ಮನರಂಜನೆ

ಡ್ರಗ್ ಪ್ರಕರಣ : ಸಾಕ್ಷಿದಾರ ಕಿರಣ್ ಗೋಸಾವಿ ಬಂಧನ

ಡ್ರಗ್ ಪ್ರಕರಣ : ಸಾಕ್ಷಿದಾರ  ಕಿರಣ್ ಗೋಸಾವಿ ಬಂಧನ

ಮುಂಬೈ ಅ 28: ಆರ್ಯನ್ ಖಾನ್  ಡ್ರಗ್ಸ್ ಮಾಫಿಯಾ  ಪ್ರಕರಣದಲ್ಲಿ ಎನ್‌ಸಿಬಿಯ ಸ್ವತಂತ್ರ ಸಾಕ್ಷಿದಾರ  ಕಿರಣ್ ಗೋಸಾವಿಯ ಬಂಧನವನ್ನು ಪುಣೆ ಪೊಲೀಸರು ಖಚಿತಪಡಿಸಿದ್ದು , ಇದು ಹೊಸ ತಿರುವು  ಪಡೆಯಲಿದೆ ಎಂದೂ   ಹೇಳಲಾಗಿದೆ. 

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಸದ್ಯ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೋಲಿಸ್ ಮೂಲಗಳು ಹೇಳಿವೆ. 

ಮುಂಬೈ ಡ್ರಗ್ಸ್  ಪ್ರಕರಣದ ತನಿಖೆ ನಡೆಸುತ್ತಿರುವ ನಾರ್ಕೋಟಿಕ್ಸ್ ಏಜೆನ್ಸಿಯ ವಿವಾದಾತ್ಮಕ 'ಸ್ವತಂತ್ರ ಸಾಕ್ಷಿ' ಯನ್ನು ಪುಣೆಯಲ್ಲಿ ಬಂಧಿಸಲಾಗಿದೆ ಎನ್ನಲಾಗಿದೆ. ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಪೊಲೀಸ್ ಠಾಣೆಯಲ್ಲಿ ಶರಣಾಗುವುದಾಗಿ ಕಿರಣ್ ಗೋಸಾವಿ ಹೇಳಿಕೊಂಡ ಮೂರು ದಿನಗಳ ನಂತರ ಅವರನ್ನು ಬಂಧಿಸಲಾಗಿದೆ ಎನ್ನಲಾಗಿದೆ.ಅವರ  ವಿರುದ್ದ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದ್ದು  ಉತ್ತರಪ್ರದೇಶದ ಪೊಲೀಸರ ಮುಂದೆ  ಶರಣಾಗಲಿದ್ದಾರೆ ಎಂಬ ವದಂತಿ ಹಬ್ಬಿತ್ತು.   

ಸುದ್ದಿ ಓದಿ