ಡೆಂಗ್ಯೂ ಮುನ್ನೆಚ್ಚರಿಕೆ ಕ್ರಮವಾಗಿ ಓಷಧಿ ಸಿಂಪಡಣೆ
ಲೋಕದರ್ಶನ ವರದಿ
ಮುಂಡಗೋಡ:ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಡೆಂಗ್ಯೂ ಜ್ವರದ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾ.ಪಂ.ವತಿಯಿಂದ ರವಿವಾರ ಓಷಧಿ ಸಿಂಪಡಣೆ ಮಾಡಲಾಯಿತು.
ಗ್ರಾಮದ ಬೀದಿಗಳಲ್ಲಿನ ಚರಂಡಿಗಳನ್ನು ಸ್ವಚ್ಛ ಮಾಡಿಸಿ ಚರಂಡಿಗಳಿಗೆ ಮತ್ತು ನೀರು ನಿಲ್ಲುವ ಜಾಗಗಳಲ್ಲಿ ಬ್ಲೀಚಿಂಗ್ ಪೌಡರ್ ಸಿಂಪಡಣೆ ಮಾಡಲಾಯಿತು. ಡೆಂಗ್ಯೂ ಜ್ವರಕ್ಕೆ ಕಾರಣವಾದ ಸೊಳ್ಳೆಗಳ ನಿಯಂತ್ರಣಕ್ಕೆ ಇಲಾಖೆಯಿಂದ ನೀಡಿದ ಡೆಮೊಪಾಸ್ ಓಷಧಿ ಸಿಂಪಡಣೆ ಮಾಡಲಾಯಿತು. ಪ್ರತಿಯೊಬ್ಬರ ಮನೆಯಲ್ಲಿನ ನೀರಿನ ಟ್ಯಾಂಕ್ಗಳನ್ನು ಖಾಲಿ ಮಾಡಿಸಿ ಮತ್ತೆ ಬೇರೆ ನೀರು ತುಂಬುವಂತೆ ತಿಳಿಸಿ ಗ್ರಾಮಸ್ಥರಿಗೆ ಸ್ವಚ್ಛತೆ ಕಾಪಾಡುವಂತೆ ಜಾಗೃತಿ ಮೂಡಿಸಲಾಯಿತು.
ಈ ವೇಳೆ ಗ್ರಾ.ಪಂ.ಸದಸ್ಯ ರಮೇಶ ನೇಮಣ್ಣನವರ, ಸಿಬ್ಬಂದಿಗಳಾದ ವೀರಭದ್ರಯ್ಯ ಹಿರೇಮಠ, ನಾಗರಾಜ ಕೋಕಟೆ, ಸುಭಾಸ ನಾಣಪುರ, ರಾಜು ಹೊರಕೇರಿ, ನಾರಾಯಣ ಮುಗಳಿ, ಆಶಾ ಕಾರ್ಯಕರ್ತೆ ಪಾರ್ವತಿ ಪಾಟೀಲ ಹಾಗೂ ಮುಂತಾದವರು ಇದ್ದರು.