ಇಪಿಎಫ್ಒ: ಡಿಜಿಟಲ್ ಜೀವನ ಪ್ರಮಾಣಪತ್ರ ನವೀಕರೀಸುವಲ್ಲಿ ಯಶ್ವಸಿ
ಬಳ್ಳಾರಿ 05: ಇಪಿಎಸ್ ಮತ್ತು ಎಫ್ಪಿಎಸ್ ಪಿಂಚಣಿದಾರರ ಫಿಂಗರ್ ಪ್ರಿಂಟ್ ಮತ್ತು ಐರಿಸ್ ಮೂಲಕ ಡಿಜಿಟಲ್ ಲೈಫ್ ಸರ್ಟಿಫಿಕೇಟ್ಗಳನ್ನು ನವೀಕರಿಸಲು ಬಳ್ಳಾರಿಯ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ.
ಬಳ್ಳಾರಿ ಇಪಿಎಫ್ಒ ಪ್ರಾದೇಶಿಕ ಕಾರ್ಯಾಲಯವು “ಆಜಾದಿ ಕಾ ಅಮೃತ್ ಮಹೋತ್ಸವದ'' ಆಚರಣೆಯ ಅಂಗವಾಗಿ ಅಂಗವಿಕಲರು ಮತ್ತು ವೃದ್ಧಾಪ್ಯದಿಂದ ಅಶಕ್ತರಾದ ಪಿಂಚಣಿದಾರರಿಗೆ ಫೇಸ್ರೆಕಗ್ನಿಷನ್ ಮೂಲಕ ಡಿಜಿಟಲ್ ಜೀವನ ಪ್ರಮಾಣಪತ್ರವನ್ನು ನವೀಕರಿಸಿಕೊಳ್ಳಲು ವಿಶೇಷ ಆಂದೋಲನವನ್ನು ಜು. 18ರಿಂದ 31ರವರೆಗೆ ಆಯೋಜಿಸಿತ್ತು.
ಅಂಗವಿಕಲರು ಮತ್ತು ವೃದ್ಧಾಪ್ಯದಿಂದ ಅಶಕ್ತರಾದ ಪಿಂಚಣಿದಾರರಿಂದ ವಿನಂತಿಯನ್ನು ಸ್ವೀಕರಿಸಿದ ನಂತರ, ಬಳ್ಳಾರಿ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ ಅಧಿಕಾರಿಗಳು ಪಿಂಚಣಿದಾರರ ಜೀವನ್ ಪ್ರಮಾಣ್ ಮನೆಗೆ ಖುದ್ದಾಗಿ ಭೇಟಿ ಮಾಡಿ ಫೇಸ್ಕಗ್ನಿಷನ್ ತಂತ್ರಜ್ಞಾನದ ಮೂಲಕ ನವೀಕರಿಸಿಕೊಂಡು ಪಿಂಚಣಿಯನ್ನು ಬಿಡುಗಡೆಗೊಳಿಸಿದ್ದಾರೆ ಎಂದು ಎಂದು ಕ್ಷೇತ್ರಿಯ ಭವಿಷ್ಯನಿಧಿ ಆಯುಕ್ತರಾದ ಕೆ.ವೆಂಕಟ ಸುಬ್ಬಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಾದೇಶಿಕ ಪಿಎಫ್ ಕಮಿಷನರ್ ನೇತೃತ್ವದ ತಂಡದವರು ಬಳ್ಳಾರಿ, ಚಿತ್ರದುರ್ಗ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ನೆಲೆಸಿರುವ ವಿಶೇಷವಾಗಿ ಅಂಗವಿಕಲರು ಮತ್ತು ವೃದ್ಧಾಪ್ಯದಿಂದ ಅಶಕ್ತರಾದ ಪಿಂಚಣಿದಾರರ ಮುಖ ದೃಢೀಕರಣದ ಮೂಲಕ ಡಿಜಿಟಲ್ ಲೈಫ್ ಸರ್ಟಿಫಿಕೇಟ್ಗಳನ್ನು ನವೀಕರಿಸಿಕೊಂಡು ಇಪಿಎಸ್/ಎಫ್ಪಿಎಸ್ ಪಿಂಚಣಿದಾರರ ಪಿಂಚಣಿಯನ್ನು ಬಿಡುಗಡೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.