ಇಎಸ್‌ಐಸಿ 100 ಹಾಸಿಗೆ ಆಸ್ಪತ್ರೆ ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸಿ
ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟ ಒತ್ತಾಯ
ಬಳ್ಳಾರಿ ಫೆ 21: ಇಎಸ್‌ಐಸಿ 100 ಹಾಸಿಗೆಯ ಆಸ್ಪತ್ರೆಯ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪ್ರಾರಂಭಿಸಬೇಕೆಂದು ತಿಪ್ಪೇಸ್ವಾಮಿ ಅವರು ಆಗ್ರಹಿಸಿದರು.
ನಗರದಲ್ಲಿ ಪತ್ರಿಕಾ ಭವನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂದು ಅವರು ಜಿಲ್ಲೆಗೆ ಇಎಸ್‌ಐಸಿ ಆಸ್ಪತ್ರೆ ನಿರ್ಮಾಣ ಮಾಡಲು ಭೂಮಿ ಮಂಜೂರಾಗಿರುತ್ತದೆ. ನಾವು ಸಹ ಈ ವಿಷಯದಲ್ಲಿ ಸುಮಾರು ಸತತವಾಗಿ ನಾಲ್ಕು ವರ್ಷಗಳಿಂದ ನೊಂದ ಕಾರ್ಮಿಕನಾಗಿ ಮತ್ತು ಕಾರ್ಮಿಕರ ಪರವಾಗಿ ಉಪವಾಸ ಸತ್ಯಾಗ್ರಹ ಕೈಗೊಂಡು ಹೋರಾಟ ಮಾಡುತ್ತಾ ಬಂದ ಫಲವಾಗಿ, 2017 ನೇ ಇಸ್ವಿಯಲ್ಲಿ ಆಸ್ಪತ್ರೆ ಮಂಜೂರಾಗಿ, ದಿ. 01.10.2021 ರಂದು ಇಎಸ್‌ಐಸಿ 100 ಹಾಸಿಗೆ ಆಸ್ಪತ್ರೆ ನಿರ್ಮಿಸಲು ಭೂಮಿ ಕೂಡ ಮಂಜೂರಾಗಿರುತ್ತದೆ. ಆದರೆ ಸದರಿ ಆಸ್ಪತ್ರೆಯನ್ನು ನಿರ್ಮಿಸಲು ಸುಮಾರು ರೂ.100 ಕೋಟಿ ಅನುದಾನ ಮಂಜೂರಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಪ್ರಗತಿಯಲ್ಲಿರುತ್ತದೆ. ಆದರೆ ಇದಕ್ಕೆ ಸಂಬಂಧಪಟ್ಟಂತೆ ಚುನಾಯಿತ ಕೇಂದ್ರ ಕಾರ್ಮಿಕ ಸಚಿವರು, ರಾಜ್ಯ ಕಾರ್ಮಿಕ ಸಚಿವರು, ಬಳ್ಳಾರಿ ಸಂಸದರು ಮತ್ತು ಬಳ್ಳಾರಿ ಜನ ಪ್ರತಿನಿಧಿಗಳು ಹಾಗೂ ಇಎಸ್‌ಐಸಿ, ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಪ್ರಯತ್ನ ನಿಧಾನಗತಿಯಲ್ಲಿರುತ್ತದೆ.
ಇದರಿಂದ ಸುಮಾರು 80 ಸಾವಿರ ಜನ ಕಾರ್ಮಿಕರು ಹಾಗೂ ಕುಟುಂಬ ವಾರಸುದಾರರು ಸೇರಿ ಒಟ್ಟು 5 ಲಕ್ಷ 80 ಸಾವಿರ ಕಾರ್ಮಿಕರಿದ್ದು, ಸದರಿ ಕಾರ್ಮಿಕರಿಂದ ಒಂದು ತಿಂಗಳಿಗೆ 2 ಕೋಟಿ 70 ಲಕ್ಷ ಹಣ ಸಂಗ್ರಹಣವಾಗುತ್ತಿದ್ದು, ಇಎಸ್‌ಐಸಿ ಅಡಿಯಲ್ಲಿ ಯಾವುದೇ ವೈದ್ಯಕೀಯ ಸೌಲಭ್ಯಗಳು ಸಿಗದಿರುವುದು ಖಂಡನೀಯವಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ತಿಪ್ಪೇಸ್ವಾಮಿ ಗಡ್ಡೆ, ಪ್ರಧಾನ ಕಾರ್ಯದರ್ಶಿ ಪವನ್ ಕುಮಾರ್ ಕೆ ಎ, ಹಾಗೂ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಮಿಕರ ಬೇಡಿಕೆಗಳು:
ತ್ವರಿತಗತಿಯಲ್ಲಿ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕು. (ಬಳ್ಳಾರಿ, ಹೊಸಪೇಟೆ, ಸಂಡೂರು, ಕೂಡ್ಲಿಗಿ, ಸಿರುಗುಪ್ಪ, ಹಗರಿಬೊಮ್ಮನಹಳ್ಳಿ, ಹಡಗಲಿ, ಕಂಪ್ಲಿ, ಹರಪನಹಳ್ಳಿ) ಜಿಲ್ಲೆಯಲ್ಲಿ ಕೇವಲ 4 ಡಿಸ್ಪೆನ್ಸರಿ (ಇಎಸ್‌ಐಸಿ ವೈದ್ಯಕೀಯ ಕೇಂದ್ರ) ಕೇಂದ್ರಗಳಿದ್ದು, ಮೂರು ಪ್ರಥಮ ಚಿಕಿತ್ಸೆ ಕೇಂದ್ರ ಮತ್ತು ಒಂದು ಖಾಸಗಿ ಮಲ್ಪಿಸೆಷಾಲಿಟಿ ಇದ್ದು, ಇಲ್ಲಿನ ಕಾರ್ಮಿಕರು ಯಥೇಚ್ಚವಾಗಿದ್ದು, ಆ ಕೇಂದ್ರಗಳು ಸಾಲುತ್ತಿಲ್ಲ. ಆಗಾಗಿ ತರಿತಗತಿಯಲ್ಲಿ ಪ್ರತಿ ತಾಲ್ಲೂಕಿಗೆ ಒಂದು ಅಥವಾ ಡಿಸೆನ್ನರಿ ಕೇಂದ್ರಗಳನ್ನು ಆರಂಭಿಸಬೇಕು. ಕಾರ್ಮಿಕರ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿದ ಬಿಲ್‌ಗಳು ತ್ವರಿತವಾಗಿ ಮೂರು ತಿಂಗಳೊಳಗಾಗಿ ಕ್ಲೇಮ್ ಆಗುವಂತೆ ಸೂಚಿಸಿದರು.