ರಾಷ್ಟ್ರೀಯ

ಪರಿಸರ ಸ್ನೇಹಿ ಕಟ್ಟಡಗಳಿಗೆ ತೆರಿಗೆ ವಿನಾಯಿತಿಗಳನ್ನು ಒದಗಿಸುವಂತೆ ಹಣಕಾಸು ಆಯೋಗಗಳು, ಸ್ಥಳೀಯ ಸಂಸ್ಥೆಗಳಿಗೆ ಉಪರಾಷ್ಟ್ರಪತಿ ಕರೆ

ಪರಿಸರ ಸ್ನೇಹಿ ಕಟ್ಟಡಗಳಿಗೆ ತೆರಿಗೆ ವಿನಾಯಿತಿಗಳನ್ನು ಒದಗಿಸುವಂತೆ ಹಣಕಾಸು ಆಯೋಗಗಳು, ಸ್ಥಳೀಯ ಸಂಸ್ಥೆಗಳಿಗೆ ಉಪರಾಷ್ಟ್ರಪತಿ ಕರೆ

ನವದೆಹಲಿ, ಡಿ 15: ತೆರಿಗೆ ವಿನಾಯಿತಿಗಳನ್ನು ಒದಗಿಸುವ ಮೂಲಕ  ಪರಿಸರ ಸ್ನೇಹಿ ಕಟ್ಟಡಗಳನ್ನು( ಹಸಿರು ಕಟ್ಟಡ) ಗಳನ್ನು ಉತ್ತೇಜಿಸುವಂತೆ ಹಣಕಾಸು ಆಯೋಗಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಉಪರಾಷ್ಟ್ರಪತಿ ಎಂ ವೆಂಕಯ್ಯನಾಯ್ಡು ಮನವಿ ಮಾಡಿದ್ದಾರೆ.ಹಸಿರು ಕಟ್ಟಡಗಳಿಗೆ ಏಕ ಗವಾಕ್ಷಿ ಒಪ್ಪಿಗೆ ಒದಗಿಸಲು ಎಲ್ಲಾ ರಾಜ್ಯಗಳು ಆನ್‌ಲೈನ್ ಪೋರ್ಟಲ್‌ಗಳನ್ನು ರೂಪಿಸಬೇಕು ಎಂದು ಉಪರಾಷ್ಟ್ರಪತಿ ಸಲಹೆ ಮಾಡಿದ್ದಾರೆ.  ಹೈದರಾಬಾದ್‌ನಿಂದ ಗೃಹ ಕೌನ್ಸಿಲ್ ಆಯೋಜಿಸಿದ್ದ 12 ನೇ ಗೃಹ (ಗ್ರೀನ್ ರೇಟಿಂಗ್ ಫಾರ್ ಇಂಟಿಗ್ರೆಟೆಡ್ ಹ್ಯಾಬಿಟೆಟ್ ಅಸೆಸ್ ಮೆಂಟ್)) ಶೃಂಗಸಭೆಯನ್ನು ವರ್ಚ್ಯುವಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಉಪರಾಷ್ಟ್ರಪತಿಯವರು, ಜಾಗತಿಕ ಹಸಿರು ಕಟ್ಟಡ ಆಂದೋಲನವನ್ನು ಮುನ್ನಡೆಸುವ ಸಾಮರ್ಥ್ಯ ಭಾರತಕ್ಕಿದೆ. ಹಸಿರು ಕಟ್ಟಡ ಪರಿಕಲ್ಪನೆಯನ್ನು ಸರ್ಕಾರ ಮತ್ತು ಖಾಸಗಿ ವಲಯವೆರಡೂ ಉತ್ತೇಜಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. ಹಸಿರು ಕಟ್ಟಡ ಪರಿಕಲ್ಪನೆಯ ಬಗ್ಗೆ ಜನರಲ್ಲಿ ಅರಿವಿನ ಕೊರತೆ ಇದೆ ಎಂದು ಗಮನ ಸೆಳೆದ ಅವರು, ಹಸಿರು ಮನೆಗಳನ್ನು ನಿರ್ಮಿಸುವುದರಿಂದ ಆಗುವ ಅನುಕೂಲಗಳ ಕುರಿತು ಸಮೂಹ ಮಾಧ್ಯಮ ಅಭಿಯಾನ ಆರಂಭಿಸಬೇಕಿದೆ.ಹಸಿರು ಕಟ್ಟಡಗಳ ಆಂದೋಲನ ಜನರ ಆಂದೋಲನವಾಗಬೇಕು ಎಂದು ಹೇಳಿದ್ದಾರೆ. ವಿಶ್ವ ಹಸಿರು ಕಟ್ಟಡ ಮಂಡಳಿಯ ಅಂಕಿ-ಅಂಶಗಳನ್ನು ಉಲ್ಲೇಖಿಸಿದ ಅವರು, ವಿಶ್ವದ ಇಂಗಾಲ ಡೈಆಕ್ಸೈಡ್  ಹೊರಸೂಸುವಿಕೆಯ ಶೇ 39 ರಷ್ಟು ಕಟ್ಟಡಗಳ ನಿರ್ಮಾಣ ಮತ್ತು ಕಾಮಗಾರಿಗಳಿಂದಲೇ ಆಗುತ್ತಿದೆ.  ಈ ನಿಟ್ಟಿನಲ್ಲಿ ಕಟ್ಟಡಗಳು ಪರಿಸರ ಸ್ನೇಹಿಯಾಗಬೇಕಿದೆ. ಕಟ್ಟಡಗಳು ಪರಿಸರ ಸ್ನೇಹಿ ಹಾಗೂ ಇಂಧನ ಮತ್ತು ಸಂಪನ್ಮೂಲ ಕಾರ್ಯಕ್ಷಮತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಭಾಗೀದಾರರು ಸಂಘಟಿತ ಪ್ರಯತ್ನಗಳು ನಡೆಸುವ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

  

ಸುದ್ದಿ ಓದಿ