ್ರಗಳ ವಿಡಿಯೋ ತೋರಿಸಿದರು. 

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಯೋಜಕಿ ಪೂರ್ಣಿಮಾ ದೊಡ್ಮನಿ, ಗರ್ಭಿಣಿ, ಬಾಣಂತಿ, ಮಕ್ಕಳು ಮತ್ತು ಹದಿಹರೆಯದವರಲ್ಲಿ ಅಪೌಷ್ಟಿಕತೆಯಿಂದ ರಕ್ತಹೀನತೆಯಿಂದಾಗುವ ಪರಿಣಾಮಗಳ ತಡೆಗಟ್ಟುವಲ್ಲಿ ನಾವು ತರಕಾರಿ, ಹಣ್ಣು ಹಂಪಲು, ದ್ವಿದಳ ಧಾನ್ಯ, ಮೀನು, ಮೊಟ್ಟೆ, ಹಾಲು ಹಾಗೂ ಪೌಷ್ಠಿಕ ಸತ್ವಯುತ ಆಹಾರವನ್ನು ಸೇವಿಸುತ್ತಾ ಶುದ್ಧ ಕುಡಿಯುವ ನೀರನ್ನು ಸೇವಿಸಿ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಂಡು ಆಗಾಗ ವೈದ್ಯರ ಸಲಹೆ ಸೂಚನೆ ಚಿಕಿತ್ಸೆ ಪಡೆದುಕೊಂಡು ರಕ್ತ ಹೀನತೆಯಿಂದ ಬಳಲುವುದನ್ನು ತಡೆಯಬಹುದು ಎಂದು ಹೇಳಿದರು.

ಲೊಯೋಲ ವಿಕಾಸ ಕೇಂದ್ರದ ಸಿಎಫ್‍ಆಯ್ ಸಂಯೋಜಕಿ ಸ್ಮೀತಾ ಎಮ್, ಕೆನಾನ್ ಫರ್ನಾಂಡಿಸ್ ಮುಂತಾದವರು ಉಪಸ್ಥಿತರಿದ್ದರು. ಅಂಗನವಾಡಿ ಶಿಕ್ಷಕಿಯರು ಮತ್ತು ಆಶಾ ಕಾರ್ಯಕರ್ತೆಯರು, ಮಕ್ಕಳು ಮತ್ತು ಮಕ್ಕಳ ಪಾಲಕರು ಆಗಮಿಸಿದ್ದರು. ಭಾಗವಹಿಸಿದ ಫಲಾನುಭವಿಗಳಿಗೆ ಮಾಸ್ಕ್, ಸ್ಯಾನಿಟೈಜರ್ ಹಾಗೂ ಹ್ಯಾಂಡ್ ವಾಷ್ ಬಾಟಲ್ ವಿತರಿಸಿ ಕ್ರಮಬದ್ಧವಾಗಿ ಉಪಯೋಗಿಸುವಂತೆ ತಿಳಿಸಲಾಯಿತು. ಸುಶೀಲಾ ಲಮಾಣಿ ಪ್ರಾರ್ಥಿಸಿದರು. ಭರಮಣ್ಣ ಚಕ್ರಸಾಲಿ ಸ್ವಾಗತಿಸಿದರು. ನಾಗರಾಜ ಬಾರ್ಕಿ ನಿರೂಪಿಸಿದರು. ಪಕ್ಕಿರೇಶ ಗೌಡಳ್ಳಿ ವಂದಿಸಿದರು.

ಸುದ್ದಿ ಓದಿ